ask-banner
ad-banner
ರಾಜ್ಯ 2025-03-30

ಶೇರ್ ಮಾಡಿ  

*ಗದಗ ಜಿಲ್ಲಾ ಪೋಲಿಸ್ ಸಾಹಸ...* *ಅಂತರ ರಾಜ್ಯ ವಂಚಕರ ಬಂಧನ...ಚಿನ್ನಾಭರಣ ಬೆಳ್ಳಿ ವಶಕ್ಕೆ..*

ಅನೇಕ ರಾಜ್ಯಗಳಿಗೆ ಸವಾಲಾಗಿದ್ದ ವಂಚಕರನ್ನು ಬಂದಿಸಿ ಅವರಿಂದ ಲಕ್ಷಾಂತರ ಮೌಲ್ಯದ ಚಿನ್ನಾಭರಣ, ಬೆಳ್ಳಿ ವಶಕ್ಕೆ ಪಡೆಯುವಲ್ಲಿ ಗದಗ ಜಿಲ್ಲಾ ಪೋಲಿಸ್ ಯಶಸ್ವಿಯಾಗಿದ್ದು ಪೋಲಿಸ್ ಸಾಹಸಕ್ಕೆ ಸಾಕ್ಷಿಯಾಗಿದೆ. ಗದಗ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಎಸ್.ಬಿ.ನೇಮಗೌಡ ರವಿವಾರ ಪತ್ರಿಕಾಗೋಷ್ಠಿ ನಡೆಸಿ ಅಂತರಾಜ್ಯ ವಂಚಕರ ಬಂದನದ ವಿವರಿಸಿದರು. ವಂಚಕರ ವಂಚನೆಗೆ ಬಲೆ ಬೀಳದಂತೆ ಸಾರ್ವತ್ರಿಕವಾಗಿ ಗಮನ ಸೆಳೆದ ಎಸ್ಪಿ ಬಿ.ಎಸ್.ನೇಮಗೌಡ್ರು ಅಂತರಾಜ್ಯ ವಂಚಕರ ಪ್ರಕರಣದ ಬಗೆಗೆ ಸಂಪೂರ್ಣ ವಿವರಣೆ ನೀಡಿದರು. *ಬಂಧಿತ ವಂಚಕರ ಪ್ರಕರಣದಲ್ಲಿ ಏನಿದೆ...* ದಿನಾಂಕ:-03.07.2024 ರಂದು ಗದಗ ನಗರದ ಬೆಟಗೇರಿ ಬಡಾವಣೆ ಪೊಲೀಸ ಠಾಣೆಯ ವ್ಯಾಪ್ತಿಯ ವಿವೇಕಾನಂದ ನಗರ 4 ನೇ ಕ್ರಾಸದಲ್ಲಿ ಪ್ರಕರಣ ವರದಿಯಾಗಿದ್ದು, ಈ ಬಗ್ಗೆ ಬೆಟಗೇರಿ ಬಡಾವಣೆ ಪೊಲೀಸ ಠಾಣೆಯಲ್ಲಿ ಗುನ್ನಾ ನಂಬರ 55/2024 ಕಲಂ 318 (3) ಬಿ.ಎನ್.ಎಸ್ ಪ್ರಕರಣ ದಾಖಲಾಗಿದ್ದು, ಈ ಪ್ರಕರಣದಲ್ಲಿ ಇಬ್ಬರೂ ಆರೋಪಿತರು ತಾಮ್ರದ ಸಾಮಾನುಗಳನ್ನು ಸ್ವಚ್ಚ ಮಾಡಲು ಹೊಸದಾಗಿ ಕಂಪನಿ ಪ್ರಾರಂಭಿಸುತ್ತಿದ್ದು ಜಾಹಿರಾತಿಗಾಗಿ ಪೌಡರ ಮಾರಾಟ ಮಾಡುತ್ತಿದ್ದೆವೆ ಅಂತಾ ಹೇಳಿ ಯಾವುದೋ ಒಂದು ಕಂಪನಿಯ ಕಾರ್ಡನ್ನು ತೋರಿಸಿ ನಿಮ್ಮ ಮನೆಯಲ್ಲಿನ ತಾಮ್ರದ ಸಾಮಾನುಗಳನ್ನು ಕೊಡಿ ಸ್ವಚ್ಚ ಮಾಡಿ ತೋರಿಸುತ್ತೇವೆಂದು ತಾಮ್ರದ ಹಾಗೂ ಬೆಳ್ಳಿಯ ಸಾಮಾನುಗಳನ್ನು ಸ್ವಚ್ಚ ಮಾಡಿ ತೋರಿಸಿ ನಂಬಿಕೆ ಬರುವಂತೆ ಮಾಡಿ ಪಿರ್ಯಾದಿ ಧರಿಸಿದ್ದ 1) ಒಂದು 35 ಗ್ರಾಂ ತೂಕದ ಎರಡು ಎಳೆಯ ಬಂಗಾರದ ಚೈನ (1,40,000-00ರೂ) 2) 45 ಗ್ರಾಂ ತೂಕದ ನಾಲ್ಕು ಬಂಗಾರದ ಬಳೆಗಳು ಅ:ಕಿ: 1.80.000-00 ರೂ 3) ಒಂದು 10 ಗ್ರಾಂ ತೂಕದ ಬಂಗಾರದ ಚೈನ ಅ:ಕಿ: 40.000.00 4) ಒಂದು 03 ಗ್ರಾಂ ತೂಕದ ಬಂಗಾರದ ಉಂಗುರ ಅ:ಕಿ: 12000.00ರೂ ಒಟ್ಟು 93.00 ಗ್ರಾಂ ದ ಬಂಗಾರದ ಆಭರಣಗಳು ಇವುಗಳ ಒಟ್ಟು ಕಿಮ್ಮತ್ತು 3.72.000-೦೦ ರೂ ಆಭರಣಗಳನ್ನು ಆರೋಪಿತರು ಸ್ವಚ್ಚ ಮಾಡಿಕೊಡುತ್ತೇವೆಂದು ಹೇಳಿ ಪಡೆದುಕೊಂಡು ಅವುಗಳನ್ನು ನೀರಿನಲ್ಲಿ ಹಾಕಿ ಅದರಲ್ಲಿ ಬ್ರೌನ ಬಣ್ಣದ ಪೌಡರ ಹಾಕಿ ಕಾಯಿಸಿಕೊಂಡು ಬನ್ನಿ ಅಂತಾ ಹೇಳಿ ಪಿರ್ಯಾಧಿದಾರರ ಗಮನ ಬೇರೆ ಕಡೆ ಸೆಳೆದು ಮೋಸ ಮಾಡಿ ತೆಗೆದುಕೊಂಡು ಹೋದ ಬಗ್ಗೆ ಶ್ರೀಮತಿ ಶಕುಂತಲಾ ಕೋಂ ಬಾಲಪ್ಪಾ ಮಡಿವಾಳರ ಸಾ: ಗದಗ ವಿವೇಕಾನಂದ ನಗರ 4 ನೇ ಕ್ರಾಸ ಇವರು ಬಡಾವಣೆ ಠಾಣೆಗೆ ಹಾಜರಾಗಿ ಪಿರ್ಯಾದಿಯನ್ನು ಸಲ್ಲಿಸಿದ್ದರು. ಈ ಪ್ರಕರಣವನ್ನು ಭೇದಿಸುವ ಕುರಿತು ಗದಗ ಜಿಲ್ಲಾ ಆರಕ್ಷಕ ಅಧೀಕ್ಷಕರಾದ ಬಿ.ಎಸ್. ನೇಮಗೌಡ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಎಮ್.ಬಿ. ಸಂಕದ, ಗದಗ ಉಪ ವಿಭಾಗ ಪ್ರಭಾರ ಉಪ-ಅಧೀಕ್ಷಕರಾದ ಪ್ರಭುಗೌಡ ಕಿರೇದಹಳ್ಳಿ, ಕಮಲ ರವರ ಮಾರ್ಗದರ್ಶನದಲ್ಲಿ ಬೆಟಗೇರಿ ವೃತ್ತ ಸಿಪಿಐ ಧೀರಜ್, ಬಿ. ಸಿಂಧೆ ನೇತೃತ್ವದಲ್ಲಿ ತಂಡ ರಚಿಸಿ ಹಾಗೂ ಪಿಎಸ್‌ಐ ಮಾರುತಿ ಎಸ್. ಜೋಗದಂಡಕರ, PSI ಬಿ.ಟಿ.ರಿತ್ತಿ, ಸಿಬ್ಬಂದಿಗಳಾದ ಎನ್.ಡಿ.ಹುಬ್ಬಳ್ಳಿ, ಎಸ್.ಎಚ್. ಕಮತರ, ಪ್ರವೀಣ ಹಳ್ಳಳ್ಳಿ, ಪರಶುರಾಮ .ಎಚ್. ದೊಡಮನಿ, ಅಶೋಕ ಗದಗ, ನಾಗರಾಜ ಬರಡಿ, ಅಕ್ಷಯ ಬದಾಮಿ, ಶಿವಾನಂದ ಲಮಾಣಿ, ಮಾಲತೇಶ ಡಂಬರಮತ್ತೂರ, ತಾಂತ್ರಿಕ ವಿಭಾಗದ ಸಿಬ್ಬಂದಿಗಳಾದ ಗುರುರಾಜ ಬೂದಿಹಾಳ, ಸಂಜು ಕೊರಡೂರ ಸೇರಿ ದಿನಾಂಕ:-27.03.2025 ರಂದು ಪ್ರಕರಣವನ್ನು ಪತ್ತೆ ಮಾಡಿದ್ದು. ಸದರಿ ಪ್ರಕರಣದಲ್ಲಿ ಆರೋಪಿತರಾದ 1] ಧೀಪಕ ಗುಪ್ತಾ ತಂದೆ ಅಶೋಕ ಗುಪ್ತಾ (ವಯಾ 36) ಉದ್ಯೋಗ ಬಟ್ಟೆ ವ್ಯಾಪಾರ ಸಾ: ಗೋವಿಂದಪೂರ ಪೋಸ್ಟ್‌ ತಾ: ಗೋಗಡಿ ಜಿಲ್ಲಾ ಕಗರಿಯಾ ರಾಜ್ಯ ಬಿಹಾರ 2] ಭೀಫಿನಕುಮಾರ ಶಾಹ ತಂದೆ ನಂದಕಿಶೋರ ಶಾಹ ವಯಾ 35 ವರ್ಷ ಉದ್ಯೋಗ ಬಟ್ಟೆ ವ್ಯಾಪಾರ ಸಾ: ಜಮುನಿಯಾ ಪೋಸ್ಟ ತಾ: ನಗೋಚಿಯಾ ಜಿಲ್ಲಾ ಭಾಗಲಪೂರ ರಾಜ್ಯ ಬಿಹಾರ ಸದರಿ ಆರೋಪಿತರನ್ನು ಹುಬ್ಬಳ್ಳಿ ಶಹರದಲ್ಲಿ ಪತ್ತೆ ಮಾಡಿ ವಶಕ್ಕೆ ಪಡೆದು ವಿಚಾರಣೆಗೆ ಒಳ ಪಡಿಸಲಾಗಿತ್ತು ಎಂದರು. ಈ ಮೇಲ್ಕಂಡ ಪ್ರಕರಣದಲ್ಲಿ 1) ಒಂದು 35 ಗ್ರಾಂ ತೂಕದ ಎರಡು ಎಳೆಯ ಬಂಗಾರದ ಚೈನ ಅ:ಕಿ: 2) ಒಂದು 10 ಗ್ರಾಂ ತೂಕದ ಬಂಗಾರದ ಚೈನ 3) ಒಂದು 03 ಗ್ರಾಂ ತೂಕದ ಬಂಗಾರದ ಉಂಗುರ ಒಟ್ಟು 48.00 ಗ್ರಾಂ ದ ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡಿದ್ದಾಗಿ ತಿಳಿಸಿದರು. ಆರೋಪಿತರ ಮೇಲೆ ಈ ಕೆಳಕಂಡ ಜಿಲ್ಲೆಗಳ ಪೊಲೀಸ ಠಾಣೆಗಳಲ್ಲಿ ಹಳೆಯ ಪ್ರಕರಣಗಳಿದ್ದು, ಇವುಗಳು ಮಾನ್ಯ ನ್ಯಾಯಾಲಯದ ವಿಚಾರಣೆಯಲ್ಲಿರುತ್ತವೆ. ಮೈಸೂರ ಜಿಲ್ಲೆ ಉದಯಗಿರಿ ಪೊಲೀಸ ಠಾಣೆ ಗುನ್ನಾ ನಂ 138/2008 ಕಲಂ 399 402 ಐ.ಪಿಸಿ ಬೆಂಗಳೂರ ನಗರ ಸುಬ್ರಮಣ್ಯ ನಗರ ಪೊಲೀಸ ಠಾಣೆ ಗುನ್ನಾ 53/2023 ಕಲಂ 420 ಸಹ ಕಲಂ 511 ಹುಬ್ಬಳ್ಳಿ ಧಾರವಾಡ ಹಳೆ ಹುಬ್ಬಳ್ಳಿ ಪೊಲೀಸ ಠಾಣೆ ಗುನ್ನ ನಂ 20/2025 ಕಲಂ 318(4) ಬಿ.ಎನ್.ಎಸ್. ಆರೋಪಿತರ ಪತ್ತೆ ಕಾರ್ಯದಲ್ಲಿ ತೊಡಗಿದ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯಕ್ಕೆ ಗದಗ ಜಿಲ್ಲಾ ಆರಕ್ಷಕ ಅಧೀಕ್ಷಕರಾದ ಬಿ.ಎಸ್. ನೇಮಗೌಡ ಸೂಕ್ತ ಬಹುಮಾನ ಘೋಷಿಸಿದ್ದಾರೆ. *ಗದಗ ಖಾಕಿ ಕದರ್ ಗೆ ಜನರಿಂದ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದ್ದು ಅಂತರಾಜ್ಯ ವಂಚಕರನ್ನು ಬಂಧಿಸಿದ ಗದಗ ಜಿಲ್ಲಾ ಪೋಲಿಸ್ ಗೆ ಹ್ಯಾಟ್ಸಪ್ ಎನ್ನುತ್ತಿದ್ದಾರೆ....*

Anant S. Karkal
ವೀಕ್ಷಣೆ 1642

ಜನಪ್ರಿಯ ಸುದ್ದಿಗಳು

ಕಚೇರಿ ವಿಳಾಸ

Gadag - 582101

ಫೋನ್ ನಂ.

+91 9448302002

ಇಮೇಲ್ ಐಡಿ

asknewskannada@gmail.com

ಸೋಶಿಯಲ್ ಮೀಡಿಯಾ ಲಿಂಕ್ಸ್

© ASK News Kannada. All Rights Reserved. Designed by AGScurate IT Solutions LLP