ask-banner
ad-banner
ರಾಜ್ಯ 2025-05-01

ಶೇರ್ ಮಾಡಿ  

*ಕೌಟುಂಬಿಕ ಕಲಹಕ್ಕೆ ಬೇಸತ್ತು ದಂಪತಿಗಳಿಬ್ಬರು ಒಂದೆ ಸಿರೆಯಲ್ಲಿ ನೇಣಿಗೆ ಶರಣು...*

ಗದಗ, ಏ. 1 : ಕೌಟುಂಬಿಕ ಕಲಹಕ್ಕೆ ಬೇಸತ್ತು ಪತಿ ಪತ್ನಿ ಇಬ್ಬರು ಒಂದೇ ಸಿರಿಯಿಂದ ನೆಣು ಬೀಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಮನ ಕಲಕುವಂತಿದೆ. ಪತಿ ವಿಕ್ರಮ್ ಶಿರಹಟ್ಟಿ (30), ಪತ್ನಿ ಶಿಲ್ಪಾ ವಿಕ್ರಮ್ ಶಿರಹಟ್ಟಿ (28) ಆತ್ಮ ಹತ್ಯೆ ಮಾಡಿಕೊಂಡ ದುರ್ದೈವಿಗಳು. ಹುಲಕೋಟಿ ಗ್ರಾಮದಲ್ಲಿ ಪೊಸ್ಟ್ ಆಫೀಸ್ ಹಿಂಬಾಗದಲ್ಲಿರುವ ತಮ್ಮ ಮನೆಯಲ್ಲಿ ನೆಣು ಹಾಕಿಕೊಂಡ ಘಟನೆ ವರದಿಯಾಗಿದೆ. ಕಳೆದ ಒಂದು ವಾರದಿಂದ ಕುಟುಂಬದಲ್ಲಿ ಕಲಹ ನಡೆದಿದ್ದರಿಂದ ಜಿಗುಪ್ಸೆಗೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಆತ್ಮಹತ್ಯೆಗೆ ಶರಣಾದ ದಂಪತಿಗಳು ಮೂಲತಃ ಗದಗ ತಾಲೂಕಿನ ನಾಗಾವಿ ಗ್ರಾಮದ ನಿವಾಸಿಗಳು ಎನ್ನಲಾಗುತ್ತದೆ. ಹುಲಕೋಟಿಯ ಕರ್ನಾಟಕ ಒನ್ ಸೆಂಟರ್ ದಲ್ಲಿ ಮೃತ ವಿಕ್ರಮ್ ಕೆಲಸ ಮಾಡುತ್ತಿದ್ದ ಎಂದು ಹೇಳಲಾಗುತ್ತಿದೆ. ಸ್ಥಳಕ್ಕೆ ಗದಗ ಗ್ರಾಮೀಣ ಪೊಲೀಸರು ಭೇಟಿ ಪರಿಶೀಲನೆ ನಡೆಸಿರುವ ಜೊತೆಗೆ ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.

Anant S. Karkal
ವೀಕ್ಷಣೆ 5738

ಜನಪ್ರಿಯ ಸುದ್ದಿಗಳು

ಕಚೇರಿ ವಿಳಾಸ

Gadag - 582101

ಫೋನ್ ನಂ.

+91 9448302002

ಇಮೇಲ್ ಐಡಿ

asknewskannada@gmail.com

ಸೋಶಿಯಲ್ ಮೀಡಿಯಾ ಲಿಂಕ್ಸ್

© ASK News Kannada. All Rights Reserved. Designed by AGScurate IT Solutions LLP