ask-banner
ad-banner
ರಾಜ್ಯ 2025-05-20

ಶೇರ್ ಮಾಡಿ  

*ತಹಶೀಲ್ದಾರ ಕಚೇರಿಯಲ್ಲಿ ಮಾರಾಮಾರಿ ಘಟನೆ...* *ಉಪ ತಹಶೀಲ್ದಾರ್ ಸಸ್ಪೆಂಡ್ ಆಯ್ತು.. ಉಳಿದವರಿಗೆ ಯಾವ ಶಿಕ್ಷೆ : ಗೋವಿಂದಗೌಡ್ರ ಪ್ರಶ್ನೆ*

ಗದಗ, ಮೇ. 20 : ತಹಶೀಲ್ದಾರ ಕಚೇರಿಯಲ್ಲಿ ಉಪ ತಹಶೀಲ್ದಾರ ಸಮೇತ ಅವರ ಸಂಗಡಿಗರು ಅಮಾಯಕ ವ್ಯಕ್ತಿ ಮೇಲೆ ಹಲ್ಲೆ ಮಾಡಿದ ಪ್ರಕರಣದಲ್ಲಿ ಉಪ ತಹಶೀಲ್ದಾರ್ ಡಿ.ಟಿ ವಾಲ್ಮೀಕಿ ಅವರನ್ನು ಅಮಾನತ್ತು ಮಾಡಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದರೂ ಸಹ ಅದೇ ಘಟನೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಉಪಸ್ಥಿತಿ ಹಾಗೂ ಅವರು ಕೂಡ ಹಲ್ಲೆ ಮಾಡಿರುವ ದೃಶ್ಯಗಳು ವೈರಲ್ ಆದ ವಿಡಿಯೋದಲ್ಲಿ ಕಂಡು ಬಂದಿದ್ದು ಅವರ ಮೇಲೆ ಏನು ಕ್ರಮ ಕೈಗೊಳ್ಳಲಾಗಿದೆ ಎಂದು ಜೆಡಿಎಸ್ ಪಕ್ಷದ ರಾಜ್ಯದ ವಕ್ತಾರ ವೆಂಕನಗೌಡ ಆರ್. ಗೋವಿಂದಗೌಡ್ರ ಪ್ರಶ್ನಿಸಿದ್ದಾರೆ . ಈ ಬಗೆಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು ವಿಡಿಯೋದಲ್ಲಿರುವ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಏನು ಕ್ರಮ ಕೈಗೊಳ್ಳಲಾಯಿತು ಎಂಬುದು ಇದುವರೆಗೂ ತಿಳಿದು ಬಂದಿಲ್ಲವೆಂದು ಆಡಳಿತಕ್ಕೆ ಪ್ರಶ್ನೆ ಮಾಡಿದ್ದಾರೆ. ಸರಕಾರಿ ಕಚೇರಿಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಅಡ್ಡಗಳನ್ನಾಗಿ ಪರಿವರ್ತಿಸಿಕೊಂಡಿದ್ದಾರೆಂದು ಆರೋಪಿಸಿರುವ ಅವರು ಗದಗ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ಈ ಬಗ್ಗೆ ಗಮನಹರಿಸಬೇಕೆಂದು ಸಲಹೆ ನೀಡಿದ್ದಾರಲ್ಲದೆ ಇಲ್ಲದಿದ್ದರೆ ಇದು ಕೆಡಗಾಲಕ್ಕೆ ದಾರಿ ಮಾಡಿಕೊಡುತ್ತದೆ ಎಂದಿದ್ದಾರೆ. ಎಲ್ಲಾ ಕಚೇರಿಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಅನಧಿಕೃತ ಉಪಸ್ಥಿತಿ ಸಾರ್ವಜನಿಕರಿಗೆ ದೊಡ್ಡಮಟ್ಟದ ತಲೆ ನೋವಾಗಿದ್ದು ಎಲ್ಲಾ ಸರ್ಕಾರಿ ಕಾರ್ಯಕ್ರಮಗಳಲ್ಲಿ ಚುನಾಯಿತ ಪ್ರತಿನಿಧಿಗಳಲ್ಲದ ಕಾಂಗ್ರೆಸ್ ಕೆಲ ಕಾರ್ಯಕರ್ತರ ಉಪಸ್ಥಿತಿ, ಅಭಿವೃದ್ಧಿ ಕಾರ್ಯಗಳ ಗುದ್ದಲಿ ಪೂಜೆ ಕಾರ್ಯಕ್ರಮಗಳಲ್ಲಿಯ ಇವರ ಪ್ರಮುಖ ಪಾತ್ರ ಅಸಹ್ಯ ತರುತ್ತಿದೆ.ಇದನ್ನು ನೋಡಿಯೂ ಕಾನೂನು ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಮೌನಕ್ಕೆ ಜಾರಿದ್ದನ್ನು ನೋಡಿದಾಗ ಇದಕ್ಕೆ ಅವರೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂಬ ಭಾವನೆ ಮೂಡುತ್ತಿದೆ ಎಂದಿದ್ದಾರೆ. ತಕ್ಷಣ ಈ ಘಟನೆಯಲ್ಲಿ ಇದ್ದ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಕ್ರಮ ಕೈಗೊಳ್ಳಬೇಕು, ಇಲ್ಲದಿದ್ದರೆ ಗುಂಡಾಗಿರಿಗೆ ಕುಮ್ಮಕ್ಕು ನೀಡಿದಂತಾಗುತ್ತದೆ ಎಂದು ಜೆಡಿಎಸ್ ಪಕ್ಷದ ರಾಜ್ಯ ವಕ್ತಾರ ವೆಂಕನಗೌಡ ಆರ್. ಗೋವಿಂದಗೌಡ್ರ ಒತ್ತಾಯಿಸಿದ್ದಾರೆ. ಈ ಘಟನೆಯ ಬಗ್ಗೆ ಯಾರೂ ದೂರು ನೀಡದಿದ್ದರೂ ಕೂಡ ಸ್ವಯಂ ಪ್ರೇರಿತರಾಗಿ ಪೊಲೀಸರು ದೂರು ದಾಖಲಿಸಿಕೊಂಡು ಕ್ರಮ ಕೈಗೊಳ್ಳಬೇಕೆಂದು ಬಸವರಾಜ್ ಅಪ್ಪಣ್ಣವರ, ಎಂ. ಎಸ್.ಪರ್ವತಗೌಡ್ರ, ಪ್ರಫುಲ್ಲ ಪುಣೇಕರ್, ಜೋಸೆಫ್ ಉದೋಜಿ, ಸಂತೋಷ್ ಪಾಟೀಲ, ರಮೇಶ ಹುಣಶೀಮರದ, ಪುಲಿಕೇಶಿ ಗಾಳಿ, ಶರಣಯ್ಯ ಹೊಂಬಾಳಿಮಠ, ಡಾ. ಶರಣಪ್ಪ ಹೂಗಾರ, ಕಲ್ಕುಸಾ ಸಿಂಗ್ರಿ, ಜಿ. ಬಿ. ಹನುಮಾನಾಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಪತ್ರಿಕಾ ಪ್ರಕಟಣೆಯ ಮೂಲಕ ಒತ್ತಾಯಿಸಿದ್ದಾರೆ.

Anant S. Karkal
ವೀಕ್ಷಣೆ 1811

ಜನಪ್ರಿಯ ಸುದ್ದಿಗಳು

ಕಚೇರಿ ವಿಳಾಸ

Gadag - 582101

ಫೋನ್ ನಂ.

+91 9448302002

ಇಮೇಲ್ ಐಡಿ

asknewskannada@gmail.com

ಸೋಶಿಯಲ್ ಮೀಡಿಯಾ ಲಿಂಕ್ಸ್

© ASK News Kannada. All Rights Reserved. Designed by AGScurate IT Solutions LLP