ಗದಗ ಬೆಟಗೇರಿ ನಗರಸಭೆಯ 54 ವಕಾರ ಸಾಲ ಲೀಜ್ ಠರಾವು ಫೋರ್ಜರಿ ಸಹಿ FIR ಪ್ರಕರಣಕ್ಕೆ ಸಂಬಂಧಿಸಿದಂತೆ ನಗರಸಭೆ ಮಾಜಿ ಅಧ್ಯಕ್ಷೆ ಉಷಾ ದಾಸರ, ಸದಸ್ಯರಾದ ಸಿದ್ಲಿಂಗಪ್ಪ (ಅನೀಲ) ಮಲ್ಲಪ್ಪ ಅಬ್ಬಿಗೇರಿ, ಗೂಳಪ್ಪ ಮುಶಿಗೇರಿಗೆ ನಿರೀಕ್ಷಣಾ ಜಾಮೀನು ಸಿಕ್ಕಿದ್ದರಿಂದ ಈ ಮೂರು ಸದಸ್ಯರು ಒಂದಿಷ್ಟು ನಿಟ್ಟುಸಿರು ಬಿಡುವಂತಾಗಿದೆ ಎನ್ನಲಾಗುತ್ತಿದೆ. ಗದಗ ಜಿಲ್ಲಾ ನ್ಯಾಯಾಲಯ ಮಂಗಳವಾರ 3-12-2024ರಂದು ಮಾಜಿ ಅಧ್ಯಕ್ಷೆ ಉಷಾ ದಾಸರ, ಸದಸ್ಯರಾದ ಅನೀಲ (ಸಿದ್ಲಿಂಗಪ್ಪ) ಮಲ್ಲಪ್ಪ ಅಬ್ಬಿಗೇರಿ, ಗೂಳಪ್ಪ ಮುಶಿಗೇರಿಗೆ ನಿರೀಕ್ಷಣಾ ಜಾಮೀನು ಮಂಜೂರಾಗಿದೆ. ವಕಾರ ಸಾಲ ಲೀಜ್ ಠರಾವು ನಿರ್ಣಯಕ್ಕೆ ಸಂಬಂಧಿಸಿ ಈ ಹಿಂದಿನ ನಗರಸಭೆ ಪ್ರಭಾರಿ ಪೌರಾಯುಕ್ತರಾಗಿದ್ದ ವರಗಪ್ಪನವರು ತಮ್ಮ ಸಹಿ ಫೋರ್ಜರಿ ಮಾಡಲಾಗಿದೆ ಎಂದು ಗದಗ ಬೆಟಗೇರಿ ಬಡಾವಣೆ ಪೋಲಿಸ್ ಠಾಣೆಯಲ್ಲಿ ನೀಡಿದ ದೂರುನಿಂದಾಗಿ ಠಾಣೆಯಲ್ಲಿ FIR ದಾಖಲಾಗಿತ್ತು. ಈ FIR ಗೆ ತಡೆಯಾಜ್ಞೆ ಕೋರಿ ಹೈಕೋರ್ಟ್ ಮೆಟ್ಟಲೇರಿದ್ದ ಉಷಾ ದಾಸರ, ಅನಿಲ ಅಬ್ಬಗೇರಿ, ಗೂಳಪ್ಪ ಮುಶಿಗೇರಿ ತಡೆಯಾಜ್ಞೆ ಪಡೆಯುವಲ್ಲಿ ಯಶಸ್ಸಾಗಿದ್ದರು. ಆದರೆ ಇತ್ತಿಚೆಗೆ ಮತ್ತೆ ವಿಚಾರಣೆ ನಡೆದು ಈ ತಡೆಯಾಜ್ಞೆ ಮುಂದುವರೆಸಲು ನಿರಾಕರಿಸಿದ್ದ ಹೈಕೋರ್ಟ್ ತನಿಖೆ ನೆಡುಸವಂತೆ ತನಿಖಾಧಿಕಾರಿಗಳಿಗೆ ಅವಕಾಶ ನೀಡಿ ಆದೇಶಿಸಿತ್ತು. ಇದರಿಂದಾಗಿ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದ ಉಷಾ ದಾಸರ, ಅನಿಲ ಅಬ್ಬಗೇರಿ, ಗೂಳಪ್ಪ ಮುಶಿಗೇರಿ ನಿರೀಕ್ಷಣಾ ಜಾಮೀನಿಗಾಗಿ ತಮ್ಮ ನ್ಯಾಯವಾದಿಗಳ ಮೂಲಕ ಗದಗ ಜಿಲ್ಲಾ ನ್ಯಾಯಾಲಯಕ್ಕೆ ಮೊರೆ ಹೋಗಿದ್ದರು. ವಿಚಾರ ನಡೆದ ನಂತರ ಮಂಗಳವಾರ 3-12-2024ರಂದು ನಿರೀಕ್ಷಣಾ ಮಂಜೂರಾಗಿದೆ ಎಂದು ಗೂಳಪ್ಪ ಮುಶಿಗೇರಿ ಪರ ವಕಾಲತ್ತು ನಡೆಸಿದ ವಕೀಲರಾದ ಪ್ರಕಾಶ ಕಣಗಿನಹಾಳ ತಿಳಿದಿದ್ದಾರೆ. ಉಷಾ ದಾಸರ ಪರವಾಗಿ ವಕೀಲರಾದ M.I.ಹಿರೇಮನಿಪಾಟೀಲ, ಅನೀಲ ಅಬ್ಬಿಗೇರಿ ಪರವಾಗಿ ವಕೀಲರಾದ ವಿರೇಂದ್ರ ಶಿರೋಳ ಅವರು ವಾದ ಮಂಡಿಸಿದ್ದರು. ವಕಾರಸಾಲ ಲೀಜ್ ಠರಾವು ನಕಲಿ, ಫೋರ್ಜರಿ ಸಹಿ ಪ್ರಕರಣ ಇನ್ನೇನು ಎಂಬಂತಾಗಿದೆ.
© ASK News Kannada. All Rights Reserved. Designed by AGScurate IT Solutions LLP