ಗದಗ ಬೆಟಗೇರಿ ನಗರಸಭೆ ಉಪಾಧ್ಯಕ್ಷೆ ಶ್ರೀಮತಿ ಸುನಂದಾ ಬಾಕಳೆ, ಮಾಜಿ ಉಪಾಧ್ಯಕ್ಷ ಪ್ರಕಾಶ ಬಾಕಳೆ ಮನೆಯಲ್ಲಿ ಗುರುವಾರ ಮಧ್ಯ ರಾತ್ರಿ ನಾಲ್ವರ ಬರ್ಬರ ಹತ್ಯೆಯಾದ ಘಟನೆ ಅವಳಿ ನಗರವನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ.. ಮನೆಯಲ್ಲಿ ಮಲಗಿದ್ದ ಒಂದೆ ಕುಟುಂಬದ ನಾಲ್ಕು ಜನರನ್ನು ಭೀಕರವಾಗಿ ಹತ್ಯೆ ಮಾಡಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆಂದು ಹೇಳಲಾಗುತ್ತಿದೆ. ಗದಗ ನಗರದ ದಾಸರ ಓಣಿಯಲ್ಲಿ ಈ ಘಟನೆ ನಡೆದಿದ್ದು ನಗರಸಭೆ ಉಪಾಧ್ಯಕ್ಷೆ ಸುನಂದಾ ಬಾಕಳೆ ಪುತ್ರ ಕಾರ್ತಿಕ್ ಬಾಕಳೆ (ವ.27) ಪರಶುರಾಮ (ವ.55) ಪತ್ನಿ ಲಕ್ಷ್ಮೀ (ವ.45) ಪುತ್ರಿ ಆಕಾಂಕ್ಷಾ (ವ.16 ) ಕೊಲೆಯಾದ ದುರ್ದೈವಿಗಳು. ಕೊಪ್ಪಳದಿಂದ ಪ್ರಕಾಶ ಬಾಕಳೆ ಮನೆಗೆ ಬಂದಿದ್ದ ಪರುಶುರಾಮ, ಲಕ್ಷ್ಮಿ, ಅಕಾಂಕ್ಷಾ ಮೊದಲನೇ ಮಹಡಿಯ ಕೊಣೆಯಲ್ಲಿ ಮಲಗಿದ್ದರೆಂದು ಹೇಳಲಾಗುತ್ತಿದೆ. ಏಪ್ರಿಲ್ 17 ರಂದು ಪ್ರಕಾಶ್ ಬಾಕಳೆ ಪುತ್ರ ಕಾರ್ತಿಕ್ ನ ಮದುವೆ ಫಿಕ್ಸ್ ಕಾರ್ಯಕ್ರಮಕ್ಕಾಗಿ ಆಗಮಿಸಿದ್ದ ಸಂಬಧಿಗಳು ಕೊಲೆಯಾಗಿದ್ದು ವಿಧಿಯ ಅಟ್ಟಹಾಸ ಎಂಬಂತಾಗಿದೆ. ಬಾಗಿಲು ಸದ್ದು ಕೇಳಿ ಅನುಮಾನಗೊಂಡು ಪೊಲೀಸರಿಗೆ ಫೋನ್ ಮಾಡಿದ ಕುಟುಂಬಸ್ಥರು. ಪೊಲೀಸರಿಗೆ ಫೋನ್ ಮಾಡುತ್ತದ್ದಂತೆಯೆ ದುಷ್ಕರ್ಮಿಗಳು ಎಸ್ಕೇಪ್ ಆದರೆಂದು ತಿಳಿದು ಬಂದಿದೆ. ಒಂದು ವೇಳೆ ಬಾಗಿಲು ತೆಗೆದಿದ್ರೆ ನಮ್ಮನ್ನು ಕೊಲೆ ಮಾಡುತ್ತಿದ್ದರೆಂದು ಮನೆ ಮಾಲೀಕ ಪ್ರಕಾಶ್ ಬಾಕಳೆ ಹೇಳಿದ್ದು ಇನ್ನಷ್ಟು ಭಯವನ್ನುಂಟು ಮಾಡಿದೆ ಪೋಲಿಸರು ಶ್ವಾನದಳ, ಫಾರಿನ್ ಸಿಕ್ ತಂಡಗಳಿಂದ ಇಂಚಿಂಚು ಪರಿಶೀಲನೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಎಸ್ಪಿ ಬಿ ಎಸ್ ನೇಮಗೌಡ, ಹೆಚ್ಚುವರಿ ಎಸ್ಪಿ ಎಂ ಬಿ ಸಂಕದ, ಡಿವೈಎಸ್ಪಿ, ಸಿಪಿಐ, ಪಿಎಸ್ ಐ ಸೇರಿ ಹಿರಿ ಕಿರಿಯ ಪೋಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. *ದುಷ್ಕರ್ಮಿಗಳ ಬಂದನಕ್ಕೆ ಜಾಲ. : S P..* ಈ ಘಟನೆಗೆ ಸಂಬಂಧಿಸಿ ನಿಖರವಾದ ಮಾಹಿತಿ ಸಿಕ್ಕಿಲ್ಲ ತನಿಖೆ ತೀವ್ರಗತಿಯಲ್ಲಿ ಸಾಗಿದ್ದು ದುಷ್ಕರ್ಮಿಗಳನ್ನು ತೀವ್ರವಾಗಿ ಪತ್ತೆ ಮಾಡಿ ಬಂದಿಸಲಾಗುವದೆಂದು ಎಸ್ಪಿ ಬಿ.ಎಸ್.ನೇಮಗೌಡ್ರ ತಿಳಿಸಿದ್ದಾರೆ. ಕೊಲೆಗೆ ಕಾರಣ ಏನು ಎತ್ತ ಎಂಬುದು ತಿಳಿದು ಬಂದಿಲ್ಲ...
© ASK News Kannada. All Rights Reserved. Designed by AGScurate IT Solutions LLP