ಗದಗ ಬೆಟಗೇರಿ ನಗರಸಭೆ 2ನೇ ಅವಧಿಗೆ ಅಧ್ಯಕ್ಷ ಉಪಾಧ್ಯಕ್ಷ ಮೀಸಲಾತಿ ವಿರುದ್ಧ ಗದಗ ಬೆಟಗೇರಿ ನಗರಸಭೆ ಕಾಂಗ್ರೆಸ್ಸಿನ 1ನೇ ವಾರ್ಡಿನ ಸದಸ್ಯೆ ಶ್ರೀಮತಿ ಲಕ್ಷ್ಮೀ ಅನೀಲಕುಮಾರ ಸಿದ್ದಮ್ಮನಹಳ್ಳಿ ಹಾಗೂ 10ನೇ ವಾರ್ಡಿನ ಕಾಂಗ್ರೆಸ್ ಸದಸ್ಯ ಇಮ್ಮಿಯಾಜಅಹಮದ ಇಬ್ರಾಹಿಂಸಾಬ ಶಿರಹಟ್ಟಿ ಧಾರವಾಡ ಹೈಕೋರ್ಟ್ ಬೆಂಚ್ ಮೇಟ್ಟಿಲೇರಿದ್ದರು. ಗದಗ ಬೆಟಗೇರಿ ನಗರಸಭೆಯ 2ನೇ ಅವಧಿಗೆ ಸಂಬಂಧಿಸಿದಂತೆ ಅಧ್ಯಕ್ಷ ಸ್ಥಾನ ಸಾಮಾನ್ಯ (ಜನರಲ್) ವರ್ಗಕ್ಕೆ ಮತ್ತು ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ (ಜನರಲ್ ವುಮನ್) ಮೀಸಲಾತಿ ಪ್ರಕಟವಾಗಿದೆ. ಮೀಸಲಾತಿ ರೊಟೆಷನ್ ಸಮರ್ಪಕವಾಗಿ ಅನುಸರಿಸಿಲ್ಲವೆಂದು ಈಗಿನ ಮೀಸಲಾತಿ ವಿರುದ್ಧ ಸಿಡಿದೆದ್ದಿರುವ ಕಾಂಗ್ರೆಸ್ ಸದಸ್ಯರಾದ ಶ್ರೀಮತಿ ಲಕ್ಷ್ಮೀ ಅನೀಲಕುಮಾರ ಸಿದ್ದಮ್ಮನಹಳ್ಳಿ ಹಾಗೂ ಇಮ್ಮಿಯಾಜಅಹಮದ ಶಿರಹಟ್ಟಿಯವರು ಅಧ್ಯಕ್ಷ ಸ್ಥಾನವನ್ನು ಸಾಮಾನ್ಯ ಮಹಿಳೆಗೆ (GW)...? ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಎ(ಅ) ಪುರುಷ ವರ್ಗಕ್ಕೆ ಮೀಸಲಾತಿ ಕೊಡಬೇಕೆಂದು ಧಾರವಾಡ ಹೈಕೋರ್ಟ್ ಬೆಂಚ್ ದಲ್ಲಿ ದಿನಾಂಕ 28-8- 2024ರಂದು ಅರ್ಜಿ ಸಲ್ಲಿಸಿದ್ದು ಗುಟ್ಟಾಗಿ ಉಳಿದಿಲ್ಲ. ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ (GW)...? ಮೀಸಲಾತಿಬೇಕೆಂದು ನಗರಸಭೆಯ ಕಾಂಗ್ರೆಸ್ ಸದಸ್ಯೆ ಶ್ರೀಮತಿ ಲಕ್ಷ್ಮೀ ಅನೀಲಕುಮಾರ ಸಿದ್ದಮ್ಮನಹಳ್ಳಿ ಅರ್ಜಿ ಸಲ್ಲಿಸಿದ್ದರೆ ಉಪಾಧ್ಯಕ್ಷ ಸ್ಥಾನವನ್ನು ಹಿಂದುಳಿದ ವರ್ಗ ಎ(ಅ) ಪುರುಷ ವರ್ಗಕ್ಕೆ..?ಮೀಸಲಾತಿ ನಗರಸಭೆಯ ಕೊಡಬೇಕೆಂದು ಕಾಂಗ್ರೆಸ್ ಸದಸ್ಯ ಇಮ್ಮಿಯಾಜಅಹಮದ ಶಿರಹಟ್ಟಿಯವರು ಅರ್ಜಿ ಸಲ್ಲಿಸಿದ್ದಾರೆ. ಮೀಸಲಾತಿ ವಿರುದ್ಧ ಅರ್ಜಿ ಸಲ್ಲಿಸಿರುವ ನಗರಸಭೆಯ ಸದಸ್ಯರ ಅರ್ಜಿಗಳನ್ನು ಧಾರವಾಡ ಹೈಕೋರ್ಟ್ ಬೆಂಚ್ ದಿನಾಂಕ 29-8-2024 ಪ್ರಾಥಮಿಕ ವಿಚಾರಣೆ ನಡೆಸಿದ ನಂತರ ಅಂದಿನ ಧಾರವಾಡ ಹೈಕೋರ್ಟ್ ಬೆಂಚ್ ಘನವೆತ್ತ ನ್ಯಾಯಾಧೀಶರಾದ H.P.ಸಂದೇಶ ಅವರು ಹೆಚ್ಚಿನ ವಿಚಾರಣೆಗಾಗಿ 11-9-2024ಕ್ಕೆ ಮುಂದೂಡಿದ್ದರು. ನಂತರದಲ್ಲಿ ಮೊನ್ನೆ 8-11-2024 ಕೊನೆಯ ವಿಚಾರಣೆ ನಂತರ ಮುಂದಿನ ವಿಚಾರಣೆಗಾಗಿ 11-11-2024ಕ್ಕೆ ಮುಂದೂಡಲಾಗಿದೆ. ಅರ್ಜಿದಾರರ ಪರವಾಗಿ ಖ್ಯಾತ ನ್ಯಾಯವಾದಿ ಶ್ರೀ K.L.ಪಾಟೀಲರು ವಾದ ಮಂಡಿಸುತ್ತಿರುವುದಾಗಿ ತಿಳಿದು ಬಂದಿದೆ. ಇಂದು ಅಧ್ಯಕ್ಷ-ಉಪಾಧ್ಯಕ್ಷ ಮೀಸಲಾತಿ ವಿರುದ್ಧ ಅರ್ಜಿ ವಿಚಾರಣೆ ನಡೆಯಲಿರುವುದು ತೀವ್ರ ಕುತೂಹಲ ಕೆರಳಿಸಿದೆ. ಇವತ್ತಾದರು ಅಧ್ಯಕ್ಷ ಉಪಾಧ್ಯಕ್ಷ ಮೀಸಲಾತಿ ತಗಾದೆಗೆ ಮುಕ್ತಿ ಸಿಕ್ಕು ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲು ಅವಕಾಶ ಸಿಗುತ್ತಾ...? ಎಂಬ ಪ್ರಶ್ನೆ ಜೋರಾಗಿ ಚರ್ಚೆ ಆಗುತ್ತಿದೆ. ಗದಗ ಬೆಟಗೇರಿ ನಗರಸಭೆಯ 2ನೇ ಅವಧಿಯ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳಿಗೆ ನಡೆಯಬೇಕಾಗಿದ್ದ ಚುನಾವಣೆಗೆ ಹಿಡಿದ ಗ್ರಹಣಕ್ಕೆ ಇಂದು ಮೋಕ್ಷ ಸಿಗುತ್ತಾ...? ಎಂಬ ಪ್ರಶ್ನೆ ಕುತೂಹಲ ಕೆರಳಿಸಿದೆ.
© ASK News Kannada. All Rights Reserved. Designed by AGScurate IT Solutions LLP