ಗದಗ,ಮಾ.10 : ಹೆಸರಾಂತ ಸಾಹಿತಿ, ಹೊಟೇಲ್ ಉದ್ಯಮಿ, ಕಲಾ ಚೇತನ ಕಾವೇಂಶ್ರೀ ವಿಧಿವಶರಾಗಿದ್ದು ಸಾಹಿತ್ಯ ವಲಯದಲ್ಲಿ ತೀವ್ರ ಆಘಾತವುಂಟಾಗಿದೆ. ನೇಸರ ಹೋಟೆಲ್ ಮಾಲಿಕರಾಗಿದ್ದ ಕಾವೇಂಶ್ರಿ ಸೋಮವಾರ ಬೆಳಗಿನ ಜಾವ ಇಹಲೋಕ ತ್ಯಜಿಸಿದ್ದಾರೆ. ಸಾಹಿತ್ಯ ವಲಯದಲ್ಲಿ ಹೆಸರು ಮಾಡಿದ್ದ ಕಲಾ ಚೇತನ ರೂವಾರಿ ಕಾವೇಂಶ್ರಿಯವರು ತಮ್ಮ ಕಲಾ ಸೇವೆಯಿಂದ ಪ್ರಧಾನಿ ನರೇಂದ್ರ ಮೋದಿಜಿಯವರ ಮೆಚ್ಚುಗೆಗೆ ಪಾತ್ರರಾಗಿದ್ದರು. ತಮ್ಮ ಮನ್ ಕೀ ಬಾತ್ ದಲ್ಲಿ ಪ್ರಧಾನಿ ಮೋದಿಜಿ ಕಲಾ ಚೇತನ ಕಲಾ ಸೇವೆಯನ್ನು, ಕಾವೇಂಶ್ರಿ ಕಾರ್ಯಸೇವೆಯನ್ನು ಮನಸಾರೆ ಪ್ರಶಂಸಿದ್ದರು. ಕಾವೇಂಶ್ರಿ ಆತ್ಮಿಯತೆ, ನಡೆ ನುಡಿ, ಸ್ನೇಹಮಯ ವ್ಯಕ್ತಿತ್ವ ನಿಜಕ್ಕು ಅನುಕರಣೀಯ. ಕಾವೇಂಶ್ರಿ ಅವರ ಅಗಲಿಕೆ ಸಹಿಸಲಾಗಿದೆ ನಷ್ಟವಾಗಿದೆ. ಕಾವೇಂಶ್ರಿ ಆತ್ಮಕ್ಕೆ ಶಾಂತಿ ದೊರೆಯಲಿ ಅವರ ಕುಟುಂಬಕ್ಕೆ ದು:ಖ ಸಹಿಸುವ ಶಕ್ತಿ ಕೊಡಲಿ. ಕಾವೇಂಶ್ರಿಯವರ ಪಾರ್ಥಿವ ಶರೀರದ ಅಂತ್ಯ ಕ್ರಿಯೇಯು ಸೋಮವಾರ ಸಂಜೆ ಸಾಗರದ ಕಾಳ್ಮಂಜಿ ಗ್ರಾಮದಲ್ಲಿ ನಡೆಯಲಿದೆ ಎಂದು ತಿಳಿದು ಬಂದಿದೆ.
© ASK News Kannada. All Rights Reserved. Designed by AGScurate IT Solutions LLP