ಗದಗ ಬೆಟಗೇರಿ ನಗರಸಭೆಯ DOT ವಿಭಾಗದಲ್ಲಿ ಅನೇಕ ವರ್ಷಗಳಿಂದ ಕಿರಿಯ ಅಧಿಕಾರಿ ಕಾರ್ಯನಿರ್ವಹಿಸುತ್ತಿದ್ದ ಹಾಗೂ ಕರ್ನಾಟಕ ರಾಜ್ಯ ಪೌರ ಸೇವಾ ನೌಕರರ ಸೇವಾ ಸಂಘದ ರಾಜ್ಯ ಕಾರ್ಯಾಧ್ಯಕ್ಷಯಾಗಿದ್ದ ವೆಂಕಟೇಶ ಡಿ.ರಾಮಗಿರಿಯವರು (ವ.58) ಹೃದಯಘಾತದಿಂದ ಇಂದು 19-12-2024ರಂದು ನಿಧನರಾಗಿದ್ದು ಆಶ್ಚರ್ಯವನ್ನು ಮಾಡಿದೆ. ಕಳೆದ ಒಂದು ವಾರದಿಂದ ಹೃದಯ ಕಾಯಿಲೆಯಿಂದ ಬಳಲುತ್ತಿದ್ದ ವೆಂಕಟೇಶ ರಾಮಗಿರಿಯವರು ಇಂದು 19-12-2024ರಂದು ಗುರುವಾರ ಹೃದಯಘಾತಕ್ಕೆ ಒಳಗಾಗಿ ಸಾವನ್ನಪ್ಪಿದ್ದು ಕುಟುಂಬಕ್ಕೆ ಆಘಾತ ತಂದಿದೆ. 58 ವಯಸ್ಸಿನ ವೆಂಕಟೇಶ ರಾಮಗಿರಿಯವರು ಗದಗ ಬೆಟಗೇರಿ ನಗರಸಭೆಯ ಡಿಓಟಿ ವಿಭಾಗದಲ್ಲಿ ಬಹಳಷ್ಟು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರಲ್ಲದೆ ಅತ್ಯಂತ ಆತ್ಮೀಯ ನಡೆಯ ನೌಕರರಾಗಿ ಕಾಣಿಸಿಕೊಂಡಿದ್ದರು. ಪೌರ ಸೇವಾ ನೌಕರರ ಸೇವಾ ಸಂಘದಲ್ಲಿ ಸಕ್ರಿಯವಾಗಿ ನೌಕರರ ಸಮಸ್ಯೆಗಳಿಗೆ ಸ್ಪಂಧಿಸುತ್ತಿದ್ದ ವೆಂಕಟೇಶ ರಾಮಗಿರಿಯವರು ನಗುಮೊಗದ ವ್ಯಕ್ತಿಯಾಗಿ ಸಂಘಕ್ಕೆ ಶಕ್ತಿಯಾಗಿದ್ದರು. ಉತ್ತಮ ನಡೆ ನುಡಿಯೊಂದಿಗೆ ಸೇವಾಜೇಷ್ಠತೆಯ ವೆಂಕಟೇಶ ರಾಮಗಿರಿಯವರ ಅಕಾಲಿಕ ನಿಧನಕ್ಕೆ ಗದಗ ಬೆಟಗೇರಿ ನಗೆಸಭೆಯ ಹಿರಿ ಕಿರಿಯ ಅಧಿಕಾರಿಗಳು, ಸಿಬ್ಬಂದಿಗಳು, ಆಪ್ತರು, ಹಿತೈಷಿಗಳು, ಪೌರ ಸೇವಾ ನೌಕರರ ಸಂಘ ಕಂಬನಿ ಮಿಡಿದಿದೆ. ಸಂಘಟನಾ ಶ್ರಮಜೀವಿ, ಆಕರ್ಷಕ ವ್ಯಕ್ತಿತ್ವ, ಉತ್ತಮ ಸೇವೆಯ ವೆಂಕಟೇಶ ರಾಮಗಿರಿಯವರು ಇನ್ನು ನೆನಪು ಮಾತ್ರ ಎಂಬುದು ದು:ಖದ ಸಂಗತಿ.
© ASK News Kannada. All Rights Reserved. Designed by AGScurate IT Solutions LLP