ask-banner
ad-banner
ರಾಜ್ಯ 2024-12-05

ಶೇರ್ ಮಾಡಿ  

ದೇಶಕ್ಕೆ ಸ್ವಾತಂತ್ರ್ಯ ಸಿಗುವಲ್ಲಿ, ಸಂವಿಧಾನ ರಚಿಸುವಲ್ಲಿ ವಕೀಲರ ಪಾತ್ರ ಮಹತ್ವದ್ದು : ಜಿಲ್ಲಾಧಿಕಾರಿ ಗೋವಿಂದರೆಡ್ಡಿ

ಗದಗ : ದೇಶದ ಸ್ವಾತಂತ್ರವನ್ನು ತಂದು ಕೊಡುವಲ್ಲಿ ಹಾಗೂ ದೇಶದ ಸಂವಿಧಾನದ ರಚನೆಯಲ್ಲಿ ವಕೀಲರ ಪಾತ್ರ ಮಹತ್ವದಾಗಿದೆ ಎಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಹೇಳಿದರು. ಅವರು ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ವಕೀಲರ ದಿನಾಚರಣೆಯ ಸಮಾರಂಭವನ್ನುದ್ದೇಶಿಸಿ ಮಾತನಾಡಿದರು. ಸರ್ವರಿಗೂ ನ್ಯಾಯವನ್ನ ಒದಗಿಸುವ ಉದ್ದೇಶದಿಂದ ವಕೀಲರು ಕಾರ್ಯವನ್ನು ನಿರ್ವಹಿಸಬೇಕೆಂದರಲ್ಲದೆ ನಿರಂತರ ಅಧ್ಯಯನದ ಮೂಲಕ ಉತ್ತಮ ವಕೀಲರಾಗಲು ಅವಕಾಶವಿದೆ ಎಂದರು. ಅತ್ಯಂತ ಪವಿತ್ರವಾಗಿರುವ ವಕೀಲ ವೃತ್ತಿಗೆ ಕಳಂಕ ತರುವಂತೆ ಸಾಗದೆ ವಕೀಲ ವೃತ್ತಿಯ ಘನತೆ ಗೌರವವನ್ನು ಉಳಿಸಿ ಬೆಳೆಸಿಕೊಂಡು ಮುನ್ನಡೆಯಬೇಕೆಂದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಬಸವರಾಜ್ ಅವರು ನ್ಯಾಯಾಲಯದಲ್ಲಿ ಹೆಚ್ಚುತ್ತಿರುವ ಪ್ರಕರಣಗಳ ವಿಲೇವಾರಿಯಲ್ಲಿ ವಕೀಲರು ಸಹಕಾರ ನೀಡಬೇಕೆಂದರು. ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಲು ಪ್ರತಿಯೊಬ್ಬರಲ್ಲೂ ಬದ್ಧತೆ ಮುಖ್ಯವಾಗಿದ್ದು ವಿಚಾರಣೆ ಶೀಘ್ರ ಮುಗಿಸಿದರೆ ಶೀಘ್ರ ನ್ಯಾಯ ಒದಗಿಸಲು ಸಾಧ್ಯ ಎಂದರು. ವಕೀಲರು ಸಮಾಜದ ಬಗೆಗೆ ಚಿಂತನೆ ಮಾಡಿ ಜನಸಾಮಾನ್ಯರಿಗೆ ನಿಜವಾದ ನ್ಯಾಯ ಒದಗಿಸುವ ಮೂಲಕ ಸಮುದಾಯದಲ್ಲಿ ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ವಕೀಲರು ಬದ್ಧತೆ ತೋರಬೇಕೆಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಕೀಲರ ಸಂಘದ ಅಧ್ಯಕ್ಷರಾದ ಎಂ.ಆಯ್. ಹಿರೇಮನಿಪಾಟೀಲ ಮಾತನಾಡಿ ನೋಬಲ್ ವೃತ್ತಿಯಾಗಿರುವ ವಕೀಲ ವೃತ್ತಿ ಸರ್ವಕಾಲಿಕವು ಶ್ರೇಷ್ಠವಾಗಿದೆ ಎಂದರು. ವಕೀಲರ ದಿನಾಚರಣೆಯ ಕುರಿತು ಪ್ರಾಸ್ತಾವಿಕವಾಗಿ ಸಿ. ಎಸ್.ರಾಚಯ್ಯನವರ ವಕೀಲರು ಮಾತನಾಡಿದರೆ, ಕಾರ್ಯಕ್ರಮವನ್ನು ವಕೀಲರಾದ ಎಂ.ಬಿ. ಮತ್ತೂರ್ ನಿರೂಪಿಸದರು. ವಕೀಲ ಸಂಘದ ಪ್ರಧಾನ ಕಾರ್ಯದರ್ಶಿ ಬಿ,ಎಚ್ ಮಾಡಲಗೇರಿ ಸರ್ವರನ್ನು ಸ್ವಾಗತಿಸಿದರು. ವಕೀಲರ ಸಂಘದ ಜಂಟಿ ಕಾರ್ಯದರ್ಶಿ ಪ್ರಕಾಶ ಕಣಗಿನಹಾಳ ವಂದಿಸಿದರು. ವೇದಿಕೆ ಮೇಲೆ ವಕೀಲ ಸಂಘದ ಉಪಾಧ್ಯಕ್ಷ ಎ.ಎಂ. ಹದ್ಲಿ, ಖಜಾಂಚಿ ವಿ.ಎಚ್.ಮೇರವಾಡೆ ಸೇರಿ ಇತರರು ಉಪಸ್ಥಿತರಿದ್ದರು. ವಕೀಲರ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ನ್ಯಾಯಾಲಯದ ಎಲ್ಲ ನ್ಯಾಯಾಧೀಶರು, ಜಿಲ್ಲಾ ವಕೀಲರ ಸಂಘದ ಎಲ್ಲಾ ಸದಸ್ಯರು ವಕೀಲರ ಕುಟುಂಬದವರು ಸೇರಿದಂತೆ ಜಿಲ್ಲಾ ನ್ಯಾಯಾಲಯದ ಸಿಬ್ಬಂದಿಗಳು ಪಾಲ್ಗೊಂಡಿದ್ದರು. ರಸಮಂಜರಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವಕೀಲರಾದ ಟಿ.ಎನ್.ಬಾಂಢಗೆ ಜಬ್ಬರಖಾನ ಪಠಾಣ ನಡೆಸಿಕೊಟ್ಟರು. ವಕೀಲರ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ಕ್ರೀಡಾಕೂಟದಲ್ಲಿ ವಿಜಯಶಾಲಿಯಾದ ವಕೀಲರಿಗೆ ಪ್ರಶಸ್ತಿಗಳನ್ನು ವಿತರಿಸಲಾಯಿತು. ಹಿರಿಯ ವಕೀಲರಿಗೆ, ಸಾಧಕರಿಗೆ, ನೂತನವಾಗಿ ಸರಕಾರದಿಂದ ನೇಮಕಗೊಂಡವರಿಗೆ ಸತ್ಕರಿಸಲಾಯಿತು.

Anant S. Karkal
ವೀಕ್ಷಣೆ 318

ಜನಪ್ರಿಯ ಸುದ್ದಿಗಳು

ಕಚೇರಿ ವಿಳಾಸ

Gadag - 582101

ಫೋನ್ ನಂ.

+91 9448302002

ಇಮೇಲ್ ಐಡಿ

asknewskannada@gmail.com

ಸೋಶಿಯಲ್ ಮೀಡಿಯಾ ಲಿಂಕ್ಸ್

© ASK News Kannada. All Rights Reserved. Designed by AGScurate IT Solutions LLP