ಮುಂಡರಗಿ ಪಟ್ಟಣದ ಎಸ್.ಎಸ್. ಪಾಟೀಲ ನಗರ ಮತ್ತು ಧಾರವಾಡ ತಾಲ್ಲೂಕಿನ ಅಣ್ಣಿಗೇರಿ ಪಟ್ಟಣಗಳಲ್ಲಿ ಇತ್ತಿಚೆಗೆ ನಡೆದ ಕಳವು ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮಾರ್ಚ್ 18ರಂದು ಕಳ್ಳತನ ಪ್ರಕರಣದ ಪ್ರಮುಖ ಆರೋಪಿ ಕಾರ್ತಿಕ ಅಪ್ಪಣ್ಣ ಕೊಂಪಿ (ವ.24) ಎಂಬಾತನನ್ನು ಅರೆಸ್ಟ್ ಮಾಡಿರುವ ಪೋಲಿಸರು ಆತನಿಂದ ಸುಮಾರು ರೂ. 5ಲಕ್ಷ ಮೌಲ್ಯದ ಆಭರಣ ಹಾಗೂ ನಗದು ವಶಪಡಿಸಿಕೊಂಡಿದ್ದಾರೆ. ಕಾರ್ತಿಕ ಫೆ.8ರಂದು ಪಟ್ಟಣದ ಎಸ್.ಎಸ್.ಪಾಟೀಲ ನಗರದ ಮನೆಯೊಂದರಲ್ಲಿ ಚಿನ್ನದ ಸರ, ಕಿವಿಯೋಲೆ ಮೂಗುನತ್ತು ಸೇರಿದಂತೆ ವಿವಿಧ ಆಭರಣಗಳು ಹಾಗೂ ₹90 ಸಾವಿರ ನಗದು ದೋಚಿದ್ದ. ಅಣ್ಣಿಗೇರಿ ಪಟ್ಟಣದಲ್ಲಿ 46ಗ್ರಾಂ ಬಂಗಾರ ಬಳೆಗಳನ್ನು ಕಳವು ಮಾಡಿದ್ದ. ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್.ನೇಮಗೌಡ, ಡಿವೈಎಸ್ಪಿ ಎಂ.ಬಿ.ಸುಂಕದ, ಡಿಎಸ್ಪಿ ಪ್ರಭುಗೌಡರ ಕಿರೇದಳ್ಳಿ, ಸಿಪಿಐ ಮಂಜುನಾಥ ಕುಸುಗಲ್ಲ, ಪಿ.ಎಸ್.ಐ. ವಿ.ಜಿ.ಪವಾರ, ಬಿ.ಎನ್.ಯಳವತ್ತಿ ಮಾರ್ಗದರ್ಶನದಲ್ಲಿ ಸ್ಥಳೀಯ ಪೊಲೀಸರ ತಂಡ ಆರೋಪಿ ಸಮೇತ ಚಿನ್ನಾಭರಣ, ನಗದು ವಶಪಡಿಸಿಕೊಂಡಿದ್ದಾರೆ. ಎಸ್.ಎಂ.ಹಡಪದ, ಗುರು ಬೂದಿಹಾಳ, ಜೆ.ಐ.ಬಚೇರಿ, ವಿ.ಬಿ.ಬಿಸನಳ್ಳಿ, ಮಹೇಶ ಗೊಳಗುಳಕಿ, ಎಂ.ಎಂ.ಬನ್ನಿಕೊಪ್ಪ, ಕೆ.ಎನ್.ಮುಡಿಯಮ್ಮನವರ, ಲಕ್ಷ್ಮಣ ಲಮಾಣಿ, ಎಸ್.ಎಸ್.ಕಂಚಗಾರ, ಎಚ್.ಎಫ್.ಡಂಬಳ, ಬಸವರಾಜ ಬಣಕಾರ, ವಿನಾಯಕ ಬಾಲರಡ್ಡಿ, ಸಚಿಜೀವ ಕೊರಡೂರು ಅವರು ಪ್ರಕರಣವನ್ನು ಭೇದಿಸುವಲ್ಲಿ ಶ್ರಮಿಸಿದ್ದರು. *24 ಗಂಟೆ ನಿಗಾ...* ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಗಳಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಲಾಗಿದ್ದು 24 ಗಂಟೆ ನಿಗಾವಹಿಸಲಾಗುತ್ತದೆ ಎಂದು ಸುದ್ದಿಗಾರರಿಗೆ ತಿಳಿಸಿದ ಎಸ್ಪಿ ಬಿ.ಎಸ್.ನೇಮಗೌಡರು ಜಿಲ್ಲೆಯನ್ನು ರಾಜ್ಯದ ಸುರಕ್ಷಿತ ಜಿಲ್ಲೆಯನ್ನಾಗಿ ಮಾಡಲು ಪ್ರಯತ್ನಿಸಲಾಗುತ್ತಿದೆ ಎಂದರು.
© ASK News Kannada. All Rights Reserved. Designed by AGScurate IT Solutions LLP