ದಕ್ಷನಾದವನಿಗೆ ಸಮರ್ಥ, ನಿರ್ದಿಷ್ಟ, ಸ್ಪಷ್ಟ, ನಿಖರವಾದ ದೃಷ್ಟಿಕೋನ ಇರುತ್ತದೆ. ನಾಯಕನಾದವನ ಕಾರ್ಯ ಕ್ಷಮತೆಯೂ ದಕ್ಷತೆಯಿಂದ ಕೂಡಿರುತ್ತದೆ. ಸಾಮಾನ್ಯ ಮಿತಿಗಳನ್ನು ಮೀರಿದ ವ್ಯಕ್ತಿತ್ವ ಹೊಂದಿದವನು ಮಾತ್ರ ನಿಜವಾದ ಜನ ನಾಯಕನಾಗುತ್ತಾನೆ ಎಂಬ ನಿಲುವು ಯುವ ನಾಯಕ ವಸಂತ ಪಡಗದ ಅವರದು. ಜನರ ಸೇವೆ ಮಾಡಲು ಅಧಿಕಾರವೇ ಬೇಕಿಲ್ಲ. ಇಚ್ಛಾಶಕ್ತಿ, ಸಾಮಾಜಿಕ ಮನೋಭಾವ ಇದ್ದರೆ ಸಾಕು. ಜೊತೆಗೆ ಕುಟುಂಬದ ಹಿರಿಯರು ಹಾಕಿಕೊಟ್ಟ ಪರಂಪರೆ ಮುನ್ನಡೆಸಬೇಕೆಂಬ ಹಂಬಲವೊಂದಿದ್ದರೆ ಸಮಾಜದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಬಹುದು. ಅಂತಹವರ ಸಾಲಿಗೆ ಸೇರುವ ಭವಿಷ್ಯದ ಭರವಸೆಯ ಯುವ ನಾಯಕರಾಗಿ ಕಾಣಿಸಿದ್ದಾರೆ ವಸಂತ ಪಡಗದ. ಹೌದು.ವಸಂತ ಪಡಗದ ಹೆಸರೀಗ ಯುವ ಶಕ್ತಿಯೊಂದಿಗೆ ಎಲ್ಲೆಡೆ ಚಿರಪರಿಚಿತ. ಅಧಿಕಾರಕ್ಕಾಗಿ ಹಂಬಲಿಸಿದವರಲ್ಲ, ಸಮಾಜ ಸೇವೆ ಬಿಟ್ಟವರಲ್ಲ. ತಾವೇ ನಾಯಕರಾಗಿ ಬೆಳೆಯಬೇಕೆಂಬ ಹಂಬಲವೂ ಇಲ್ಲ. ಹಲವಾರು ಯುವ ನಾಯಕರಾದವರ ಹೆಗಲಿಗೆ ಹೆಗಲು ಕೊಟ್ಟು ಸಂಘಟನೆ ಮಾಡಿದವರು. ಇಂತಹ ಯುವ ನಾಯಕ ಯುವಕರ, ಸಮಾಜ ಸೇವಕರ, ಜನ ಸೇವಕರ ಕಣ್ಣಲ್ಲಿ ಭರವಸೆಯ ನಾಯಕರಾಗಿ ಹೊರ ಹೊಮ್ಮಿದ್ದಾರೆ. ಸಾಮಾಜಿಕ ಸೇವೆಯೊಂದಿಗೆ ಸಾರ್ವತ್ರಿಕ ಬದುಕಿನಲ್ಲಿ ಕಾಣಿಸಿಕೊಂಡ ವಸಂತ ಪಡಗದ ಹೃದಯವಂತಿಕೆಗೆ ಸಾಟಿ ಇಲ್ಲ. ನೊಂದವರ, ಬೆಂದವರ, ಬಡವರ, ನಿರ್ಗತಿಕರ, ನಿಸ್ಸಾಯಕರ ಸೇವೆಗೆ ವಸಂತ ಪಡಗದ ಎತ್ತಿದ ಕೈ. ಹಳ್ಳಿ ಹಳ್ಳಿ, ಗ್ರಾಮ ಗ್ರಾಮಗಳಲ್ಲಿ ತಮ್ಮ ಸಂಘಟನಾತ್ಮಕ ಶಕ್ತಿಯೊಂದಿಗೆ ಎಲ್ಲರ ಮನ, ಮನೆ ಗೆದ್ದವರು. ಗದಗ ಜಿಲ್ಲೆಯಲ್ಲಿ ಕಳೆದ 20 ವರ್ಷಗಳಿಂದ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷ ಪಂಗಡವೆನ್ನದೆ ಉತ್ತಮ ಯುವ ರಾಜಕಾರಣಿಗಳ ಗೆಲುವಿಗೆ ಕಾರಣರಾಗಿರುವ ವಸಂತ ಪಡಗದವರು ಎರಡ್ಮೂರು ಭಾರಿ ನಗರಸಭೆಯ ಚುನಾವಣೆಗೆ ಸ್ಪರ್ಧಿಸಿ ತಮ್ಮ ಜನ ಬೆಂಬಲ ತೋರಿದವರು. ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಸ್ನೇಹಿತರನ್ನು ಸಂಘಟಿಸಿ ಪ್ರತಿದಿನ ಆಹಾರದ ಕಿಟ್‌ಗಳನ್ನು ಅಸಹಾಯಕರಿಗೆ, ಬಡವರಿಗೆ ನಿರ್ಗತಿಕರಿಗೆ ವಿತರಿಸಿ ಬಡವರ ಹಸಿವು ನೀಗಿಸುವ ಪ್ರಯತ್ನ ಮಾಡಿದ್ದು ವಸಂತವರ ಸಮಾಜಮುಖಿ ಸೇವೆ ನಿಜಕ್ಕೂ ಮಾದರಿ. ಕೋವಿಡ್ 2ನೇ ಅಲೆಯ ಸಂದರ್ಭದಲ್ಲಿ, ಎಲ್ಲೆಡೆ ಹೊಟೇಲ್‌ಗಳು ಬಂದ್ ಆಗಿದ್ದ ಸಂದರ್ಭದಲ್ಲಿ ಗದಗ ಜಿಲ್ಲೆಗೆ ರೋಗಿಗಳನ್ನು ಕರೆದುಕೊಂಡು ಬರುವ ನೂರಾರು ಜನರಿಗೆ ಊಟದ ವ್ಯವಸ್ಥೆ ಮಾಡಿ ಹಸಿವು ನೀಗಿಸಿದ ಕಾರ್ಯ ಶ್ಲಾಘನೀಯ. ಸಂಘಟನೆ, ರಾಜಕಾರಣ ಕೆಲಸದ ಜತೆ ದೇಶಭಕ್ತಿಯ ಜಾಗೃತಿ ಮೂಡಿಸುವ ಮಹತ್ವದ ಕಾರ್ಯಗಳನ್ನು ಅವರ ಸ್ನೇಹಿತರೊಂದಿಗೆ ಮಾಡಿದ್ದಾರಲ್ಲದೆ ಕಳಸಾ ಬಂಡೂರಿ ಹೋರಾಟದಲ್ಲಿ ಮುಂಚೂಣಿಯಾಗಿದ್ದವರು. ಮೊದಲಿನಿಂದಲೂ ಧಾರ್ಮಿಕ ಕಾರ್ಯಕ್ರಮಗಳಿಗೆ ಹೆಚ್ಚು ಉತ್ತೇಜನ ಕೊಟ್ಟ ಕುಟುಂಬದ ಹಿನ್ನಲೆಯ ವಸಂತ ಪಡಗದ ಧರ್ಮ ಕಾರ್ಯಗಳಲ್ಲಿ ಅತೀವ ಆಸಕ್ತಿಯೊಂದಿಗೆ ತಮ್ಮನ್ನು ತೊಡಗಿಸಿಕೊಂಡವರು. ಕೊರೊನಾ ವೇಳೆ ಲಾಕ್‌ಡೌನ್ ಬಳಿಕ ಸಾರ್ವಜನಿಕ ಗಣೇಶೋತ್ಸವ ಬಹುತೇಕ ನಿಂತೇ ಹೋಗಿತ್ತು. ಆ ಸಂದರ್ಭದಲ್ಲಿ ಗದಗ ಜಿಲ್ಲೆಯಲ್ಲಿ ಮತ್ತೆ ಸಾರ್ವಜನಿಕ ಗಣೇಶೋತ್ಸವ ಆರಂಭಿಸಲು ಗಣಶೋತ್ಸವ ವಿವಿದ ಸಮಿತಿಗಳಿಗೆ ಪ್ರೋತ್ಸಾಹ ರೂಪದ ಆರ್ಥಿಕ ನೆರವು ಕೊಡಮಾಡಿದ್ದು ಪ್ರಶಂಸನೀಯ. ಗದಗ ಜಿಲ್ಲೆಯ ಪ್ರಸಿದ್ಧ ಹೋಳಿ ಹಬ್ಬದ ಸಂಭ್ರಮ ಇಮ್ಮಡಿಗೊಳಿಸಲು ಪ್ರೋತ್ಸಾಹ ಧನ ನೀಡುವ ಮೂಲಕ ಸಂಪ್ರದಾಯ, ಪರಂಪರೆ ಹಬ್ಬಗಳಿಗೆ ಬೆನ್ನೆಲುಬಾಗಿ ನಿಂತವರು. ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ರಾಜಕೀಯ ಸೇವೆಗಾಗಿ ತಮ್ಮ ಕುಟುಂಬದ ಸಹಕಾರದೊಂದಿಗೆ ಸ್ನೇಹಿತರ ಬಳಗ ಕಟ್ಟಿಕೊಂಡು ಸದಾಶಯದಲ್ಲಿರುವ ವಸಂತ ಪಡಗದ ಒಬ್ಬ ಅಪ್ಪಟ ಸಮಾಜಮುಖಿ ಸೇವೆಯ ಭವಿಷ್ಯದ ಯುವ ನಾಯಕ. ಕ್ರೀಯಾತ್ಮಕ, ರಚನಾತ್ಮ ಯೋಜನೆಗಳಿಗೆ ಹೆಸರಾಗಿರುವ ವಸಂತ ಪಡಗದ ನವ ನವೀನ ಚಿಂತನೆಗಳಿಗೆ ಕನಸುಗಳಿಗೆ ಮಾದರಿಯಾದವರು. ಸಮಾಜದ ಕಟ್ಟಕಡೆಯ ಜನರ ಕೂಗಿಗೆ ಧ್ವನಿಯಾದವರು. ಯುವಸಮೂಹದೊಂದಿಗೆ ಹೊಸ ಬದಲಾವಣೆ ಕನಸು ಹೊತ್ತು ನಿಂತಿರುವ ವಸಂತ ಪಡಗದ ಜನಪರ ನಿಲುವುಗೆ ಸಾಕ್ಷಿಯಾದವರು. ಸ್ವಾರ್ಥತೆ ಬಿಟ್ಟು ಸಾರ್ವತ್ರಿಕ ಸೇವೆ, ಸಾಮಾಜಿಕ ಚಿಂತನೆ. ಜಾತ್ಯಾತೀತ ನಿಲುವು, ಸರ್ವರೊಂದಿಗೆ ಒಡನಾಡ. ಬಡವರ ಕಲ್ಯಾಣ, ಜನಪ್ರೀಯ ಯೋಚನೆ, ಸೇವಾ ಜೇಷ್ಠತೆಯ ಆದರ್ಶ ಗುಣಗಳಿದ್ದರೆ ಜನರು ಅಪ್ಪಿ ಒಪ್ಪಿಕೊಳ್ಳುವರೆಂಬದನ್ನು ವಸಂತ ಪಡಗದ ಬದುಕು ಸ್ಪಷ್ಟಪಡಿಸುತ್ತದೆ. ಕಿರಿಯ ವಯಸ್ಸು ಕಿರಿಯದಾದರು ಉದಾತ್ತ ಚಿಂತನೆಯ ವಸಂತ ಪಡಗದ ಗದಗ ಜಿಲ್ಲೆಯೊಂದಿಗೆ ಉತ್ತರ ಕರ್ನಾಟಕದ ಸಾಮಾಜಿಕ ಹೋರಾಟಗಾರರಲ್ಲಿ ಯುವ ಶಕ್ತಿಯಾಗಿ ಗುರುತಿಸಿಕೊಂಡು ಸರ್ವರಲ್ಲಿ ಆಕರ್ಷಕರಾಗಿದ್ದಾರೆ. ಸರಳತೆ, ಸೌಜನ್ಯತೆ, ನಗುಮೊಗದೊಂದಿಗೆ ತಮ್ಮಲ್ಲಿ ಬರುವ ಜನರ ಬೇಕು-ಬೇಡಿಕೆಗಳನ್ನು ಆಲಿಸಿ, ಆಲಂಗಿಸಿ ಸಾಧ್ಯವಾದಷ್ಟು ಪರಿಹರಿಸುವ ವಸಂತ ಪಡಗದ ಹೃದಯ ವಿಶಾಲತೆ ನಿಜಕ್ಕು ಅನುಕರೀಯ. ವಸಂತ ಬಸಪ್ಪ ಪಡಗದ ಜೀವನದ ಹಿನ್ನೊಟ ಅರಿತಾಗ ಬಾಲ್ಯದಲ್ಲಿಯೇ ಪರಿಶುದ್ಧ ಮನಸ್ಸಿನೊಂದಿಗೆ ಗುರು ಪಂಡಿತ ಪುಟ್ಟರಾಜ ಕವಿ ಗವಾಯಿಗಳ ಜೀವನಾದರ್ಶಗಳ ಪರಿಪಾಲಕರಾಗಿ ಗದುಗಿನ ಪುಣ್ಯಭೂಮಿಯಲ್ಲಿ ಯುವಪಡೆಯೊಂದಿಗೆ ಬೆಳೆದವರು. ಗದಗ-ಬೆಟಗೇರಿ ನಗರದ ಪಡಗದ ಕುಟುಂಬದ ಬಸಪ್ಪ ಹಾಗೂ ನೀಲಮ್ಮ ಪಡಗದ ಅವರ ಪುತ್ರರಾಗಿ 5-12-1987 ರಂದು ಜನಿಸಿದ ವಸಂತ ಪಡಗದ ಒಕ್ಕಲಗೇರಿ ಓಣಿಯ ರೈತಾಪಿ ಪರಿಸರದಲ್ಲಿ ಬೆಳೆಯುತ್ತಾ ತಮ್ಮ ಕುಟುಂಬ ವ್ಯಾಪಾರ ವಹಿವಾಟಿನಲ್ಲಿ ಬದುಕನ್ನು ಕಟ್ಟಿಕೊಂಡು ತಮ್ಮ ದೊಡ್ಡಪ್ಪನವರಾದ ನಗರಸಭೆಯ ಮಾಜಿ ಸದಸ್ಯ ನಿಂಗಪ್ಪ ಪಡಗದ ಅವರ ಮಾರ್ಗದರ್ಶನದಲ್ಲಿ ಬೆಳೆಯುತ್ತಾ ವ್ಯವಹಾರಿಕ ವೃತ್ತಿಯನ್ನು ವೃದ್ಧಿಸುತ್ತಾ ವಾಣಿಜ್ಯ ಪದವಿ ಪಡೆದ ವಸಂತ ಪಡಗದ ತಮ್ಮ ನಡೆ ನುಡಿಯೊಂದಿಗೆ ಯುವ ನಾಯಕರಾಗಿ ಹೊರ ಹೊಮ್ಮಿದವರು. ವಿದ್ಯಾರ್ಥಿ ಜೀವನದಲ್ಲಿಯೇ ನಾಯಕತ್ವದ ಗುಣಗಳನ್ನು ಹೊಂದಿದ್ದ ವಸಂತ ಪಡಗದ ಪದವಿಯ ನಂತರ ಜನಪರ ಸೇವೆಗೆ ಅಣಿಯಾಗಿ ಸದ್ದು ಗದ್ದಲವಿಲ್ಲದೆ ಯುವನಾಯಕರಾಗಿ ಉತ್ತರ ಕರ್ನಾಟಕದಲ್ಲಿ ಸುದ್ದಿಯಾದವರು. ಕನ್ನಡಪರ ಸಂಘಟನೆಗಳೂ ಸೇರಿದಂತೆ ಹಲವಾರು ಸಾಮಾಜಿಕ ಸಂಘಟನೆಗಳು ಸೇರಿ ಕದಂಬ ಸೈನ್ಯ ಕಟ್ಟಿ ಕಾಯಕರ್ತರ ಪಡೆಯನ್ನು ಹುಟ್ಟು ಹಾಕಿದ ವಸಂತ ಪಡಗದವರ ನಾಯಕತ್ವ ಬೆಳವಣಿಗೆಗೆ ಇನ್ನಷ್ಟು ಪುಷ್ಠಿ ನೀಡಿತು. ಅತ್ಯಂತ ದಕ್ಷತೆಯಿಂದ, ಪ್ರಾಮಾಣಿಕತೆಯಿಂದ, ಯಾವುದೇ ಕಪ್ಪುಚುಕ್ಕೆಯಿಲ್ಲದೆ ಸಾಮಾಜಿಕವಾಗಿ ಬೆಳೆಯುತ್ತಾ ಹಂತ-ಹಂತವಾಗಿ ಮೇಲ್ಮಟ್ಟಕ್ಕೇರಿದ ವಸಂತ ಪಡಗದ ಸೇವೆ ಇನ್ನಷ್ಟು ಮತ್ತಷ್ಟು ಸಮಾಜಕ್ಕೆ ಅಗತ್ಯವಾಗಿದೆ. ಪ್ರತ್ಯೇಕ ಉತ್ತರ ಕರ್ನಾಟಕದ ಕೂಗನ್ನು ಎತ್ತಿದವರು. ರೈತ ಮುಖಂಡರೊಂದಿಗೆ ದೆಹಲಿ ಚಲೋ ಹಮ್ಮಿಕೊಂಡು ದೆಹಲಿಯ ರಾಮಲೀಲಾ ಮೈದಾನ ಹಾಗೂ ಇಂಡಿಯಾ ಗೇಟ್ ಬಳಿ ಮೌನ ಪ್ರತಿಭಟನೆ ನಡೆಸಿ ಕೇಂದ್ರ ಸರಕಾರದ ಗಮನ ಸೆಳೆದು ಕೇಂದ್ರ ನಾಯಕರು ಮಹದಾಯಿ ಸಮಸ್ಯೆಗೆ ಸ್ಪಂದಿಸುವಂತೆ ಒತ್ತಾಯಿಸಿದವರು. ಗದಗ ಜಿಲ್ಲೆಯಲ್ಲಿ ಗತಿಸಿದ ನೆರೆ. ಪ್ರವಾಹ, ಅಕಾಲಿಕ ಮಳೆ, ಬರ ಸೇರಿದಂತೆ ನೈಸರ್ಗಿಕ ವಿಕೋಪಕ್ಕೆ ತುತ್ತಾದ ಗ್ರಾಮಗಳ ಸಂತ್ರಸ್ಥರಿಗೆ ವಸಂತ ಪಡಗದ ನೇತೃತ್ವದ ಅಭಿಮಾನಿ ಬಳಗದಿಂದ ಸಂತ್ರಸ್ಥರಿಗೆ ದಿನ ನಿತ್ಯದ ಸಾಮಗ್ರಿಗಳನ್ನು ಕೊಡುವುದರ ಮೂಲಕ ಮಾನವೀಯತೆ ಮೆರೆದಿದ್ದು, ಶಾಲೆ ಮಕ್ಕಳಿಗೆ ಉಚಿತ ಪುಸ್ತಕ ನೀಡಿದ್ದು ಅವರ ಸಾಮಾಜಿಕ ಕಳಕಳಿಗೆ ಹಿಡಿದ ಕೈಗನ್ನಡಿಯಾಗಿದೆ. ಕೇಳಿ ಕೊಡುವ ನೂರಾರು ಬಹುಮಾನಗಳಿಗಿಂತ ಕೇಳದೇ ಕೊಡುವ ಗೌರವ ಬಹಳ ದೊಡ್ಡದು ಎಂಬುದಕ್ಕೆ ವಸಂತ ಪಡಗದ ಮುಂಚೂಣಿಯಲ್ಲಿದ್ದಾರೆ. ಜನಾಕರ್ಷಕ ವ್ಯಕ್ತಿತ್ವದ ಭರವಸೆಯ ನಾಯಕ ವಸಂತ ಪಡಗದ ಸಾಮಾಜಿಕ, ರಾಜಕೀಯ ಕನಸು ನನಸಾಗಲಿ ಎಂಬುದು ಅವರ ಅಭಿಮಾನಿಗಳ ಹಂಬಲವಾಗಿದೆ. ವಸಂತ ಪಡಗದವರ 37 ನೇ ಹುಟ್ಟು ಹಬ್ಬವನ್ನು ಅವರ ಅಭಿಮಾನಿ ಬಳಗವು ಸಮಾಜಮುಖಿ ಸೇವಾ ಕಾರ್ಯಗಳೊಂದಿಗೆ ಆಚರಿಸುತ್ತಿರುವುದು ನಿಜಕ್ಕೂ ಹೆಮ್ಮೆ ಅಭಿಮಾನವೆನಿಸುತ್ತಿದೆ.
© ASK News Kannada. All Rights Reserved. Designed by AGScurate IT Solutions LLP