ಆಡಳಿತದ ವ್ಯವಸ್ಥೆಯಲ್ಲಿ ಉತ್ತಮ ಅವಕಾಶ ಸಿಕ್ಕರೆ ಎಂತಹ ಸವಾಲುಗಳನ್ನು ಮೆಟ್ಟಿ ನಿಂತು ಜನಪರ ಆಡಳಿತ ಕೊಡಬಲ್ಲರು ಎಂಬುದಕ್ಕೆ ರಾಜ್ಯ ವೀರರಾಣಿ ಚೆನ್ನಮ್ಮ ಪ್ರಶಸ್ತಿಗೆ ಭಾಜನರಾದ ಗದಗ ಶಹರ ಪೋಲಿಸ್ ಠಾಣೆಯ PSI ಗೀರಿಜಾ ಜಕ್ಕಲಿ ಮೆಡಂ ಕಾಣ ಸಿಗುತ್ತಾರೆ. 1994ರಲ್ಲಿ ಪೋಲಿಸ್ ಇಲಾಖೆ ಸೇವೆಗೆ ಅಣಿಯಾದ ಗೀರಿಜಾ ಜಕ್ಕಲಿ ಅವರು ಹಂತ ಹಂತವಾಗಿ ಬಡ್ತಿ ಹೊಂದುತ್ತಾ 2019ರಲ್ಲಿ PSI ಆಇ ಬಡ್ತಿ ಪಡೆದು ಗದಗ ಟೌನ್ ಪೋಲಿಸ್ ಠಾಣಾ PSI ಹುದ್ದೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ್ದನ್ನು ಪರಿಗಣಿಸಿದ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘ(ರಿ) ವೀರ ರಾಣಿ ಚೆನ್ನಮ್ಮ ಪ್ರಶಸ್ತಿ ನೀಡಿ ಗೌರವಿಸಿದೆ. ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘ(ರಿ)ವಿಜಯಪುರ ಹಾಗೂ ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠ ಗದಗ ಇವರ ಸಂಯುಕ್ತ ಆಶ್ರಯದಲ್ಲಿ ರಾಜ್ಯ ಮಟ್ಟದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ PSI ಗೀರಿಜಾ ಜಕ್ಕಲಿ ಅವರಿಗೆ ಪ್ರಶಸ್ತಿ ಪುರಸ್ಕರಿಸಿದ್ದು ಗೀರಿಜಾ ಜಕ್ಕಲಿ ಸರಕಾರಿ ಸೇವೆ ಶ್ಲಾಘನೀಯ ಎನ್ನುವಂತಿದೆ. ರಾಜ್ಯಮಟ್ಟದ ವೀರರಾಣಿ ಕಿತ್ತೂರ ಚೆನ್ನಮ್ಮ ಮಹಿಳಾ ಸಾಧನಾ ಪ್ರಶಸ್ತಿ ಪಡೆದ ಪಿಎಸ್ಐ ಜಕ್ಕಲಿ ಅವರ ಸಾಹಸದ ಸಾಧನೆಗೆ ಪೋಲಿಸ್ ಇಲಾಖೆ ಅಭಿಮಾನಪಟ್ಟಿದೆ. PSI ಗೀರಿಜಾ ಜಕ್ಕಲಿಯವರ ಪತಿ ದಿ.ಬಸವರಾಜ ಡಂಬಳ ಅವರು ಸಹ ಪೋಲಿಸ್ ಇಲಾಖೆ ಉತ್ತಮ ಸೇವೆಗೈದು ಇಲಾಖೆ ಮೆಚ್ಚುಗೆ ಪಡೆದಿದ್ದರು PSI ಗೀರಿಜಾ ಜಕ್ಕಲಿಯವರ ಸಾಧನೆಗೆ ಸಾರ್ವತ್ರಿಕವಾಗಿ ಪ್ರಶಂಸೆಗೆ ಪಾತ್ರವಾಗಿದ್ದಾರೆ.
© ASK News Kannada. All Rights Reserved. Designed by AGScurate IT Solutions LLP