ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಆರೋಪ ಸಾಭೀತಾಗಿದ್ದರಿಂದ ಇಲ್ಲಿನ ಗದಗ ಹೆಚ್ಚುವರಿ ಜಿಲ್ಲಾ ಮತ್ತು ಸೇಷನ್ಸ್ ಫೋಕ್ಸೋ (ವಿಶೇಷ ನ್ಯಾಯಾಲಯ) ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ ಮತ್ತು 5 ಲಕ್ಷ ರೂ.ದಂಡ ವಿಧಿಸಿ ಶುಕ್ರವಾರ ಆದೇಶ ಹೊರಡಿಸಿದೆ. ಶಿರಹಟ್ಟಿ ಪೊಲೀಸ್ ಠಾಣೆಯ ವ್ಯಾಪ್ತಿಯ ಗ್ರಾಮವೊಂದರ ನಿವಾಸಿಯಾದ ಸಿದ್ದಪ್ಪ ತಂದೆ ಪರಸಪ್ಪ ಮಾಗಡಿ (ವಯಾ: 38) ಶಿಕ್ಷೆಗೆ ಒಳಗಾದ ಅಪರಾಧಿ. ಈ ಅಪರಾಧಿಯು 17 ವರ್ಷದ ಬುದ್ದಿಮಾಂದ್ಯ ಅಪ್ರಾಪ್ತ ಬಾಲಕಿಯನ್ನು ನಿರಂತರ ಅತ್ಯಾಚಾರ ಮಾಡಿದ್ದಾಗಿ ಸಾಭಿತಾಗಿದೆ. ದನ ಕಾಯಲು ಅಡವಿಗೆ(ಕಾಡು) ಹೋದಾಗ ಆರೋಪಿಯು ನಿರಂತರ ಅತ್ಯಾಚಾರ ಮಾಡಿ. ಈ ಬಗ್ಗೆ ಯಾರಿಗಾದರೂ ಹೇಳಿದರೆ ಸಾಯಿಸುವುದಾಗಿ ಬೆದರಿಕೆ ಹಾಕಿದ್ದ, ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಬಾಲಕಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅತ್ಯಾಚಾರದಿಂದ ಗರ್ಭಣಿಯಾಗಿರುವುದು ಬೆಳೆಕಿಗೆ ಬಂದಿರುತ್ತದೆ. ಪೋಷಕರು ನೊಂದ ಬಾಲಕಿಗೆ ವಿಚಾರಿಸಿದಾಗ ಸಿದ್ದಪ್ಪ ತಂದೆ ಪರಸಪ್ಪ ಮಾಗಡಿ ಇವನು ನಿರಂತರ ಅತ್ಯಾಚಾರ ಮಾಡಿದ ಕಾರಣದಿಂದ ಗರ್ಭಣಿಯಾಗಿರುವುದಾಗಿ ತಿಳಿಸಿರುತ್ತಾಳೆ. ಕೆಲ ದಿನಗಳ ಬಳಿಕ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಈ ಕುರಿತು ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 150/2022 ಅಂತಾ ಪ್ರಕರಣ ದಾಖಲಾಗಿದ್ದು ಇರುತ್ತದೆ. ತನಿಖಾಧಿಕಾರಿಗಳಾದ ಶಿರಹಟ್ಟಿ ಪೊಲೀಸ್ ಠಾಣೆಯ ಸರ್ಕಲ್ ಪೊಲೀಸ್ ಇನೆಸ್ಪಕ್ಟರ್ ವಿಕಾಸ ಲಮಾಣಿಯವರು ನ್ಯಾಯಾಲಯಕ್ಕೆ ಅಂತಿಮ ವರದಿಯನ್ನು ದಿನಾಂಕ 06/12/2022 ರಂದು ಮಾನ್ಯ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು. ಆರೋಪಿ ಮಾಡಿದ ಅಪರಾದವು ಸಾಕ್ಷಾಧಾರಗಳು ರುಜುವಾತ ಆಗಿರುವುದರಿಂದ ಹೆಚ್ಚುವರಿ ಜಿಲ್ಲಾ ಮತ್ತು ಸೇಷನ್ಸ್ (ವಿಶೇಷ ನ್ಯಾಯಾಲಯ) ಫೋಕ್ಸೋ, ಗದಗ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀ. ರಾಜೇಶ್ವರ ಶೆಟ್ಟಿ ಅವರು ಆರೋಪಿಗೆ ಫೋಕ್ಸೋ ಕಾಯ್ದೆಯ ವಿವಿಧ ಕಲಂ.ಗಳ ಅಡಿಯಲ್ಲಿ 20 ವರ್ಷಗಳ ಕಠಿಣ ಶಿಕ್ಷೆ ಹಾಗೂ ರೂ.5,00,000/-(ಐದು ಲಕ್ಷ)ಗಳ ದಂಡ, ವಿಧಿಸಿ ದಂಡದ ಹಣವನ್ನು ನೊಂದ ಬಾಲಕಿಗೆ ಕೊಡಲು ಆದೇಶಿಸಿ, ಒಂದು ವೇಳೆ ದಂಡ ಕೊಡಲು ತಪ್ಪಿದಲ್ಲಿ 3 ವರ್ಷ ಹೆಚ್ಚುವರಿ ಸಾದಾ ಶಿಕ್ಷೆಯನ್ನು ವಿಧಿಸಿ ಆದೇಶಿಸಿದ್ದಾರೆ. ನೊಂದ ಬಾಲಕಿಗೆ ಕಾನೂನು ಸೇವಾ ಪ್ರಾಧಿಕಾರದಿಂದ ಪರಿಹಾರದ ಮೊತ್ತವನ್ನು ಘೋಷಿಸುವುದು ಬಾಕಿ ಇರುತ್ತದೆ. ಸರಕಾರದ ಪರವಾಗಿ (ಪೋಕ್ಸೋ) ವಿಶೇಷ ಸರಕಾರಿ ಅಭಿಯೋಜಕರಾದ ಅಮರೇಶ ಉಮಾಪತಿ ಹಿರೇಮಠ ವಾದ ಮಂಡಿಸಿದ್ದರು.
© ASK News Kannada. All Rights Reserved. Designed by AGScurate IT Solutions LLP