ask-banner
ad-banner
ರಾಜ್ಯ 2024-11-18

ಶೇರ್ ಮಾಡಿ  

*ಶೈಕ್ಷಣಿಕ, ಸಾಂಸ್ಕೃತಿಕ ಲೋಕಕ್ಕೆ ದಾಸಶ್ರೇಷ್ಠ ಕನಕದಾಸರ ಕೊಡುಗೆ ಅಪಾರ- ಸಚಿವ ಎಚ್ಕೆ ಪಾಟೀಲ..*

ಗದಗ : ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಲೋಕಕ್ಕೆ ದಾಸಶ್ರೇಷ್ಠ ಕನಕದಾಸರ ಕೊಡುಗೆ ಅಪಾರ ಎಂದು ರಾಜ್ಯದ ಕಾನೂನು, ಸಂಸದೀಯ ವ್ಯವಹಾರ ಮತ್ತು ಪ್ರವಾಸೋದ್ಯಮ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಕೆ.ಪಾಟೀಲ ಹೇಳಿದರು. ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಸೋಮವಾರ ಗದಗ ನಗರದ ಹಾತಲಗೇರಿ ನಾಕಾ ಬಳಿಯ ಭಕ್ತ ಕನಕದಾಸ ವೃತ್ತದಲ್ಲಿ ಕನದಾಸರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ಭಕ್ತ ಕನಕದಾಸ ಜಯಂತಿ ಆಚರಣೆಯು ಸಾಂಸ್ಕೃತಿಕ ಲೋಕಕ್ಕೆ ಚೇತನವಾಗಿದೆ ಎಂದರು. ಕನಕದಾಸರ ಜಯಂತಿಯನ್ನು ಭಕ್ತಿಪೂರ್ವಕವಾಗಿ, ಅಭಿಮಾನ ಪೂರ್ವಕವಾಗಿ ಆಚರಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ದಾಸ ಸಾಹಿತ್ಯದೊಳಗೆ ಕನಕದಾಸರು ನೀಡಿರುವ ಸಾಂಸ್ಕೃತಿಕ ಲೋಕಕ್ಕೆ ಅವರ ಕೊಡುಗೆ ದೊಡ್ಡ ಪ್ರಮಾಣದಲ್ಲಿ ಆಧ್ಯಾತ್ಮಿಕ ಬೆಳವಣಿಗೆಗೆ ಕಾರಣವಾಗಿದೆ ಎಂದರು. ಕನಕದಾಸರು ಕವಿ, ದಾರ್ಶನಿಕ ಮತ್ತು ಸಂಗೀತಗಾರರಾಗಿ ಬೆಳೆದರು ಮತ್ತು ಕರ್ನಾಟಕದಲ್ಲಿ ಭಕ್ತಿ ಸಾಹಿತ್ಯದ ಯುಗವನ್ನು ಆರಂಭಿಸಿದರು. ಕನಕದಾಸರ ಕಾವ್ಯಗಳು ಕರ್ನಾಟಕ ಶೈಲಿಯಲ್ಲಿ ರಚನೆಯಾದ ಕಾವ್ಯಗಳಾಗಿದ್ದು, ಅವರು ತಮ್ಮ ಎಲ್ಲಾ ಹಾಡುಗಳಿಗೆ ಕಾಗಿನೆಲೆ ಆದಿಕೇಶವ ಎಂಬ ಕಾವ್ಯನಾಮ ಬಳಸಿದ್ದಾರೆ. ನಳಚರಿತ್ರೆ, ಹರಿಭಕ್ತಿಸಾರ, ರಾಮಧಾನ್ಯಚರಿತ್ರೆ ಮತ್ತು ಮೋಹನ ತರಂಗಿಣಿ ಸೇರಿದಂತ ಅನೇಕ ಕೃತಿಗಳು ಖ್ಯಾಪನಾಮ ಪಡೆದಿವರ ಎಂದರು. ಶಾಲಾ-ಕಾಲೇಜ ವಿದ್ಯಾರ್ಥಿಗಳಿಗೆ ಭಕ್ತ ಕನಕದಾಸರ ದಾಸ ಸಾಹಿತ್ಯದ ಪುಸ್ತಕಗಳನ್ನು ದೊರೆಯುವ ಹಾಗೆ ಮಾಡಿ ಕನದಾಸರ ಭಕ್ತಿ ಸಾಹಿತ್ಯವನ್ನು ಪರಿಚಯಿಸಬೇಕಿದೆ ಎಂದು ಸಚಿವ ಎಚ್. ಕೆ. ಪಾಟೀಲ ಹೇಳಿದರು. ವಿಧಾನ ಪರಿಷತ್ ಸದಸ್ಯ ಪ್ರೊ. ಎಸ್.ವಿ. ಸಂಕನೂರ, ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ್ ಬಬರ್ಚಿ, ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ, ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಮುದಕಮ್ಮನವರ ಅವರು ಭಕ್ತ ಕನಕದಾಸ ಅವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿದರು. ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಫಕ್ಕೀರಪ್ಪ ಹೆಬಸೂರ, ಜಿಲ್ಲಾ ಗ್ರಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಬಿ.ಬಿ. ಅಸೂಟಿ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಅಶೋಕ ಮಂದಾಲಿ, ಪ್ರಭು ಬುರಬುರೆ, ರವಿ ದಂಡಿನ, ಪ್ರಕಾಶ ಕರಿ ಸೇರಿ ಅನೇಕರಿದ್ದರು.

Anant S. Karkal
ವೀಕ್ಷಣೆ 281

ಜನಪ್ರಿಯ ಸುದ್ದಿಗಳು

ಕಚೇರಿ ವಿಳಾಸ

Gadag - 582101

ಫೋನ್ ನಂ.

+91 9448302002

ಇಮೇಲ್ ಐಡಿ

asknewskannada@gmail.com

ಸೋಶಿಯಲ್ ಮೀಡಿಯಾ ಲಿಂಕ್ಸ್

© ASK News Kannada. All Rights Reserved. Designed by AGScurate IT Solutions LLP