ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ಬೆನ್ನಲ್ಲೆ ಕೈ ಕಮಲ ಪಕ್ಷದಲ್ಲಿ ರಾಜಕೀಯ ತಂತ್ರಗಾರಿಕೆ ಜೋರಾಗುತ್ತಿದೆ. ನಗರಸಭೆ ಆಡಳಿತ ಬಿಜೆಪಿ ತೆಕ್ಕೆಯಲ್ಲಿದ್ದರೂ ಸಹ ಜನಪರ ಆಡಳಿತದ ಬಿಜೆಪಿಯ ಕೆಲ ಸದಸ್ಯರು ಆಡಳಿತದ ವ್ಯವಸ್ಥೆಗೆ ಬೇಸರಗೊಂಡು ಪಕ್ಷದ ವಿರುದ್ಧವಾಗಿ, ಜನಪರ ಆಡಳಿತಕ್ಕಾಗಿ ಬೆಂಬಲಿಸಲು ಒಂದು ಹಂತದ ಚರ್ಚೆ ನಡೆಸಿದ್ದು ಈಗ ಕೈ ಕಮಲ ವಲಯದಲ್ಲಿ ಭಾರಿ ಕುತೂಹಲ ಕೆರಳಿಸಿದೆ. ಗದಗ ಬೆಟಗೇರಿ ನಗರಸಭೆಯ 9 ನೇ ವಾರ್ಡಿನಿಂದ ಆಯ್ಕೆಯಾಗಿರುವ ಚಂದ್ರು ಕರಿ ಸೋಮನಗೌಡ್ರು ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರೆ ತಾವು ಬೆಂಬಲಿಸುವುದಾಗಿ ಬಿಜೆಪಿಯ ಮೂರ್ನಾಲ್ಕು ಸದಸ್ಯರು ಪ್ರಥಮ ಸಭೆಯಲ್ಲಿಯೇ ಮಾತು ಕೊಟ್ಟಿದ್ದಾರೆಂಬ ಸುದ್ದಿ ಈಗ ದೊಡ್ಡ ಚರ್ಚೆಗೆ ಕಾರಣವಾಗಿದೆ. ಬಿಜೆಪಿ ಆಡಳಿತದಲ್ಲಿ ಸದಸ್ಯರನ್ನು ಪರಿಗಣಿಸದೆ ಇರುವುದು, ಅಭಿವೃದ್ಧಿಗೆ ಮಾನ್ಯತೆ ಕೊಡದೆ ಇರುವುದು, ಭೃಷ್ಟತೆ, ವಕಾರ ಸಾಲ ಪ್ರಕರಣ, ಪಕ್ಷಪಾತ, ಬಣ, ನಾಯಕರ ತಾತ್ಸಾರ, ಜಾತಿ, ಪಂಗಡ, ಕೆಲವರಿಗೆ ಮಣೆ ಹಾಕುತ್ತಿರುವುದು, ಫಾರ್ಮ ನಂಬರ 3 ಅವಾಂತರ, ನಿಯಂತ್ರಣವಿಲ್ಲದ ಆಡಳಿತ ವ್ಯವಸ್ಥೆ ಸೇರಿದಂತೆ ಅನೇಕ ಕಾರಣಗಳಿಂದಾಗಿ ಪಕ್ಷದಲ್ಲಿರಲು ಆಗುತ್ತಿಲ್ಲ ಎಂಬ ನೋವುಗಳನ್ನು ಕೈ-ಕಮಲ ಆಪ್ತ ಸದಸ್ಯರ ಸಭೆಯಲ್ಲಿ ನಗರಸಭೆ ಬಿಜೆಪಿ ಸದಸ್ಯರು ಬಿಚ್ಚಿಟ್ಟಿದ್ದು ಬಿಜೆಪಿ ವಲಯವನ್ನು ಬೆಚ್ಚಿಬೀಳಿಸಿದೆಯಲ್ಲದೆ ಪಕ್ಷದಲ್ಲಿ ಆತಂಕ ಸೃಷ್ಟಿಸಿದೆ ಎನ್ನಲಾಗುತ್ತಿದೆ. ತಮ್ಮ ವಾರ್ಡುಗಳ ಅಭಿವೃದ್ಧಿ, ಮತದಾರರಿಗೆ ಕೊಟ್ಟ ಮಾತು ಉಳಿಸಿಕೊಳ್ಳಲು, ನಗರಸಭೆಯಿಂದ ಜನಪರ ಆಡಳಿತ ಪಡೆದುಕೊಳ್ಳಲು ಚಂದ್ರು ಕರಿಸೋಮನಗೌಡ್ರಗೆ ತಾವು ಚುನಾವಣೆಯಲ್ಲಿ ಮತ ಹಾಕುವುದಾಗಿ ಬಿಜೆಪಿಯ ಮೂರ್ನಾಲ್ಕು ಸದಸ್ಯರು ಭರವಸೆ ನೀಡಿದ್ದು ಈಗ ಗುಟ್ಟಾಗಿ ಉಳಿದಿಲ್ಲ. ಬಿಜೆಪಿಯ ಮೂರ್ನಾಲ್ಕು ಸದಸ್ಯರ ಬೆಂಬಲದ ಭರವಸೆಯಿಂದಾಗಿ ಕಾಂಗ್ರೆಸ್ ಪಕ್ಷದಲ್ಲಿ ಹೊಸ ಸಂಚಲನ ಮೂಡಿಸಿರುವ ಜೊತೆಗೆ ಮತ್ತೆ ಕಾಂಗ್ರೆಸ್ ಆಡಳಿತದ ಆಶಾಭಾವನೆ ಮೂಡಿದೆ. ನಗರಸಭಾ ಸದಸ್ಯ ಚಂದ್ರು ಕರಿಸೋಮನಗೌಡ್ರಗೆ ಮಾತ್ರ ತಮ್ಮ ಬೆಂಬಲ ಎಂದು ಹೇಳಿದ್ದು ಕಾಂಗ್ರೆಸ್ ಪಕ್ಷ ಒಂದಿಷ್ಟು ಇಕ್ಕಟ್ಟಿಗೆ ಸಿಕ್ಕಂತಾಗಿದೆ ಎಂಬ ಚರ್ಚೆ ಕಾಣಲಾಗುತ್ತಿದ್ದರೂ ಸಹ ಯಾವುದೆ ಕಂಡಿಷನ್ ಇಲ್ಲದೆ ಬೆಂಬಲ ಕೊಡುತ್ತಿರುವಾಗ ಇದರ ಬಳಕೆ ಮಾಡಿಕೊಳ್ಳಲು ಕಾಂಗ್ರೆಸ್ ನಾಯಕರು ಉತ್ಸುಕರಾಗಿದ್ದಾರೆ ಎನ್ನಲಾಗುತ್ತಿದೆ. ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ಅಗಷ್ಟ 30ರೊಳಗೆ ನಡೆಸಬೇಕಾದ ಸಂದರ್ಭದಲ್ಲಿ ಬಿಜೆಪಿ, ಕಾಂಗ್ರೇಸ್ ಪಕ್ಷದಲ್ಲಿ ರಾಜಕೀಯ ರಣತಂತ್ರಗಳು ಜೋರಾಗಿದ್ದು ಕಾಣಲಾಗುತ್ತಿದೆ. ಈ ಬಗೆಗೆ ನಗರಸಭೆಯ 9ನೇ ವಾರ್ಡಿನ ಸದಸ್ಯರಾದ ಚಂದ್ರು ಕರಿಸೋನಗೌಡ್ರರನ್ನು ಆಸ್ಕ್ ನ್ಯೂಸ್ ಫೋನ ಮುಖಾಂತರ ಪ್ರಶ್ನಿಸಿದಾಗ ಸಭೆ ನಡೆದಿದ್ದು ನಿಜ, ಮೂರ್ನಾಲ್ಕು ಬಿಜೆಪಿ ಸದಸ್ಯರು ಭರವಸೆ ನೀಡಿದ್ದು ಸತ್ಯ ಆದರೆ ನಮ್ಮ ಪಕ್ಷದ ವರಿಷ್ಠರ ನಿರ್ಣಯಕ್ಕೆ ನಾನು ತಲೆ ಬಾಗುತ್ತೇನೆಂದು ಹೇಳಿದರಲ್ಲದೆ ಬಿಜೆಪಿಯ ಸದಸ್ಯರಲ್ಲಿಯೇ ಬಿಜೆಪಿ ಆಡಳಿತದ ಬೇಸರ ಹೆಚ್ಚಾಗಿದ್ದರಿಂದ ತೀವ್ರ ನೋವಿನಿಂದ ಈ ನಿರ್ಣಯಕ್ಕೆ ಬಂದಿದ್ದಾರೆ ಎಂಬುದಂತು ಸುಳ್ಳಲ್ಲ ಎಂದರು.
© ASK News Kannada. All Rights Reserved. Designed by AGScurate IT Solutions LLP