ask-banner
ad-banner
ರಾಜ್ಯ 2025-04-01

ಶೇರ್ ಮಾಡಿ  

*ನನ್ನ ರಾಜಕೀಯ ನಿಲುವು ಕಾರ್ಯಕರ್ತರಲ್ಲಿ ನೋವು ತಂದಿದ್ದು ನಿಜ...ಆದರೆ ಒಳ ರಾಜಕೀಯ ನನಗೆ ಬೇಸರ ತಂದಿದೆ..* *ಅನಿಲ ಮೆಣಸಿನಕಾಯಿ...*

ಗದಗ,ಏ.1 : ನಾನು ತೆಗೆದುಕೊಂಡ ರಾಜಕೀಯ ನಿಲುವು ನಮ್ಮ ಕಾರ್ಯಕರ್ತರಲ್ಲಿ, ಅಭಿಮಾನಿಗಳಲ್ಲಿ, ಆಪ್ತರಲ್ಲಿ, ಹಿತೈಷಿಗಳಲ್ಲಿ ಬೇಸರ ಮೂಡಿಸಿದ್ದು ನಿಜ ಎಂದು ಅಖಿಲ ಭಾರತ ಸಮಾನತೆ ಮಂದಿರ ನಿರ್ಮಾಣ ಮಹಾಸಭಾ ರೂವಾರಿ ಅನೀಲ ಮೆಣಸಿನಕಾಯಿ ಹೇಳಿದರು. ಅವರು ಅನಿರೀಕ್ಷಿತವಾಗಿ ಆಸ್ಕ್ ನ್ಯೂಸ್ ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಚರ್ಚೆಗಿಳಿದಾಗ ಮೇಲನಂತೆ ಹೇಳಿದರಲ್ಲದೆ ಸ್ವಾರ್ಥಪರ ರಾಜಕೀಯ ಹೆಚ್ಚಾದರೆ ಗುರಿ ಸಾಧನೆ ಶೂನ್ಯ ಎಂಬುದು ಸ್ಪಷ್ಟವಾಗಿ ಅರ್ಥವಾಗಿದೆ ಎಂದರು. ನಾನು ರಾಜಕೀಯದಿಂದ ದೂರ ಇರುವುದರಿಂದ ನಮ್ಮ ಕಾರ್ಯಕರ್ತರ ಬೇಸರ ಮತ್ತು ಸಾಮಾಜಿಕ ಚಿಂತನೆ, ಸಾರ್ವತ್ರಿಕ ಬದುಕಿನ ಯೋಚನೆಯಿಂದಾಗಿ ಸಮಾನತೆಯ ಜಾತ್ರೆ, ಯಾತ್ರೆ, ಸಮಾನತೆ ಬುತ್ತಿ, ಸಮಾನತೆ ಮಂದಿರ ಯೋಜನೆಗೆ ಮುಂದಾಗಿದ್ದೆನೆ ಎಂದರು. *ಸಮಾನತೆ ಜಾತ್ರೆಗೆ ರಾಜಕೀಯ ಬೆರೆಸಬೇಡಿ...* ಅಖಿಲ ಭಾರತ ಸಮಾನತೆ ಮಂದಿರ ನಿರ್ಮಾಣ ಮಹಾಸಭಾ ಏಪ್ರೀಲ 15 ರಿಂದ 15 ದಿನಗಳ ಕಾಲ ಕೈಗೊಂಡಿರುವ ಸಮಾನತೆ ಜಾತ್ರೆಗೆ ರಾಜಕೀಯ ಬೆರೆಸಬೇಡಿ ಎಂದರಲ್ಲದೆ ಇದೊಂದು ಅತ್ಯಂತ ಮಾನವತಾ ವಾದದ ಜಾತ್ರೆ ಆಗಿದೆ ಎಂದರು. *ಮತ್ತೆ ರಾಜಕೀಯಕ್ಕೆ ಬರ್ತಿರಾ..?* ನಾನು ರಾಜಕೀಯದಿಂದ ದೂರಾಗಿದ್ದು ಕಾರ್ಯಕರ್ತರಲ್ಲಿ ಬೇಸರ ತಂದಿದೆ. ಆದರೆ ಒಳರಾಜಕೀಯ ನನ್ನ ಘಾಸಿಗೊಳಿಸಿದೆ ಎಂದಷ್ಟೆ ಹೇಳಿದರು. *ರಾಜಕೀಯ ಬೇಡಾಂದ್ರೆ ಮತ್ಯಾಕೆ ಯಾತ್ರೆ, ಜಾತ್ರೆ, ಬುತ್ತಿ...?* ನಾನು ಜನರ ಸೇವೆ, ಕ್ಷೇತ್ರದ ಅಭಿವೃದ್ಧಿ ಕನಸು ಹೊತ್ತುಕೊಂಡು ರಾಜಕೀಯಕ್ಕೆ ಬಂದಿದ್ದೆ. ಆದರೆ ಮೂರು ಮೂರು ಭಾರಿ ಸೋತಿದ್ದು ನಿಜ. ಹಾಗಂತ ಜನ ಸೇವೆಯಿಂದ ದೂರ ಇರಲಾಗದು. ಹಾಗಾಗಿ ಜನಪರ, ಸಾಮಾಜಿಕ, ಸಾರ್ವತ್ರಿಕ ಪರವಾದ ಕಾರ್ಯದಲ್ಲಿ ಎಲ್ಲರ ಸಹಕಾರದೊಂದಿಗೆ ತೊಡಗಿಸಿಕೊಂಡಿದ್ದೆನೆ ವಿನಹ ನಾನು ರಾಜಕೀಯಕ್ಕಾಗಿ ಯಾವುದೆ ಕಾರ್ಯಕ್ರಮಗಳನ್ನು ಮಾಡಿಲ್ಲ ಮಾಡೊದು ಇಲ್ಲ ಎಂದರು. ರಾಜಕೀಯವೇ ಬೇರೆ, ವೈಯಕ್ತಿಕ ಹಿತಾಸಕ್ತಿಗಳೆ ಬೇರೆ ಎಂದರಲ್ಲದೆ ಕ್ಷೇತ್ರದ ಜನರ ಸೇವೆಯಲ್ಲಿ ಯಾವತ್ತೂ ಇರ್ತಿನಿ ಎಂದಿದ್ದು ವಿಶೇಷವಾಗಿತ್ತು. ಕ್ಷೇತ್ರದ ಜನರು, ಕಾರ್ಯಕರ್ತರು, ಅಭಿಮಾನಿಗಳು, ಹಿತೈಷಿಗಳು, ಸ್ನೇಹಿತರು, ಆಪ್ತರು ಸೇರಿ ಬಹುತೇಕರು ಇವತ್ತಿಗೂ ನನ್ನನ್ನು ಪ್ರೀತಿಯಿಂದ, ಆಪ್ತತೆಯಿಂದ ಕಾಣುತ್ತಿದ್ದಾರೆ. ಅವರ ಪ್ರೀತಿಗಾಗಿ ಏನಾದರು ಒಳತನ್ನು ಮಾಡಬೇಕೆಂಬುದು ನನ್ನ ಹಂಬಲವಾಗಿದೆ ಎನ್ನುತ್ತಲೆ ನನಗೆ ಫ್ಲೈಟ್ ಟೈಮ ಆಗುತ್ತೆ ಎನ್ನುತ್ತಲೆ ಚರ್ಚೆ ಮುಗಿಸಿ ಹೊರಟ ಅನಿಲ ಮೆಣಸಿನಕಾಯಿಯವರಿಗೆ ನೆನಪಿನ ಕಾಣಿಕೆ ಕೊಟ್ಟು ಗೌರವಿಸಿ ಬೀಳ್ಕೋಡಲಾಯಿತು. ಅವರ ಜೊತೆ ಗದಗ ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸಿದ್ದಣ್ಣ ಪಲ್ಲದೆ, ಬಿಜೆಪಿ ನಾಯಕ ವಸಂತ ಪಡಗದ ಇತರರು ಉಪಸ್ಥಿತರಿದ್ದರು.

Anant S. Karkal
ವೀಕ್ಷಣೆ 1249

ಜನಪ್ರಿಯ ಸುದ್ದಿಗಳು

ಕಚೇರಿ ವಿಳಾಸ

Gadag - 582101

ಫೋನ್ ನಂ.

+91 9448302002

ಇಮೇಲ್ ಐಡಿ

asknewskannada@gmail.com

ಸೋಶಿಯಲ್ ಮೀಡಿಯಾ ಲಿಂಕ್ಸ್

© ASK News Kannada. All Rights Reserved. Designed by AGScurate IT Solutions LLP