ಗದಗ, ನ.5 : ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ವೆಲ್ ಫೇರ್ ಫಂಡ್ ಟ್ರಸ್ಟ್ ಕಮೀಟಿಗೆ ನ್ಯಾಯವಾದಿ, ನೋಟರಿಗಳಾದ ಎಸ್.ಕೆ.ನದಾಫ ಅವರನ್ನು ನಾಮ ನಿರ್ದೇಶನಗೊಳಿಸಿ ಆದೇಶ ಹೊರಡಿಸಿದೆ. ಈಗಾಗಲೆ ಕರ್ನಾಟಕ ರಾಜ್ಯ ಕಾನೂನು ಸಂಸದೀಯ ಸುಧಾರಣೆ ಸಮಿತಿಯ ತಜ್ಞರ ಸಮಿತಿ ಸದಸ್ಯರಾಗಿ ಕಾರ್ಯ ನಿರ್ವಹಿಸುತ್ತಿರುವ ಎಸ್.ಕೆ.ನದಾಫ ಅವರು ಸರಕಾರದ ನೇಮಕದ ಆದೇಶದಿಂದಾಗಿ ಮತ್ತೊಂದು ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ತಮ್ಮ ಸರಳ ವ್ಯಕ್ತಿತ್ವದಿಂದಾಗಿ ಎಲ್ಲರ ಪ್ರೀತಿಗೆ ಪಾತ್ರರಾಗಿರುವ ಎಸ್.ಕೆ.ನದಾಫ್ ಅವರು ಗದಗ ಜಿಲ್ಲಾ ನ್ಯಾಯಾಲಯದಲ್ಲಿ ವಕೀಲರಾಗಿ, ನೋಟರಿಯಾಗಿ ವೃತ್ತಿಘನತೆಯೊಂದಿಗೆ ಜನಪ್ರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನ್ಯಾಯಾಂಗ ವ್ಯವಸ್ಥೆಗೆ ಸಂಬಂಧಿಸಿದಂತೆ ಅನೇಕ ಪುಸ್ತಕಗಳನ್ನು ರಚಿಸಿರುವ ಎಸ್.ಕೆ.ನದಾಫ್ ಅವರು ಸರಕಾರ ಮತ್ತು ಸಾರ್ವಜನಿಕ ಸೇವೆಯಲ್ಲಿ ಮಹತ್ತರ ಸಾಧಕರಾಗಿ ಕಾಣಿಸಿಕೊಂಡಿದ್ದಾರೆ. ಉತ್ತರ ಕರ್ನಾಟಕದಲ್ಲಿಯೇ ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ವೇಲ್ ಫೇರ ಟ್ರಸ್ಟ್ ಕಮೀಟಿಗೆ ರಾಜ್ಯ ಸರಕಾರದಿಂದ ನಾಮ ನಿರ್ದೇಶನಗೊಂಡ ನ್ಯಾಯವಾದಿ ಎಂಬ ಹೆಗ್ಗಳಿಕೆಗೆ ಎಸ್.ಕೆ.ನದಾಫ್ ಪಾತ್ರರಾಗಿದ್ದಾರೆ ಎಂಬ ಪ್ರಶಂಸೆ ಕೇಳಲಾಗುತ್ತಿದೆ. ಇವರ ಅವರ ಅವಧಿಯಲ್ಲಿ ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ವೆಲ್ ಫೇರ್ ಫಂಡ್ ಟ್ರಸ್ಟ್ ಕಮೀಟಿ ಇನ್ನಷ್ಟು ಗುರಿ ಸಾಧನೆಗೆ ಸಾಕ್ಷಿಯಾಗಲೆಂಬುದು ವಕೀಲರ ಸದಾಶಯ.
© ASK News Kannada. All Rights Reserved. Designed by AGScurate IT Solutions LLP