ಗದಗ ಮೇ. 17 : ಗದಗ ತಹಶೀಲ್ದಾರ ಆಫೀಸನಲ್ಲಿ ಅಮಾಯಕ ಯುವಕನ ಮೇಲೆ ಹಲ್ಲೆ ಮಾಡಿದ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ಸಕತ್ ಹರಿದಾಡುತ್ತಿದೆ. ಅಮಾಯಕ ಯುವಕನ ಮೇಲೆ ಉಪ ತಹಶೀಲ್ದಾರ ಹಾಗೂ ಅವರ ಸಹಚರರು ಹಲ್ಲೆ ಮಾಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಮೇತ ಹರಿದಾಡುತ್ತಿರುವುದು ಹುಬ್ಬೇರಿಸಿ ಕಣ್ಣರಳಿಸಿ ಆಶ್ಚರ್ಯಚಕಿತರಾಗಿ ನೋಡುವಂತಿದೆ. ಗದುಗಿನ ತಹಶೀಲ್ದಾರ ಕಛೇರಿಯಲ್ಲಿ ಅಮಾಯಕನ ಮೇಲೆ ಹಲ್ಲೆ ಮಾಡುತ್ತಿದ್ದಾರುವ ಘಟನೆಯನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದು ಭಯ, ಆತಂಕವನ್ನುಂಟು ಮಾಡುತ್ತಿದೆ. ಸದ್ಯ ಈ ವಿಡಿಯೋ ಸಕ್ಕತ್ ವೈರಲ್ ಆಗಿದೆಯಾದರು ಹಲ್ಲೆ ಮಾಡಿರುವ ಹಿನ್ನಲೆ ಬಗೆಗೆ ಸ್ಪಷ್ಟತೆ ಇಲ್ಲವಾಗಿದೆ. ಕಾರಣಗಳು ಏನೇ ಇದ್ದರು ತಹಶೀಲ್ದಾರ ಕಚೇರಿಯಲ್ಲಿಯೇ ಈ ರೀತಿಯ ದುಂಡಾವರ್ತನೆ ಎಷ್ಟು ಸರಿ ಎಂಬ ಚರ್ಚೆ ಆಗುತ್ತಿರುವ ಜೊತೆಗೆ ಕಾನೂನು ಸಚಿವರ ಜಿಲ್ಲೆಯಲ್ಲಿಯೇ ಈ ರೀತಿಯ ಗೂಂಡಾಗಿರಿ ನಡೆದರೆ ರಾಜ್ಯದ ಜನತೆಯ ಗತಿ ಏನು ಎಂಬ ಪ್ರಶ್ನೆಗಳು ತೀವ್ರ ಚರ್ಚೆಗೆ ಗ್ರಾಸವಾಗಿದ್ದು ಆತಂಕ ಸೃಷ್ಟಿದೆ. ಆದರೆ ಈ ಘಟನೆಗೆ ಕಾರಣ ಏನು...? ಎಂಬ ಬಗೆಗೆ ಸ್ಪಷ್ಡತೆ ಇಲ್ಲ. ಆದರೂ ಕಾನೂನು ಸಚಿವರ ಜಿಲ್ಲೆ, ಕ್ಷೇತ್ರದಲ್ಲಿ ಈ ರೀತಿಯ ಗೂಂಡಾ ವರ್ತನೆ ಅನೇಕ ಅನುಮಾನಗಳನ್ನು ಹುಟ್ಟು ಹಾಕಿದ್ದು ಸುಳ್ಳಲ್ಲ.
© ASK News Kannada. All Rights Reserved. Designed by AGScurate IT Solutions LLP