ಗದಗ : ಶ್ರೀ ಸೌದತ್ತಿ ಯಲ್ಲಮ್ಮನ ಗುಡ್ಡದಲ್ಲಿ ಗದಗ ನಗರದ ಡಿ.ಸಿ.ಮಿಲ್ ಓಣಿಯ ಇಬ್ಬರು ಬಾಲಕರು ಈಜಲು ಹೋಗಿ ನೀರಲ್ಲಿ ಮುಳಗಿ ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ವರದಿಯಾಗಿದೆ. ಈ ಬಗೆಗೆ ಬುಧವಾರ ರಾತ್ರಿ ಗದಗ ಜಿಲ್ಲಾ ಅಟೋ ಚಾಲಕರ, ಮಾಲಿಕರ ಸಂಘ ವಾಟ್ಸಪ್ ಗ್ರುಪಲ್ಲಿ ಮಕ್ಕಳ ಸಾವಿನ ಬಗ್ಗೆ ಸುದ್ದಿ ಹರಿದಾಡುತ್ತಿದೆಯಲ್ಲದೆ ತೀವ್ರ ದು:ಖ ವ್ಯಕ್ತವಾಗ್ತಾ ಇದೆ. ಒಂದೆ ಕುಟುಂಬದವರು ಎನ್ನಲಾಗುತ್ತಿರುವ ಕುಮಾರ ಸಚಿನ್ ಗೋಪಾಲ್ ಕಟ್ಟಿಮನಿ, ವೀರೇಶ್ ಮರಿಯಪ್ಪ ಕಟ್ಟಿಮನಿ ಎಂಬ ಇಬ್ಬರು ಬಾಲಕರು ಈಜಲು ಹೋಗಿ ಜೀವ ಕಳೆದುಕೊಂಡಿದ್ದು ನಿಜಕ್ಕೂ ತೀವ್ರ ಆಘಾತಕಾರಿ ಸಂಗತಿಯಾಗಿದೆ. ಪ್ರತಿ ವರ್ಷ ಭಾರತ ಹುಣ್ಣಿಮೆ ಮುಂದೆ ಡಿ.ಸಿ.ಮಿಲ್ ಭಾಗದ ಜನರು ಶ್ರೀ ಯಲ್ಲಮ್ಮನ ಗುಡ್ಡಕ್ಕೆ ತೆರಳಿ ದರ್ಶನ ಪಡೆದುಕೊಂಡು ಬರುವ ಪದ್ಧತಿ ನಡೆದುಕೊಂಡು ಬರುತ್ತಿದೆ. ಅದರಂತೆ ಈ ವರ್ಷವು ತೆರಳಿದ ಸಂದರ್ಭದಲ್ಲಿ ಈ ರೀತಿ ಹೃದಯ ಕಲುಕುವ ದುರ್ಘಟನೆ ನಡೆದಿದ್ದು ದುರ್ವಿದಿಗೆ ಹಿಡಿ ಶಾಪ ಹಾಕುವಂತಾಗಿದೆ. ಈ ಘಟನೆ ಬೆಚ್ಚಿಬಿಳಿಸಿದೆಯಲ್ಲದೆ ಮಕ್ಕಳ ಬಗೆಗೆ ಪಾಲಕರು, ಪೋಷಕರು ಎಚ್ಚರವಹಿಸಬೇಕೆಂಬ ಸಂಕಟ, ವೇದನೆಯ ದು:ಖದ ಮಾತುಗಳು ಕೇಳಿ ಬರುತ್ತಿವೆ. ಇಬ್ಬರು ಬಾಲಕರ ಸಾವಿನಿಂದಾಗಿ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆಯಲ್ಲದೆ ಡಿ.ಸಿ.ಮಿಲ್ ಓಣಿ ಕಣ್ಣೀರ ಕಡಲಲ್ಲಿ ತೆಲಾಡುವಂತೆ ಮಾಡಿದೆ. ಬಾಳಿ ಬೆಳಗ ಬೇಕಾದ ಕಂದಮ್ಮಗಳು ಈಜಲು ಹೋಗಿ ಮೃತಪಟ್ಟಿದ್ದು ಕ್ರೂರ ವಿಧಿಯ ಅಟ್ಟಹಾಸ ಎನ್ನುವಂತಾಗಿದೆ.
© ASK News Kannada. All Rights Reserved. Designed by AGScurate IT Solutions LLP