ಜೂ.3 : ರಾಜ್ಯದಲ್ಲಿನ ಸಿಎಂ ಸಿದ್ರಾಮಯ್ಯ ನೇತೃತ್ವದ ಕಾಂಗ್ರೆಸ್ ಆಡಳಿತ ವೈಫಲ್ಯವಾಗಿದೆ ಎಂಬುದನ್ನು ಮನದಟ್ಟು ಮಾಡಿಕೊಂಡಿರುವ ಕಾಂಗ್ರೆಸ್ ಹೈಕಮಾಂಡ್ ಸಿಎಂ ಸಿದ್ರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ದೆಹಲಿಗೆ ಬರುತೆ ಸೂಚನೆ ನೀಡಿದ್ದು ಕಾಂಗ್ರೆಸ್ ಸೇರಿದಂತೆ ರಾಜ್ಯದ ರಾಜಕೀಯದಲ್ಲಿ ತೀವ್ರ ಕೂತಹಲ ಚರ್ಚೆಗೆ ಕಾರಣವಾಗಿದೆ. ಕರ್ನಾಟಕ ವಿಧಾನ ಸಭೆಯ 2023ರ ಸಾರ್ವತ್ರಿಕ ಚುನಾವಣೆಯಲ್ಲಿ 136 ಸ್ಥಾನಗಳನ್ನು ಗೆಲ್ಲುವ ಮೂಲಕ ಕಾಂಗ್ರೆಸ್ ನಿಚ್ಚಳ ಬಹುಮತ ಪಡೆದುಕೊಂಡಿತ್ತು. ಸಿಎಂ ಗದ್ದುಗೆಗಾಗಿ ಸಿದ್ರಾಮಯ್ಯ ಮತ್ತು ಡಿ.ಕೆ.ಶಿವಕುಮಾರ ಮಧ್ಯೆ ತೀವ್ರ ಸೆಣಸಾಟ ನಡೆದಾಗ 5 ವರ್ಷದ ಆಡಳಿತ ಅವಧಿಯಲ್ಲಿ ಎರಡೂವರೆ, ಎರಡೂವರೆ ಅಧಿಕಾರ ಹಂಚಿಕೆಯ ಸೂತ್ರದಲ್ಲಿ(ಡಿಕೆಶಿ ಮೂಲದ ಪ್ರಕಾರ) ಮೊದಲ 30 ತಿಂಗಳು ಸಿದ್ರಾಮಯ್ಯ ಸಿಎಂ ಎಂದು ಹೈಕಮಾಂಡ್ ಘೋಷಣೆ ಮಾಡಿದ್ದರಿಂದ ಮೇ 20 2023 ರಂದು ಸಿದ್ರಾಮಯ್ಯ ಸಿಎಂ ಎಂದು ಪ್ರಮಾಣ ವಚನ ಸ್ವೀಕರಿಸಿದರು. ಸಿದ್ರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಆರಂಭದಲ್ಲಿ ಪಂಚ್ ಗ್ಯಾರಂಟಿಗಳನ್ನು ಕೊಡುವ ಮೂಲಕ ಉತ್ತಮ ಆಡಳಿತಕ್ಕೆ ಹೆಸರಾಗಿತ್ತು. ಆದರೆ ಹಂತ ಹಂತವಾಗಿ ಸಿದ್ರಾಮಯ್ಯ ನೇತ್ವತ್ವದ ಆಡಳಿತಕ್ಕೆ ಭೃಷ್ಟಾಚಾರ ಆರೋಪ ಮೆತ್ತಿಕೊಳ್ಳುತ್ತಾ ಜನಪ್ರಿಯತೆಯನ್ನು ಕಳೆದುಕೊಳ್ಳುತ್ತಾ ಸಾಗಿದ್ದು ಹೈಕಮಾಂಡಗೆ ಮನವೊರಿಗೆ ಆಗಿದೆ ಎನ್ನಲಾಗುತ್ತಿದೆ. ಕಾನೂನು ಪರಿಪಾಲನಾ ಲೋಪ, ಆರ್ಥಿಕ ಮುಗ್ಗಟ್ಟು, ಸಚಿವರ ಕಳಪೆ ಕಾರ್ಯ ಚಟುವಟಿಕೆ, ಸಿಎಂ ಗದ್ದುಗೆ ಗುದ್ದಾಟ, ಕಾಂಗ್ರೆಸದಲ್ಲಿಯ ಮೂರ್ನಾಲ್ಕು ಬಣಗಳು, ಕಾನೂನು ಸುವ್ಯವಸ್ಥೆ ಪರಿಪಾಲನಾ ವಿಫಲತೆ, ಆಡಳಿತ ವಿರೋಧಿ ಅಲೆ, ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ನಡೆಸುತ್ತಿರುವ ಹೋರಾಟ ಸೇರಿದಂತೆ ಜನ ವಿರೋಧಿ, ಹಿಂದೂ ವಿರೋಧಿ ಆಡಳಿತದಿಂದಾಗಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತ ವೈಫಲ್ಯಕ್ಕೆ ಸಾಕ್ಷಿಯಾಗಿದ್ದನ್ನು ಕಾಂಗ್ರೆಸ್ ಹೈಕಮಾಂಡ್ ಅರಿತುಕೊಂಡಿದ್ದು ಸಿಎಂ ಸಿದ್ರಾಮಯ್ಯ ಬಣಕ್ಕೀಗ ಬಿಸಿ ತುಪ್ಪವಾಗಿದೆ. ರಾಜ್ಯದಲ್ಲಿ ಈಗ ವಿಧಾನ ಸಭೆಗೆ ಚುನಾವಣೆ ನಡೆದರೆ ಬಹುತೇಕ ಬಿಜೆಪಿಗೆ ಬಹುಮತ ಸಿಗುವಷ್ಟು ಫಲಿತಾಂಶ ಬರುವ ಸಾಧ್ಯತೆ ಇದೆ ಎಂಬ ವರದಿ ಕಾಂಗ್ರೆಸ್ ಹೈಕಮಾಂಡಿನ ನಿದ್ದೆಗೆಡಿಸಿದೆ. ಇದರ ಬೆನ್ನಲ್ಲೆ ಒಪ್ಪಂದದಂತೆ ನವ್ಹಂಬರದಲ್ಲಿ ನನಗೆ ಸಿಎಂ ಹುದ್ದೆ ಬೇಕೆಂದು ಡಿಸಿಎಂ ಡಿ.ಕೆ.ಶಿವಕಮಾರ ಪಟ್ಟು ಹಿಡಿದಿದ್ದು ಕಾಂಗ್ರೆಸ್ ಹೈಕಮಾಂಡ್ ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಒಪ್ಪಂದ ಆಗಿದೆ ಎನ್ನಲಾದರೆ ಸಿಎಂ ಸಿದ್ರಾಮಯ್ಯನವರು ನವ್ಹಂಬರ ತಿಂಗಳು ಮುಖ್ಯಮಂತ್ರಿ ಸ್ಥಾನ ಬಿಟ್ಟು ಕೊಡಬೇಕಾದ ಅನಿವಾರ್ಯತೆ ಎದುರಾಗಲಿದೆ. *ಹೈಕಮಾಂಡ್ ಸೂಚನೆಯಂತೆ ಜೂನ 6 ಅಥವಾ 7 ರಂದು ಸಿಎಂ ಡಿಸಿಎಂ ದೆಹಲಿಗೆ...* ಜೂನ 6 ಅಥವಾ 7 ರಂದು ಸಿಎಂ ಸಿದ್ರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ ದೆಹಲಿಗೆ ತೆರಳುವ ಸಾಧ್ಯತೆ ಇದೆ. ಹೈಕಮಾಂಡ್ ಜೊತೆ ಕಳೆದ 2 ವರ್ಷದಲ್ಲಿ ಸರ್ಕಾರದ ಸಾಧನೆ, ಸಚಿವರ ಸಾಧನೆ ವರದಿ, ಆಡಳಿತದ ಪಕ್ಷಿನೋಟ, ಸೇರಿದಂತೆ ಮೇಲ್ಮನೆ ಸ್ಥಾನ ಭರ್ತಿ, ಸಂಪುಟ ಪುನಾರಚನೆ ಅಥವಾ ವಿಸ್ತರಣೆ, ನಿಗಮ ಮಂಡಳಿಗಳಿಗೆ ನೇಮಕ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆ ಇದೆ ಎನ್ನಲಾಗುತ್ತದೆ. ಅದು ಏನೇ ಇದ್ದರು ಸಹ ರಾಜ್ಯದಲ್ಲಿ ಆಡಳಿತ ವೈಫಲ್ಯ ಮತ್ತು ಮುಖ್ಯ ಮಂತ್ರಿ ಗದ್ದುಗೆ ಬಗೆಗೆ ತೀವ್ರ ಚರ್ಚೆ ನಡೆಯಲಿದೆ ಎಂಬ ಮಾತು ಕಾಂಗ್ರೆಸ್ ವಲಯದಲ್ಲಿ ಗುಸು ಗುಸು ಜೋರಾಗಿದ್ದು ಸುಳ್ಳಲ್ಲ...
© ASK News Kannada. All Rights Reserved. Designed by AGScurate IT Solutions LLP