ಗದಗ ಜಿಲ್ಲೆಯ ನರೆಗಲ್ ಮತ್ತು ಗಜೇಂದ್ರಗಡ, ಗದಗ ಬೆಟಗೇರಿ ನಗರಸಭೆಯಲ್ಲಿದ್ದ ಬಿಜೆಪಿ ಆಡಳಿತ ಕಿತ್ತು ಹೋಗಿರುವ ಹಿನ್ನಲೆಯಲ್ಲಿ ನೈತಿಕ ಹೊಣೆ ಹೊತ್ತು ಗದಗ ಜಿಲ್ಲಾ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ರಾಜು ಕುರುಡುಗಿ ರಾಜೀನಾಮೆ ಕೊಡಬೇಕೆಂದು ಪಕ್ಷದ ವಲಯದಲ್ಲಿ ಗುಸುಗುಸು ಚರ್ಚೆಗಳು ಜೋರಾಗಿವೆ. ಕಳೆದ ಒಂದು ವರ್ಷದ ಹಿಂದೆ ಯಾರದೋ ಹಿತಾಸಕ್ತಿಗಾಗಿ ಬಿಜೆಪಿ ಪಕ್ಷದ ಜಿಲ್ಲಾಧ್ಯಕ್ಷರಾಗಿ ತಾತ್ಕಾಲಿಕ ನೇಮಕಗೊಂಡ ರಾಜು ಕುರುಡುಗಿ ಆಡಳಿತ ಅವಧಿಯಲ್ಲಿ ಪಕ್ಷವು ಹಳ್ಳ ಹಿಡಿಯುತ್ತಿದೆ ಎಂಬುದಕ್ಕೆ ನರೆಗಲ್, ಗಜೇಂದ್ರಗಡ, ಗದಗ ಬೆಟಗೇರಿ ನಗರಸಭೆ ಸಾಕ್ಷಿಕರಿಸುತ್ತಿವೆ ಎಂಬ ಚರ್ಚೆ ಶುರುವಾಗಿದೆ. ಪಕ್ಷದ ಸಂಘಟನೆ ಕುಸಿತಾ ಇದೆ, ಬಿಜೆಪಿ ಆಡಳಿತದಲ್ಲಿಯ ಸ್ಥಳೀಯ ಸಂಸ್ಥೆಗಳು ಆಡಳಿತ ಕಳೆದುಕೊಳ್ಳುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಸ್ಥಳೀಯ ಸರ್ಕಾರದ ಆಡಳಿತವನ್ನು ಕಳೆದುಕೊಳ್ಳುತ್ತಿರುವ ಬಿಜೆಪಿ ಪಕ್ಷದ ವ್ಯವಸ್ಥೆಯಿಂದಾಗಿ ಮಾಜಿ ಸಿಎಂ ಹಾಗೂ ಸಂಸದರಾದ ಬಸವರಾಜ ಬೊಮ್ಮಾಯಿ, ರಾಜ್ಯ ನಾಯಕ, ಮಾಜಿ ಸಚಿವ, ಶಾಸಕರಾದ ಸಿ.ಸಿ.ಪಾಟೀಲ, ಮಾಜಿ ಸಚಿವರಾದ ಕಳಕಪ್ಪ ಬಂಡಿ, ಶಾಸಕರಾದ ಚಂದ್ರು ಲಮಾಣಿ, ಪ್ರೋ.ಎಸ್.ವ್ಹಿ.ಸಂಕನೂರು ಸೇರಿದಂತೆ ಬಿಜೆಪಿ ನಾಯಕರು ಪಕ್ಷದ ಕಾರ್ಯಕರ್ತರಿಗೆ ನಾಯಕರಿಗೆ ಉತ್ತರ ಕೊಡಂತಹ ಸ್ಥಿತಿ ನಿರ್ಮಾಣವಾಗಿದೆ. ಆಂತರಿಕೆ ಕಚ್ಚಾಟ, ಸ್ವಾರ್ಥಪರ ಹುಚ್ಚಾಟದ ಜೊತೆಗೆ ಪಕ್ಷದ ಬದ್ಧತೆ, ನಿಷ್ಠೆ, ಹೋರಾಟ, ಸಂಘಟನೆ ಇಲ್ಲದಿರುವುದು, ಗುಂಪುಗಾರಿಕೆ, ವೈಯಕ್ತಿಕ ದ್ವೇಷ, ಸ್ವಾರ್ಥಪರ ಸಾಧನೆ, ಪ್ರಬುದ್ಧತೆಯ ಕೊರತೆ ಸೇರಿದಂತೆ ಪಕ್ಷ ವಿರೋಧ, ವ್ಯಕ್ತಿ ವಿರೋಧದಿಂದಾಗಿ ಗದಗ ಜಿಲ್ಲಾ ಬಿಜೆಪಿ ಸೋರುತಿಹುದು ಮನೆಯ ಮಾಳಿಗೆ...ಅಜ್ಞಾನದಿಂದ ಎಂಬಂತಾಗಿದೆ ಎಂಬ ನೋವನ್ನು ಕಾರ್ಯಕರ್ತರು ತೋಡಿಕೊಳ್ಳುತ್ತಿದ್ದಾರೆ. ಇಂತಹ ಅಧ್ಯಕ್ಷತೆ ಅದಕ್ಷತೆಯಲ್ಲಿ ಬಿಜೆಪಿ ವ್ಯವಸ್ಥೆ ಮುಂದೆ ಸಾಗಿದರೆ ಇನ್ಮಷ್ಟು ಹಳ್ಳ ಹಿಡಿಯುವುದರಲ್ಲಿ ಯಾವುದೇ ಸಂಶಯವಿಲ್ಲ ಎಂಬ ವಾದ ಕೇಳಲಾಗುತ್ತಿದೆ. ಮುಂಬರುವ ತಾಲೂಕ ಪಂಚಾಯತ, ಜಿಲ್ಲಾ ಪಂಚಾಯತ ಚುನಾವಣೆಯಲ್ಲಿ ಬಿಜೆಪಿ ಗೋವಿಂದ ಎನ್ನುವ ಚರ್ಚೆ ಅಲ್ಲಗಳೆಯಲಾಗದು. ಗದಗ ಜಿಲ್ಲೆಯಲ್ಲಿ ಕಮರಿದ ಕಮಲ ಅರಳಬೇಕಂದರೆ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ದಕ್ಷತೆಯ, ಪಕ್ಷ ನಿಷ್ಟೆಯ, ಆಡಳಿತ ಪಕ್ಷಕ್ಕೆ ಚಾಟಿ ಬಳಸುವಂತಹ ವ್ಯಕ್ತತ್ವವುಳ್ಳ ವ್ಯಕ್ತಿಯನ್ನು ನೇಮಕ ಮಾಡಿದರೆ ಪಕ್ಷಕ್ಕೆ ಶಕ್ತಿಯಾಗಬಹುದು. ಕೇವಲ ಪಕ್ಷದ ಅಧ್ಯಕ್ಷ ಕುರ್ಚಿಗೆ, ರಾಜ್ಯದ ಕರೆಯ ಪ್ರತಿಭಟನೆಗೆ, ಸಭೆ ಸಮಾರಂಭದ ವೇದಿಕೆಯ ಮೇಲಿನ ಪೋಜಿಗೆ, ಗುಡ್ ಫಾರ್ ನಥಿಂಗ್ ಎಂಬಂತಿದ್ದರೆ ಪಕ್ಷ ಉದ್ದಾರವಾಗಲು ಸಾಧ್ಯವೇ ಇಲ್ಲ. ಹೀಗೆ ಗುಂಪುಗಾರಿಕೆ, ಬಣ, ಸ್ವಾರ್ಥತೆ, ವೈಯಕ್ತಿಕ ಹಿತ ಸಾಧನೆಯಲ್ಲಿ ಸಾಗಿದರೆ ಮುಂಬರುವ 2028ರ ವಿಧಾನ ಸಭೆ ಚುನಾವಣೆಯಲ್ಲಿ ನರಗುಂದ, ಶಿರಹಟ್ಟಿ ಕ್ಷೇತ್ರಗಳನ್ನು, ಸಂಕನೂರ್ ಸರ್ ಕ್ಷೇತ್ರವನ್ನು ಬಿಜೆಪಿ ಕಳೆದುಕೊಂಡರು ಆಶ್ಚರ್ಯ ಪಡುವಂತಿಲ್ಲ ಎಂಬ ಪಕ್ಷದ ನಿಷ್ಟಾವಂತರ ಚಿಂತನೆಯನ್ನು ಅಲ್ಲಗಳೆಯಲಾಗದು. 2018, 2023ರ ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಅನೀಲ ಮೆಣಸಿನಕಾಯಿಯ ಸೋಲು ಹೇಗಾಯ್ತು..? ಯಾರ ಕುತಂತ್ರದಿಂದ ಆಗಿದೆ, ಯಾರ ಹೊಂದಾಣಿಕೆ, ಒಳ ಒಪ್ಪಂದ ರಾಜಕೀಯದಿಂದ ಆಗಿದರ ಎಂಬುದನ್ನು ಮೆಲುಕು ಹಾಕಿದ ಬಿಜೆಪಿ ಕಾರ್ಯಕರ್ತರು ಈಗಲಾದರು ಬಿಜೆಪಿ ನಾಯಕರು ಎಚ್ಚೆತ್ತುಕೊಂಡು ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಸಮರ್ಥರನ್ನು ಆಯ್ಕೆ ಮಾಡಬೇಕೆಂಬ ನೋವು ತೋಡಿಕೊಳ್ಳುತ್ತಿದ್ದಾರೆ. ಚುನಾವಣೆ ಬಂದಾಗ ಪಕ್ಷದ ಸದಸ್ಯರಿಗೆ ವಿಪ್ ಕೊಡೊದು, ಸಭೆ ನಡೆಸೊದು, ಪಕ್ಷದ ನಿಷ್ಟೆ ಹೇಳೊದು, ವಿಶ್ವಾಸಕ್ಕೆ ತೆಗೆದುಕೊಳ್ಳುವುದು, ವ್ಯಕ್ತಿತ್ವಕ್ಕೆ ಗೌರವ ಕೊಡೊದು, ಪಕ್ಷದ ಚಟುವಟಿಕೆಯಲ್ಲಿ, ಸಂಘಟನೆಯಲ್ಲಿ, ಕಾರ್ಯಕ್ರಮಗಳಲ್ಲಿ ಎಲ್ಲರನ್ನು ಆಹ್ವಾನಿಸುವುದು, ಅಗತ್ಯ ಬಿದ್ದರೆ ಅವರ ಜೊತೆ ಹೋರಾಟಕ್ಕೆ ನಿಲ್ಲೋದು, ಪಕ್ಷದಲ್ಲಿ ಭರವಸೆ ಮೂಡಿಸೊದು ಮಾಡದೆ ಇದ್ದರೆ ಅಂತಹ ಅಧ್ಯಕ್ಷ ಯಾವ ಪುತುಷಾರ್ಥಕ್ಕೆ ಇರಬೇಕು ಎಂಬ ಪ್ರಶ್ನೆ, ಆಕ್ರೋಶ ಪಕ್ಷದ ವಲಯದಲ್ಲಿ ಕಾಣಲಾಗುತ್ತಿದೆಯಲ್ಲದೆ ಕೇವಲ ಫೇಸ್ ಬುಕ್ ಹೀರೋ ಆದರೆ ಪಕ್ಷ ಉಳಿಯುತ್ತಾ ಎಂಬ ಪ್ರಶ್ನೆ ಚರ್ಚೆಯಲ್ಲಿವೆ ಅದು ಏನೆ ಇರಲಿ ಮೊದಲು ರಾಜು ಕುರುಡುಗಿ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕು. ಕೊಡದಿದ್ದರೆ ಪಕ್ಷದ ನಾಯಕರು ಅವರಿಂದ ರಾಜೀನಾಮೆ ಪಡೆದುಕೊಳ್ಳಬೇಕೆಂಬ ಆಕ್ರೋಶ ಮಾತುಗಳು, ಬಿಸಿ ಬಿಸಿ ಚರ್ಚೆಗಳು, ಗುಸು ಗುಸು ಗದಗ ಜಿಲ್ಲಾ ಬಿಜೆಪಿಯಲ್ಲಿ ಜೋರಾಗಿದ್ದಂತು ನಿಜ.
© ASK News Kannada. All Rights Reserved. Designed by AGScurate IT Solutions LLP