ಗದಗ, ನ. 15 : ಒಳ ಮೀಸಲಾತಿ ವಿರೋಧಿಸಿ ಕಾನೂನು ಸಂಸದೀಯ ಮತ್ತು ವ್ಯವಹಾರಗಳ ಇಲಾಖೆ ಹಾಗೂ ಪ್ರವಾಸೋದ್ಯಮ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್ಕೆ ಪಾಟೀಲ್‌ರ ಹುಲಕೋಟಿ ನಿವಾಸದವರೆಗೆ ಬೃಹತ್ ಪಾದಯಾತ್ರೆ ನಡೆಸಲು ಒಳಮೀಸಲಾತಿ ವಿರೋಧಿ ಒಕ್ಕೂಟ ನಿರ್ಣಯಿಸಿದೆ. ಒಳಮೀಸಲಾತಿ ಜಾರಿಗೆ ವಿರೋಧಿಸಿ ಗದಗ ಜಿಲ್ಲೆಯ ಬಂಜಾರ, ಕೊರಮ, ಕೊರಚ, ಭೋವಿ ಸಮುದಾಯಗಳ ಮುಖಂಡರ ನೇತೃತ್ವದಲ್ಲಿ ಒಳಮೀಸಲಾತಿ ವಿರೋಧಿಸಿ ಹೋರಾಟದ ಕುರಿತು ದಿ.15-11-2024 ಶುಕ್ರವಾರ ನಗರದ ಪ್ರವಾಸಿ ಮಂದಿರದಲ್ಲಿ ನಡೆಸಿದ ಸಭೆಯಲ್ಲಿ ಪಾದಯಾತ್ರೆ ಕೈಗೊಳ್ಳಲು ನಿರ್ಣಯಿಸಲಾಗಿದೆ ಎಂದು ಪ್ರಮುಖರು ಪ್ರಕಟಣೆ ಮೂಲಕ ತಿಳಿಸಿದ್ದಾರೆ. 22-11-2024ರಂದು ಶುಕ್ರವಾರ ಬೆಳಿಗ್ಗೆ 10:00 ಗಂಟೆಗೆ ನಗರದ ಸೇವಾಲಾಲ ವೃತ್ತದಿಂದ ಹುಲಕೋಟಿಯಲ್ಲಿರುವ ಸಚಿವ ಎಚ್ಕೆ ಪಾಟೀಲರ ಮನೆಯವರೆಗೆ ಬೃಹತ್ ಪಾದಯಾತ್ರೆಯ ಮೂಲಕ ಸಚಿವರಿಗೆ ಮನವಿ ಸಲ್ಲಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದ್ದಾರೆ. ಕಾಂಗ್ರೇಸ್ ಸರ್ಕಾರ ಕಳೆದ ಕ್ಯಾಬಿನೇಟ್‌ನಲ್ಲಿ ಒಳಮೀಸಲಾತಿ ಜಾರಿಗೊಳಿಸಲು ಅನುಮೋದನೆ ನೀಡಿ, ಆಯೋಗವನ್ನು ರಚಿಸಿ ಮೂರು ತಿಂಗಳಲ್ಲಿ ವರದಿ ನೀಡಲು ಸೂಚಿಸಿರುವ ನಿರ್ಧಾರವನ್ನು ಒಳಮಿಸಲಾತಿ ವಿರೋಧಿ ಮುಂಖಡರು ಖಂಡಿಸಿದ್ದಾರೆ. ಸಾಮಾಜಿಕ, ರಾಜಕೀಯ, ಆರ್ಥಿಕ, ಶೈಕ್ಷಣಿಕ ದತ್ತಾಂಶಗಳ ಸಮೀಕ್ಷೆ ಇಲ್ಲದೆ ಜನಗಣತಿ, ಜಾತಿ ಗಣತಿ ಮಾಡದೆ ಕೇವಲ ಮೂರು ತಿಂಗಳಲ್ಲಿ ಈ ಆಯೋಗ ಸರ್ಕಾರಕ್ಕೆ ಯಾವ ಆಧಾರಿತ ವರದಿಯನ್ನು ನೀಡುತ್ತದೆ ಎಂಬುದು ಆತಂಕಕಾರಿ ವಿಷಯವಾಗಿದ್ದು ಸರ್ಕಾರದ ಇಬ್ಬಗೆಯ ನೀತಿಯ ವಿರುದ್ಧ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಆಯಾ ಜಿಲ್ಲೆಗಳಲ್ಲಿಯ ಸಚಿವರ, ಶಾಸಕರ ಮತ್ತು ಜನಪ್ರತಿನಿದಿಗಳ ಮನೆಗಳಿಗೆ ಪಾದಯಾತ್ರೆಯೊಂದಿಗೆ ತೆರಳಿ ಧರಣಿ ಮತ್ತು ಮುತ್ತಿಗೆ ಹಾಕಲಾಗುವುದೆಂದು ತಿಳಿಸಿದ್ದಾರೆ. ರಾಜ್ಯದ ಕಾನೂನು ಸಚಿವರಾದ ಎಚ್. ಕೆ. ಪಾಟೀಲರು ನಮಗೆ ನ್ಯಾಯ ದೊರಕಿಸಿ ಕೊಡುವ ಭರವಸೆಯಿಂದ ಅವರಿಗೆ ನಮ್ಮ ಸಮಸ್ಯೆಗಳನ್ನು ಮನವರಿಕೆ ಮಾಡಿಕೊಡಲು ಇದೆ ದಿನಾಂಕ: 22.11.2024 ರಂದು ಹುಲಕೋಟಿ ಚಲೋ ಹಮ್ಮಿಕೊಳ್ಳಲಾಗಿದೆ. ಒಳಮೀಸಲಾತಿ ವಿರೋಧಿ ಸಮುದಾಯದ ಸ್ವಾಮೀಜಿಗಳು, ಮುಖಂಡರು ಮತ್ತು ಜನಪ್ರತಿನಿದಿಗಳ ನೇತೃತ್ವದಲ್ಲಿ ಈ ಹೋರಾಟವು ನಡೆಯಲಿದ್ದು ಈ ಹೋರಾಟಕ್ಕೆ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಬಾದಿತ ಸಮುದಾಯಗಳ ಜನರು ಭಾಗವಹಿಸಿಲಿದ್ದಾರೆ ಎಂದು ಸಮಾಜದ ಮುಖಂಡರು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಬಂಜಾರ ಸಮುದಾಯದ ಮುಖಂಡರಾದ ರವಿಕಾಂತ ಅಂಗಡಿ, ಕೆ ಸಿ ನಭಾಪುರ, ಪ್ರಶಾಂತ ರಾಠೋಡ, ಉಮೇಶ ರಾಠೋಡ, ಸುಭಾಷ ಗುಡಿಮನಿ, ನೀಲೂ ರಾಠೋಡ, ಚಂದ್ರಾ ನಾಯಕ, ಈಶಪ್ಪ ರಾಠೋಡ, ಪುಂಡಲೀಕ ಲಮಾಣಿ, ಶಿವಣ್ಣ ಲಮಾಣಿ, ಧನುರಾಮ ತಂಬೂರಿ, ಜಾನು ಲಮಾಣಿ, ಈರಣ್ಣ ಲಮಾಣಿ, ತಾವರೆಪ್ಪ ಲಮಾಣಿ, ಕುಬೇರಪ್ಪ ರಾಠೋಡ, ಪರಶುರಾಮ ರಾಠೋಡ, ಕುಬೇರಪ್ಪ ಪವಾರ, ನುರಪ್ಪ ನಾಯಕ, ರಾಮಪ್ಪ ನಾಯಕ, ಲಕ್ಷ್ಮಣ ಲಮಾಣಿ, ಈರಣ್ಣ ಪಾಂಡು ಚವ್ಹಾಣ, ಪರಮೇಶ ನಾಯಕ, ಪ್ರಕಾಶ ಅಂಗಡಿ,ಕುಮಾರ ಕಟ್ಟಮನಿ ,ಚಂದ್ರಕಾಂತ್ ಚವ್ಹಾಣ್, ಶಿವು ಚವ್ಹಾಣ, ಪರಮೇಶ ಲಮಾಣಿ, ಸಂತೋಷ ಲಮಾಣಿ, ಟಿ ಡಿ ಪೂಜಾರ, ತಂಬೂರಿ, ದೇವೇಂದ್ರ ತೋಟದ, ಅನಿಲ ಕಾರಭಾರಿ,ಚೆನ್ನಪ್ಪ ಲಮಾಣಿ, ಲೋಕೇಶ ಕಟ್ಟಿಮನಿ, ರಮೇಶ ಲಮಾಣಿ, ಲೋಕೇಶ ಕಟ್ಟಿಮನಿ, ರಾಜಕುಮಾರ ಕಟ್ಟಿಮನಿ, ಸುರೇಶ ಗುಡಿಮನಿ,ಮಾರುತಿ ಲಮಾಣಿ, ಶೇಖರ ಲಮಾಣಿ, ಅಶೋಕ ಚವ್ಹಾಣ, ತುಕಾರಾಮ ಪೂಜಾರ, ಕೇಶಪ್ಪ ರಾಠೋಡ, ನಾಗೇಶ ತೋಟದ, ಸುನಿಲ್ ಆರ್ಕಸಾಲಿ, ಈಶ್ವರ ಪೂಜಾರ, ಕೃಷ್ಣಪ್ಪ ಲಮಾಣಿ, ಕೃಷ್ಣಪ್ಪ ಧರ್ಮಪ್ಪ ಲಮಾಣಿ, ಪಾಂಡಪ್ಪ ಭೀಮಪ್ಪ ಲಮಾಣಿ, ಮಂಜುನಾಥ್ ಚವ್ಹಾಣ, ರಮೇಶ ಲಮಾಣಿ, ರಮೇಶ ನಾಯಕ, ಗಣೇಶ ಕಟ್ಟಿಮನಿ, ಗಣೇಶ ಚವಾಣ, ರತ್ನಪ್ಪ ಪೂಜಾರ, ರಾಜು ಪವಾರ, ನಾರಾಯಣ ಪೂಜಾರ, ಟಿ ಎಸ್ ರಾಠೋಡ. ಜಿ ಆರ್ ಪೂಜಾರ್ ಸೇರಿದಂತೆ ಬಂಜಾರ ಕೊರಮ ಕೊರಚ ಭೋವಿ ಸಮುದಾಯಗಳ ಮುಖಂಡರು ಜನಪ್ರತಿನಿಧಿಗಳು ಯುವಕರು ಹಿರಿಯರು ಉಪಸ್ಥಿತರಿದ್ದರು
© ASK News Kannada. All Rights Reserved. Designed by AGScurate IT Solutions LLP