ವರ್ಷಗಟ್ಟಲೇ ಪ್ರಬಾರಿ ಪೌರಾಯುಕ್ತರ ಆಡಳಿತದಲ್ಲಿದ್ದ ಗದಗ ಬೆಟಗೇರಿ ನಗರಸಭೆಗೆ ಪೌರಾಯುಕ್ತರನ್ನಾಗಿ ರಾಜಾರಾಮ ಶಿವಾಜಿ ಪವಾರ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದ್ದರಿಂದ ಅಂತು ಇಂತು ಗದಗ ಬೆಟಗೇರಿ ನಗರಸಭೆಗೆ ಪುಲ್ ಟೈಮ ಕಮಿಷನರ್ ಬಂದ್ರು ಎನ್ನುವಂತಾಗಿದೆ. ಪ್ರಸ್ತುತ ದಾಂಡೇಲಿ ನಗರಸಭೆ ಕಮಿಷನರಾಗಿ ಸೇವೆ ಸಲ್ಲಿಸುತ್ತಿರುವ ಕೆ.ಎಂ.ಎಸ್. ಶ್ರೇಣಿ-1 ಮುಖ್ಯಾಧಿಕಾರಿ ರಾಜಾರಾಮ ಶಿವಾಜಿ ಪವಾರ ಗದಗ ಬೆಟಗೇರಿ ನಗರಸಭೆ ಪೌರಾಯುಕ್ತರನ್ನಾಗಿ ನೇಮಕಗೊಳಿಸಿ ಸರ್ಕಾರದ ನಗರಾಭಿವೃದ್ಧಿ ಇಲಾಖೆ 23-7-2024ರಂದು ಆದೇಶ ಹೊರಡಿಸಿದೆ. ಈ ಹಿಂದೆ ಗದಗ ಬೆಟಗೇರಿ ನಗರಸಭೆಯ ಕಂದಾಯ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ರಾಜಾರಾಮ ಶಿವಾಜಿ ಪವಾರ ಉತ್ತಮ ಆಡಳಿತಕ್ಕೆ ಹೆಸರಾಗಿದ್ದರು. ಈಗ ಮತ್ತೆ ಗದಗ ಬೆಟಗೇರಿ ನಗರಸಭೆಗೆ ಪೌರಾಯುಕ್ತರಾಗಿ ಆಡಳಿತ ಸೇವೆ ಸಲ್ಲಿಸಲು ಆಗಮಿಸುತ್ತಿರುವ ರಾಜಾರಾಮ ಶಿವಾಜಿ ಪವಾರ ಅವರಿಂದ ನಗರಸಭೆ ಜಿಡ್ಡುಗಟ್ಟಿದ ಆಡಳಿತಕ್ಕೆ ಭೃಷ್ಟತೆಯ ಕಡಿವಾಣಕ್ಕೆ, ಫಾರ್ಮ ನಂಬರ 3 ಏಜೆಂಟರ್ ಹಾವಳಿಗೆ ಮೋಕ್ಷ ಸಿಗಬಹುದೆಂಬ ಆಶಾಭಾವನೆ ಅವಳನಗರದ ನಾಗರಿಕರು ವ್ಯಕ್ತಪಡಿಸುತ್ತಿದ್ದಾರೆ...
© ASK News Kannada. All Rights Reserved. Designed by AGScurate IT Solutions LLP