ಗದಗ, ಮಾ. 13 : ಗದಗ ಜಿಲ್ಲಾ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಸಾಕಷ್ಟು ಆಕಾಂಕ್ಷಿಗಳು ಪೈಪೋಟಿ ನಡೆಸಿದಾಗಲು ಸಹ ಅಂತಿಮವಾಗಿ ರಾಜ್ಯ ಘಟಕದಿಂದ ರಾಜು ಕುರುಡುಗಿ, ಕಳಕಪ್ಪ ಬಂಡಿ, ನಾಗರಾಜ ಕುಲಕರ್ಣಿ ಸೇರಿ 3 ಆಕಾಂಕ್ಷಿಗಳ ಪಟ್ಟಿ ಜಿಲ್ಲಾ ಘಟಕಕ್ಕೆ ರವಾನೆ ಆಗಿದ್ದು ತೀವ್ರ ಕುತೂಹಲ ಕೆರಳಿಸಿದೆ. ಇಂದು ಮಧ್ಯಾಹ್ನ 12 ಗಂಟೆಗೆ ಈ ಮೂರು ಆಕಾಂಕ್ಷಿಗಳಲ್ಲಿ ಒಬ್ಬರ ಹೆಸರು ಇಂದು 10-45 ರಿಂದ 11ರೊಳಗೆ ರಾಜ್ಯ ಘಟಕದಿಂದ ಮೇಲ್ ಬರಲಿದೆ. ಈ 3 ಆಕಾಂಕ್ಷಿಗಳಲ್ಲಿ ಯಾರ ಹೆಸರು ಬರುತ್ತದೆಯೋ ಅವರು ಇಂದು 12 ಗಂಟೆಗೆ ಪಕ್ಷದ ಕಚೇರಿಯಲ್ಲಿ ಗದಗ ಜಿಲ್ಲಾ ಬಿಜೆಪಿಯ ನೂತನ ಸಾರಥಿ ಆಗಲಿದ್ದಾರೆ. *ರಾಜು ಕುರುಡುಗಿ ನೂತನ ಅಧ್ಯಕ್ಷ...!?* ಬಹುತೇಕ ಕಳೆದ ಒಂದು ವರ್ಷದಿಂದ ತಾತ್ಕಾಲಿಕ ಅಧ್ಯಕ್ಷರಾಗಿ ನೇಮಕಗೊಂಡು ಅಧಕ್ಷರಾಗಿರುವ ರಾಜು ಕುರುಡುಗಿ 3 ವರ್ಷದ ಅವಧಿಗೆ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುವ ಸಾಧ್ಯತೆ ಹೆಚ್ಚಾಗಿದೆ ಎನ್ನಲಾಗುತ್ತಿದೆ. ಮಾಜಿ ಸಚಿವರು, ಮಾಜಿ ಶಾಸಕರಾಗಿರುವ ಕಳಕಪ್ಪ ಬಂಡಿ ಅವರಿಗೆ ಸಿಗಲಿದೆ ಎಂಬುದಕ್ಕೆ ಸಾಕಷ್ಟು ಕಾರಣಗಳಿದ್ದರೂ ಸಹ ಅವರನ್ನು ಅಧ್ಯಕ್ಷರನ್ನಾಗಿ ಮಾಡುವುದು ಡೌಟ್ ಎನ್ನಲಾಗುತ್ತಿದೆ. ಗದಗ ಜಿಲ್ಲಾ ಬಿಜೆಪಿಯ ಹಾಲಿ ಕೋಶಾಧ್ಯಕ್ಷ, ಎಂ.ಎ.ರಾಜಕೀಯ ಶಾಸ್ತ್ರ ಸ್ನಾತಕೋತ್ತರ ಪದವೀಧರ ನಾಗರಾಜ ಕುಲಕರ್ಣಿಗೆ ಅವಕಾಶ ಸಿಗಲ್ಲ ಎಂಬುದು ಸ್ಪಷ್ಟವಾಗಿ ಪಕ್ಷದ ವಲಯದಲ್ಲಿ ಕೇಳಲಾಗುತ್ತಿದೆ. 2013 ರಲ್ಲಿ ಬಿಜೆಪಿ ಬಿಟ್ಟಿದ್ದ ಬಿ.ಎಸ್.ಯಡಿಯೂರಪ್ಪನವರು ಕೆಜೆಪಿ ಪಕ್ಷ ಕಟ್ಟಿದ್ದರು. ಆ ಸಂದರ್ಭದಲ್ಲಿ ಬಿಜೆಪಿ ಬಿಟ್ಟು ಕೆಜೆಪಿ ಸೇರಿದ್ದ ರಾಜು ಕುರುಡುಗಿ ಬಿ.ಎಸ್.ವೈ ಆಂತರಿಕ ವಲಯದಲ್ಲಿದ್ದಾರೆ. ಈಗ ರಾಜ್ಯ ಬಿಜೆಪಿ ಘಟಕ್ ಅಧ್ಯಕ್ಷ ಯಡಿಯೂರಪ್ಪ ಪುತ್ರ ವಿಜಯೇಂದ್ರ ಆಡಳಿತದಲ್ಲಿರುವುದು, ಸ್ಥಳೀಯ ನಾಯಕರ ಒಲವು, ಬಲವು ರಾಜು ಕುರುಡುಗಿ ಕಡೆ ಇದೆ ಎಂಬ ಮಾತುಗಳು ಚರ್ಚೆ ಆಗುತ್ತಿರುವುದರಿಂದ ಕುರುಡುಗಿ ಅಧ್ಯಕ್ಷರಾಗುವ ಸಾಧ್ಯತೆ ಇದೆ ಎನ್ನಲಾಗುತ್ತದೆ. ಒಳ ರಾಜಕೀಯ ಆಟದಲ್ಲಿ, ಸ್ವಾರ್ಥಪರ ನೋಟದಲ್ಲಿ, ತಮ್ಮ ಹಿತಾಸಕ್ತಿ ಸಾಧಿಸುವ ಅಧ್ಯಕ್ಷ ಆಯ್ಕೆಯಲ್ಲಿ ಈ ಮೂವರಲ್ಲಿ ಯಾರಾಗ್ತಾರೆ ಗದಗ ಜಿಲ್ಲಾ ಬಿಜೆಪಿ ನೂತನ ಅಧ್ಯಕ್ಷ ಎಂಬುದು ಈಗಿರುವ ಕುತೂಹಲ.
© ASK News Kannada. All Rights Reserved. Designed by AGScurate IT Solutions LLP