ಲೋಕಸಭಾ ಚುನಾವಣೆ ಹತ್ತಿರವಾಗುತ್ತಿರುವಂತೆ ಚುನಾವಣಾ ಅಭ್ಯರ್ಥಿಗಳ ಸಂಖ್ಯೆಯು ದಿನದಿಂದ ದಿನಕ್ಕೆ ಎಲ್ಲ ಪಕ್ಷಗಳಲ್ಲೂ ಹೆಚ್ಚಾಗುತ್ತಿರುವುದು ಪಕ್ಷದ ನಾಯಕರಿಗೆ ಹೆಡ್ಡೆಕ್ ಎಂಬಂತಾಗಿದೆ. ವಿಶೇಷವಾಗಿ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಟಿಕೇಟ್ ಆಕಾಂಕ್ಷಿಗಳು ಹೆಚ್ಚಾಗುತ್ತಿರುವುದು ಕರ್ನಾಟಕದಲ್ಲಿಯ ಕಾಂಗ್ರೆಸ್ ಸರ್ಕಾರದ ಪಂಚ್ ಗ್ಯಾರಂಟಿಗಳು ಕಾರಣ. ರಾಜ್ಯದಲ್ಲಿ ಒಟ್ಟು 28 ಲೋಕಸಭಾ ಕ್ಷೇತ್ರಗಳಿದ್ದು ಇದರಲ್ಲಿ 12 ಕ್ಷೇತ್ರ ಉತ್ತರ ಕರ್ನಾಟಕದಲ್ಲಿವೆ. ಈ 12 ಕ್ಷೇತ್ರದಲ್ಲಿ ಯಾಲಕ್ಕಿ ನಾಡು ಎಂತಲೇ ಕರೆಯಲ್ಪಡುವ ಹಾವೇರಿ ಕ್ಷೇತ್ರವು ಒಂದಾಗಿದೆ. ಈ ಕ್ಷೇತ್ರದಿಂದ ಸತತವಾಗಿ ಬಿಜೆಪಿ ಪಕ್ಷದಿಂದ 3 ಬಾರಿ ಆಯ್ಕೆಯಾಗರುವ ಹಾಲಿ ಸಂಸದ ಶಿವಕುಮಾರ ಉದಾಸಿಯವರು 2024ರ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ ಎಂದು ಘೋಷಣೆ ಮಾಡಿದ್ದು ಈ ಕ್ಷೇತ್ರದಲ್ಲಿ ಆಕಾಂಕ್ಷಿಗಳ ಪಟ್ಟಿ ಬೆಳೆಯುಲು ಇನ್ನೊಂದು ಕಾರಣ. ಗದಗ ಹಾವೇರಿ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಪಕ್ಷದ ಟಿಕೇಟಗಾಗಿ ಸಾಕಷ್ಟು ಆಕಾಂಕ್ಷಿಗಳು ಪೈಪೋಟಿ ನಡೆಸಿದ್ದಾರೆ. ಟಿಕೇಟ್ ಆಕಾಂಕ್ಷಿಗಳ ಪೈಪೋಟಿಯಲ್ಲಿ ಮಾಜಿ ಸಂಸದ, ಸಾತ್ವೀಕ ರಾಜಕಾರಣಿ ಐ.ಜಿ.ಸನದಿಯವರ ಪುತ್ರ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಯುವ ನಾಯಕ, ರಾಹುಲ್ ಗಾಂಧಿಯವರ ಆಪ್ತರಲ್ಲಿ ಒಬ್ಬರಾದ ಶಾಕೀರ ಸನದಿ ಕೂಡಾ ಪ್ರಬಲ ಆಕಾಂಕ್ಷಿ. 2022 ರಿಂದಲೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ಈಗಲೂ ಕಾರ್ಯ ನಿರ್ವಹಿಸುತ್ತಿರುವ ಶಾಕೀರ ಸನದಿ ಎಪಿಸಿಸಿ ಸದಸ್ಯರಾಗಿದ್ದಾರೆ. ಗುಜರಾತ್ ಮತ್ತು ಮಹಾರಾಷ್ಟ್ರ ಸಾಂಸ್ಥಿಕ ಚುನಾವಣೆ ನಡೆಸಲು ಎಐಸಿಸಿ, ಎಪಿಆರ್ ಓ ನೇಮಕರಾಗಿದ್ದಾರೆ. ನಾಗಾಲ್ಯಾಂಡ್, ಅರುಣಾಚಲ ಪ್ರದೇಶ, ಮಣಿಪುರ, ತ್ರಿಪುರ ಮತ್ತು ಆಂಧ್ರ ಪ್ರದೇಶ ರಾಜ್ಯಗಳಿಗೆ ಭಾರತೀಯ ಯುವ ಕಾಂಗ್ರೆಸ್ ಉಸ್ತುವಾರಿಯಾಗಿ ಯುವ ಕಾಂಗ್ರೆಸ್ ಬಲವರ್ಧನೆ ಮಾಡಿದ್ದಾರೆ. ಕಳೆದ ಎರಡು ದಶಕಗಳಿಂದ ಕಾಂಗ್ರೆಸ್ ಪಕ್ಷದ ಸಂಘಟನೆಗೆ ಶ್ರಮಿಸಿರುವ ಶಾಕೀರ ಸನದಿ ಯುವ ಕಾಂಗ್ರೆಸ್ ದಲ್ಲಿ ವಿವಿಧ ಹುದ್ದೆಗಳಿಗೆ ನೇಮಕಗೊಂಡು ಪಕ್ಷದ ಸಂಘಟನೆಗೆ ಶ್ರಮ ಹಾಕಿ ಯಶಸ್ವಿಯಾಗಿದ್ದಾರೆ. ವಿವಿಧ ರಾಜ್ಯಗಳಲಿ ನಡೆದ ಚುನಾವಣೆಗಳಿಗೆ ಕಾಂಗ್ರೆಸ್ ಪಕ್ಷದ ವೀಕ್ಷಕರಾಗಿ ಸಮರ್ಥವಾಗಿ ನಿರ್ವಹಿಸಿದ್ದು ಹೈಕಮಾಂಡ್ ಮೆಚ್ಚುಗೆಗೆ ಪಾತ್ರವಾಗಿದ್ದನ್ನು ಅರಿತ ಶಾಕೀರ ಸನದಿ ಆಪ್ತರು ಈ ಬಾರಿ ಶಾಕೀರಗೆ ಟಿಕೇಟ್ ಗ್ಯಾರಂಟಿ ಎಂದು ಹೇಳುತ್ತಿದ್ದಾರೆ. ಯುವ ಕಾಂಗ್ರೆಸ್ ಮೂಲಕ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೇರಿರುವ ಶಾಕೀರ ಸನದಿ ಕಾಂಗ್ರೆಸ್ ಹೈಕಮಾಂಡ್ ಜೊತೆ ಆತ್ಮೀಯ ಸಂಬಂಧವನ್ನಿಟ್ಟು ಕೊಂಡಿದ್ದಾರಲ್ಲೆ ರಾಹುಲ ಗಾಂಧಿಯವರ ವಿಶ್ವಾಸಿಕ ಯುವ ನಾಯಕರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ಅತ್ಯಂತ ಆತ್ಮೀಯತೆಯೊಂದಿಗೆ ಸರಳ ವ್ಯಕ್ತಿತ್ವದ ರಾಜಕಾರಣಿಯಾಗಿರುವ ಶಾಕೀರ ಸನದಿ ತಂದೆ ಐ.ಜಿ.ಸನದಿಯವರಂತೆ ಕಾಂಗ್ರೆಸ್ ಪಕ್ಷದಲ್ಲಿ ಮತ್ತು ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಸರ್ವಧರ್ಮಿಯರ ಜೊತೆಗೆ ಸ್ನೇಹವನ್ನು ಸಂಪಾದಿಸಿರುವ ಶಾಕೀರ ಸನದಿ ಎಲ್ಲರೊಳಗೆ ಒಂದಾಗಿ ರಾಜಕಾರಣದಲ್ಲಿ, ಜನ ಸೇವೆಯಲ್ಲಿ, ಕ್ಷೇತ್ರದ ಅಭಿವೃದ್ಧಿಯಲ್ಲಿ ಸಾಗುತ್ತಿರುವುದು ಹೈಕಮಾಂಡ್ ಇವರತ್ತ ಚಿತ್ತ ಹರಿಸುವಂತಾಗಿದೆ. 2024ರ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಗದಗ ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ಸ್ಪರ್ಧಿಸಲು ಶಾಕೀರ ಸನದಿ ಅವರ ಮೇಲೆ ಅವರ ಆಪ್ತರು ತೀವ್ರ ಒತ್ತಡ ಹಾಕುತ್ತಿರುವುದರಿಂದ ಈ ಬಾರಿ ಸ್ಪರ್ಧೆ ಮಾಡುವ ಇಂಗೀತವನ್ನು ಹೈಕಮಾಂಡ್ ಮುಂದೆ ವ್ಯಕ್ತಪಡಿಸಿದ್ದಾಗಿ ತಿಳಿದು ಬಂದಿದೆ. ಕಳೆದ ಬಾರಿ ಕೊನೆ ಘಳಿಗೆಯಲ್ಲಿ ಟಿಕೇಟ್ ಅವಕಾಶ ಕಳೆದುಕೊಂಡಿರುವ ಶಾಕೀರ ಸನದಿ ಈ ಬಾರಿ ತಮಗೆ ಟಿಕೇಟ್ ಕೊಡುವಂತೆ ಕಾಂಗ್ರೆಸ್ ಅಧಿನಾಯಕಿ ಶ್ರೀಮತಿ ಸೋನಿಯಾ, ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಮನವಿ ಸಲಿಸಿದ ಅರ್ಜಿಯಿಂದಾಗಿ ಕಾಂಗ್ರೆಸ್ ಟಿಕೇಟ್ ಆಕಾಂಕ್ಷಿಗಳ ಪಟ್ಟಿಯಲ್ಲಿ ಶಾಕೀರ ಸನದಿ ಹೆಸರು ಮುಂಚೂಣಿಯಲ್ಲಿ ಬಂದಿದೆ ಎಂದು ಚರ್ಚೆಗಳು ನಡೆದಿವೆ. ಕರ್ನಾಟಕದಲ್ಲಿ ಲೋಕಸಭೆಯ 2 ಕ್ಷೇತ್ರಗಳಲ್ಲಿ ಮಾತ್ರ ಮುಸ್ಲಿಮ ಅಭ್ಯರ್ಥಿಗಳಿಗೆ ಟಿಕೇಟ್ ಕೊಡುತ್ತಾ ಬಂದಿರುವ ಕಾಂಗ್ರೆಸ್ ಹೈಕಮಾಂಡ್ ಈ ಬಾರಿ ಮತ್ತೆ ಹಾವೇರಿ ಲೋಕಸಭೆಗೆ ಶಾಕೀರ ಸನದಿಯವರಿಗೆ ಟಿಕೇಟ್ ನೀಡುವ ಮೂಲಕ ಮುಸ್ಲಿಂ ವರ್ಗಕ್ಕೆ ಮಣೆ ಹಾಕುತ್ತಾ ಎಂಬ ಚರ್ಚೆಗಳು ಜೋರಾಗಿವೆ.
© ASK News Kannada. All Rights Reserved. Designed by AGScurate IT Solutions LLP