ಗದಗ,ಮೇ.23 : ಯಾರೋ ಮಾಡಿದ ತಪ್ಪಿಗೆ ಇನ್ನಾರಿಗೋ ಶಿಕ್ಷೆಗೊಳಪಡಿಸಿದ್ದು ಸರಿನಾ ಎಂದು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಪ್ರಶ್ನೆ ಮಾಡಿರುವ ಜೊತಗೆ ಅಮಾನತಗೊಳಿಸಿರುವ ಉಪ ತಹಶೀಲ್ದಾರ ಡಿ. ಟಿ. ವಾಲ್ಮೀಕಿ ಅವರ ಅಮಾನತನ್ನು ಕೂಡಲೆ ರದ್ದುಗೊಳಿಸಿ ಕರ್ತವ್ಯಕ್ಕೆ ನಿಯುಕ್ತಿಗೊಳಿಸಬೇಕೇಂದು ಆಗ್ರಹಿಸಿದೆ. ಶ್ರೀ ಡಿ. ಟಿ. ವಾಲ್ಮೀಕಿ, ಉಪ ತಹಶೀಲ್ದಾರರು, ನಾಡ ಕಚೇರಿ, ಬೆಟಗೇರಿ-ಗದಗರವರ ಅಮಾನತ್ತು ಆದೇಶ ರದ್ದುಗೊಳಿಸಿ ಸರಕಾರಿ ಕೆಲಸಕ್ಕೆ ಆದೇಶ ನೀಡುವಂತೆ ಕೋರಿ. ಈ ಬಗೆಗೆ ಸರಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಸೋಮವಾರ ಗದಗ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಬೆಟಗೇರಿ-ಗದಗ ನಾಡ ಕಚೇರಿ ಉಪ ತಹಶೀಲ್ದಾರರಾದ ಡಿ. ಟಿ. ವಾಲ್ಮೀಕಿಯವರ ಅಮಾನತ್ ಆದೇಶವನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದೆ. ಬೆಟಗೇರಿ-ಗದಗ ನಾಡ ಕಚೇರಿ ಉಪ ತಹಶೀಲ್ದಾರರಾದ ಡಿ. ಟಿ. ವಾಲ್ಮೀಕಿಯವರು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಜಿಲ್ಲಾ ಶಾಖೆ ಗದಗ ಇದರ ನಿರ್ದೇಶಕರು ಹಾಗೂ ರಾಜ್ಯ ಪರಿಷತ್ ಸದಸ್ಯರಿದ್ದಾರೆಂಬುದನ್ನು ತಮ್ಮ ಗಮನಕ್ಕೆ ತರಲು ಬಯಸುತ್ತೆವೆಂದು ಮನವಿ ತಿಳಿದಿದ್ದಾರೆ. ಗದಗ ತಹಶೀಲ್ದಾರ ಕಛೇರಿಯಲ್ಲಿ ದಿನಾಂಕ 17-05-2025 ಶನಿವಾರದಂದು ನಡೆದ ಅನಿರೀಕ್ಷತೆಯ ಘಟನೆಗೆ ಸಂಬಂಧಿಸಿದಂತೆ ತಾವು ಸದರಿಯವರನ್ನು ಅಮಾನತ್ತುಗೊಳಿಸಿದ್ದು ಈ ಘಟನೆಯಲ್ಲಿ ಡಿ.ಟಿ.ವಾಲ್ಮೀಕಿಯವರ ಪಾತ್ರ ಇರುವುದಿಲ್ಲ. ಸದರಿ ಘಟನೆಯು ಅನಿರೀಕ್ಷಿತವಾಗಿ ನಡೆದಿದೆ. ಈ ಘಟನೆಗು ಉಪ ತಹಶೀಲ್ದಾರ ಡಿ.ಟಿ.ವಾಲ್ಮೀಕಿಯವರಿಗು ಯಾವಿದೆ ರೀತಿ ಸಂಭಂದವಿಲ್ಲದ್ದರಿಂದ ಸದರಿಯವರ ಅಮಾನತ್ತು ಆದೇಶ ರದ್ದುಗೊಳಿಸಿ ಸರಕಾರಿ ಕೆಲಸಕ್ಕೆ ನಿಯುಕ್ತಿಗೊಳಿಸಿ ಆದೇಶ ನೀಡುವಂತೆ ಮನವಿ ಮಾಡಿದ್ದಾರೆ. ಕಛೇರಿಯಲ್ಲಿ ನಡೆದ ಘಟನೆ ಬಗೆಗೆ ಈಗಾಗಲೇ ಕೊಟ್ಟ ನೋಟೀಸಿಗೆ ಸ್ಪಷ್ಟವಾದ ವಿವರಣೆ ನೀಡಿದ್ದಾಗ್ಯೂ ಅಮಾನತ್ ಮಾಡಿದ್ದು ಹಲವಾರು ಪ್ರಶ್ನೆಗಳನ್ನು ಹುಟ್ಟು ಹಾಕುತ್ತಿದ್ದರಿಂದ ಸರಕಾರಿ ನೌಕರರು ತೀವ್ರ ಬೇಸರ ವ್ಯಕ್ತಪಡಿಸುತ್ತಿರುವುದನ್ನು ಜಿಲ್ಲಾಧಿಕಾರಿಗಳು ಅರಿತು ಕೂಡಲೆ ಅಮಾನತ್ ರದ್ದು ಮಾಡಿ ನೌಕರರ ಹಿತ ಕಾಯಬೇಕೆಂಬುದು ಎಲ್ಲರ ಹಂಬಲ.
© ASK News Kannada. All Rights Reserved. Designed by AGScurate IT Solutions LLP