ಹಾವೇರಿ (ಶಿಗ್ಗಾವಿ) ಸಿದ್ದರಾಮಣ್ಣ ನೀವು ವಾಲ್ಮೀಕಿ ಹಗರಣದಲ್ಲಿ 190 ಕೋಟಿ ನುಂಗಿಲ್ಲ 90 ಕೋಟಿ ನುಂಗಿದ್ದೇನೆ ಅಂತ ಹೇಳಿದ್ದೀರಿ. ಸಗಣಿ ಎಷ್ಟು ತಿಂದರೂ ಸಗಣಿಯೇ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವ್ಯಂಗ್ಯವಾಡಿದರು. ಶಿಗ್ಗಾವಿಯಲ್ಲಿ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಏರ್ಪಡಿಸಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿ ಸಿದ್ರಾಯ್ಯನವರು ತಮ್ಮ ಮೇಲಿನ ಆರೊಪ ಮರೆಮಾಚಲು ಪ್ರತಿಪಕ್ಷಗಳನ್ನು ಹತ್ತಿಕ್ಕಲು ನಾನಾ ರೀತಿಯ ಕುತಂತ್ರ ನಡೆಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪಿಪಿಇ ಕಿಟ್ ಖರೀದಿ ಕುರಿತು ತನಿಖೆ ಮಾಡುತ್ತಿರುವ ನ್ಯಾ. ಮೈಕೆಲ್ ಡಿ-ಕುನ್ಹಾ ಅವರೇ ನೀವು ನ್ಯಾಯಮೂರ್ತಿ, ನೀವು ಏಜೆಂಟರಲ್ಲಾ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಎಚ್ಚರಿಸಿದರು. ನ್ಯಾಯಮೂರ್ತಿ ಮೈಕೆಲ್ ಡಿ ಕುನ್ಹಾ ಯಾವಾಗಲೂ ನಮ್ಮ ವಿರುದ್ದ ಇದ್ದವರು, ಈಗ ಚುನಾವಣೆ ನಡೆದ ಸಂದರ್ಭದಲ್ಲಿ ಯಾಕೆ ಮಧ್ಯಂತರ ವರದಿ ಕೊಡಬೇಕಿತ್ತು. ಒಂದೂವರೆ ವರ್ಷದಿಂದ ಈ ಸರ್ಕಾರ ಏನು ಮಾಡುತ್ತಿತ್ತು. ಚುನಾವಣೆ ಸಂದರ್ಭದಲ್ಲಿ ಜನರ ಮನಸ್ಸನ್ನು ಬೇರೆಡೆ ತಿರುಗಿಸಲು ನಾಟಕ ಹೂಡಿದ್ದಾರೆ. ಇದರಲ್ಲಿ ಯಾವುದೇ ಧಮ್ಮಿಲ್ಲ ಎಂದರು. ನಮ್ಮ ನಾಯಕ ಯಡಿಯೂರಪ್ಪನವರ ಬಗ್ಗೆ ಕುನ್ಹಾ ಕಮಿಷನ್ ರಚನೆ ಮಾಡಿದ್ದಾರೆ. ಕುನ್ಹಾ ಕಮಿಷನ್ ನವರು ಯಡಿಯೂರಪ್ಪ ಹಾಗೂ ರಾಮುಲು ಅವರಿಗೆ ನೊಟಿಸ್ ನೀಡದೇ ತಾತ್ಕಾಲಿಕ ವರದಿ ನೀಡಿದ್ದಾರೆ. ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ನೀವು ತಪ್ಪಿತಸ್ಥರು ಎಂದು ಹೈಕೋರ್ಟ್ ಹೇಳಿದೆ. ಯಡಿಯೂರಪ್ಪ ಅವರಿಗೆ ಯಾವುದೆ ಕೋರ್ಟ್ ರಾಜಿನಾಮೆ ಕೊಡುವಂತೆ ಹೇಳಿರಲಿಲ್ಲ. ನಿಮಗೆ ನಾಚಿಕೆಯಾಗುವುದಿಲ್ಲವೇ ಎಂದು ಆಕ್ರೋಶ ಹೊರ ಹಾಕಿದರು. ಶಿಗ್ಗಾವಿಯಲ್ಲಿ ಬಸವರಾಜ ಬೊಮ್ಮಾಯಿಯುವರು ಒಂದೂ ಮನೆ ಕೊಟ್ಡಿಲ್ಲ ಅಂತ ಕೇಳುತ್ತೀರಿ, ಶಿಗ್ಗಾವಿ ಸವಣೂರಿನಲ್ಲಿ ಊರಿಗೂರೆ ಹೊಸ ಮನೆ ಕಟ್ಟಿಸಿದ್ದೇವೆ. ನೀವು ಒಂದಾದರೂ ಮನೆ ಕೊಟ್ಟಿದ್ದೀರಾ ಎಂದು ಪ್ರಶ್ನಿಸಿದರು. ಈ ಸರ್ಕಾರ ಹಾಲಿನ ದರ, ಅಲ್ಕೊ ಹಾಲಿನ ದರ ಹೆಚ್ಚಳ ಮಾಡಿದ್ದಾರೆ. ವಕ್ಪ್ ನೊಟಿಸ್ ವಾಪಸ್ ತೆಗೆದುಕೊಂಡಿರುವುದಾಗಿ ಹೇಳಿದ್ದಾರೆ. ವಕ್ಪ್ ಗೆ ಯಾವುದೇ ಆಸ್ತಿ ಆಗಬೇಕೆಂದರೆ ಅದು ದಾನವಾಗಿರಬೆಕು. ಇಲ್ಲ ಸರ್ಕಾರದಿಂದ ಬಂದಿರಬೇಕು ಎಂದು ಸುಪ್ತೀಂ ಕೋರ್ಟ್ ತೀರ್ಪಿದೆ. ಆದರೆ, ನೀವು ರೈತರ ಜಮಿನಿಗೂ ವಕ್ಪ್ ಅಂತ ನೊಟಿಸ್ ಕೊಡುತ್ತಿದ್ದೀರಿ. ಕೋರ್ಟ್ ಆದೇಶದ ಬಗ್ಗೆ ಸಿದ್ದರಾಮಯ್ಯ ಉತ್ತರ ಕೊಡಬೇಕೆಂದು ಆಗ್ರಹಿಸಿದರು. ಶಿಗ್ಗಾವಿ ಸಂತೆ ಮೈದಾನದಲ್ಲಿ ಮುಸ್ಲಿಂ ಧ್ವಜ ಬಂದಿದೆ. ಇದಿವರೆಗೂ ಈ ಧ್ವಜ ಇರಲಿಲ್ಲ. ಈ ಕ್ಷೇತ್ರದಲ್ಲಿ ಹೇಳೋರು ಕೇಳೋರು ಇಲ್ವಾ, ನಾವೂ ಸಂತೆ ಮೈದಾನದಲ್ಲಿ ಭಗವಾ ಧ್ವಜ ಹಾರಿಸುತ್ತೇವೆ. ಇದೆಲ್ಲ ನಿಲ್ಲಬೇಕೆಂದರೆ ಭರತ್ ಬೊಮ್ಮಾಯಿಯನ್ನು ಗೆಲ್ಲಿಸಬೇಕು. ವಕ್ಪ್ ಹೆಸರಲ್ಲಿ ನಿಮ್ಮ ಜಮೀನು ವಶಪಡಿಸಿಕೊಳ್ಳಲು ಹುನ್ನಾರ ನಡೆಸಿದ್ದಾರೆ. ಬಡ ಮುಸ್ಲೀಮರ ಜಮೀನು ನುಂಗುತ್ತಿದ್ದಾರೆ. ಇದುವರೆಗೂ ಯಾವ ಯಾವ ಭೂಮಿಯನ್ನು ವಕ್ಪ್ ಹೆಸರಿನಲ್ಲಿ ಸೇಲ್ ಡೀಡ್, ದಾನ ಪತ್ರ ನೀಡಿರುವುದು ಸೇರಿ ಎಲ್ಲವನ್ನು ತನಿಖೆ ಮಾಡಬೇಕೆಂದರಲ್ಲದೆ ನಿಮ್ಮ ಒಂದಿಂಚೂ ಜಾಗ ಹೋಗದಂತೆ ನೋಡಿಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.
© ASK News Kannada. All Rights Reserved. Designed by AGScurate IT Solutions LLP