ಗದಗ, ಜ.12 : ಗದಗ ಜಿಲ್ಲೆಯಲ್ಲಿ ಭಾರಿ ಮಳೆ ಆಗಬಹುದಾದ ಸಂಭವ ಇರುವುದರಿಂದ ದಿನಾಂಕ 12 ರಿಂದ 15ರವರಗೆ ರೆಡ್, ಆರೆಂಜ್ ಯಲೋ ಅಲರ್ಟ ಇದ್ದು ಸಾರ್ವಜನಿಕರು ಮುನ್ನೇಚ್ಚರಿಕೆವಹಿಸಲು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರಾದ ಸಿ.ಎನ್.ಶ್ರೀಧರ ಶ್ರೀಧರ ಸೂಚನೆ ನೀಡಿದ್ದಾರೆ. ರಾಜ್ಯ ಹವಾಮಾನ ಇಲಾಖೆ ವರದಿಯಂತೆ ಗದಗ ಜಿಲ್ಲೆಯಲ್ಲಿ ದಿನಾಂಕ 12-06-2025 ರಂದು ರೆಡ್ ಅಲರ್ಟ, 13-06-2025 & 15-06-2025 ರಂದು ಆರೆಂಜ್ ಅಲರ್ಟ, 14-06-2025 ರಂದು ಯಲ್ಲೋ ಅಲರ್ಟ ಇರುವುದರಿಂದ ಈ ದಿನಗಳಲ್ಲಿ ಗದಗ ಜಿಲ್ಲೆಯಲ್ಲಿ ಭಾರಿ ಮಳೆಯಾಗುವ ಸಂಭವವಿದ್ದು ಸಾರ್ವಜನಿಕರು ಎಚ್ಚರಿಕೆವಹಿಸಬೇಕೆಂದು ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ. *ಪತ್ರಿಕಾ ಪ್ರಕಟಣೆಯಲ್ಲಿ ಏನಿದೆ ನೋಡಿ.......* ರಾಜ್ಯ ಹವಾಮಾನ ಇಲಾಖೆ ಇವರ ವರದಿಯಂತೆ ಗದಗ ಜಿಲ್ಲೆಯಲ್ಲಿ ದಿನಾಂಕ 12-06-2025 ರಂದು ರೆಡ್ ಅಲರ್ಟ, 13-06-2025 & 15-06-2025 ರಂದು ಆರೆಂಜ್ ಅಲರ್ಟ 14-06-2025 ರಂದು ಯಲ್ಲೋ ಅಲರ್ಟ ನೀಡಲಾಗಿದ್ದು, ಇದರಿಂದ ಗದಗ ಜಿಲ್ಲೆಯಲ್ಲಿ ಭಾರಿ ಮಳೆಯಾಗುವ ಸಂಭವ ಇರುತ್ತದೆ. ಕಾರಣ ಜಿಲ್ಲಾಧಿಕಾರಿಗಳು ಹಾಗೂ ಅಧ್ಯಕ್ಷರು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಗದಗ ರವರು ಸಾರ್ವಜನಿಕರು ಈ ಕೆಳಗಿನಂತೆ ಮುನ್ನೆಚ್ಚರಿಕೆಯ ಕ್ರಮ ಕೈಗೊಳ್ಳಲು ಈ ಮೂಲಕ ಸೂಚಿಸಲಾಗಿದೆ. * ಮಳೆಯಾಗುವ ಸಂದರ್ಭದಲ್ಲಿ ಗುಡುಗು-ಸಿಡಿಲಿನಿಂದಾಗುವ ಅಹಿತಕರ ಘಟನೆಗಳನ್ನು ತಪ್ಪಿಸಲು ಸಾರ್ವಜನಿಕರು ಮನೆಯಲ್ಲಿಯೇ ಇರಲು ಅಥವಾ ಸುರಕ್ಷಿತ ಸ್ಥಳಗಳಲ್ಲಿರಲು ಕೋರಿದೆ. * ಮಳೆಯಾಗುವ ಸಂದರ್ಭದಲ್ಲಿ ನದಿ/ಹಳ್ಳದ/ಕೆರೆ ದಡದಲ್ಲಿ ಬಟ್ಟೆ ತೊಳೆಯುವುದು, ಈಜಾಡುವುದು, ಧನ/ಕರುಗಳನ್ನು ಮೆಹಿಸುವುದು ಹಾಗೂ ಅಪಾಯವಿರುವ ಸೇತುವೆಗಳಲ್ಲಿ ಸಂಚರಿಸುವುದು ಮತ್ತು ಇತರೆ ಚಟುವಟಿಕೆ ನಡೆಸದಂತೆ ಮುನ್ನೆಚ್ಚರಿಕೆಯನ್ನು ತೆಗೆದುಕೊಳ್ಳುವುದು. * ಭಾರಿ ಮಳೆ/ಪ್ರವಾಹ ಸಂದರ್ಭದಲ್ಲಿ ತಗ್ಗು ಪ್ರದೇಶದಲ್ಲಿ ವಾಸವಿದ್ದರೆ, ಸುರಕ್ಷತೆ ಇರುವ ಸ್ಥಳಗಳಿಗೆ ತೆರಳುವುದು. * ಯುವಕರು ಮತ್ತು ಸಾರ್ವಜನಿಕರು ನದಿ /ಹಳ್ಳ / ಕೆರೆ ದಡಗಳಲ್ಲಿ ಅಪಾಯವಿರುವ ಸೇತುವೆಗಳಲ್ಲಿ ಪೋಟೋ/ ಸೆಲ್ಪಿಗಳನ್ನು ತೆಗೆಯದಂತೆ ಮುನ್ನೆಚ್ಚರಿಕೆ ವಹಿಸುವುದು. * ನಿರಂತರ ಮಳೆಯಿಂದ ಅಪಾಯವಿರುವ ಮನೆ, ಗೋಡೆ ಇತರೆ ಕಟ್ಟಡಗಳು ಕುಸಿಯುವ ಸಂದರ್ಭವಿದ್ದು ಇದರಿಂದ ಸಾವು ನೋವುಗಳು ಸಂಭವಿಸುವ ಸಂದರ್ಭವಿರುವುದರಿಂದ ಸಾರ್ವಜನಿಕರಿಗೆ ಸುರಕ್ಷತೆಯ ದೃಷ್ಟಿಯಿಂದ ಮುನ್ನೆಚ್ಚರಿಕೆಯ ಕ್ರಮ ಕೈಗೊಳ್ಳುವುದು. * ಸಾರ್ವಜನಿಕ ಅನಕೂಲಕ್ಕಾಗಿ ಸಾಹಾಯವಾಣಿಗಳನ್ನು ತೆರೆಯಲಾಗಿದ್ದು ಸಾರ್ವಜನಿಕರು ತುರ್ತು ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳ ಕಾರ್ಯಾಲಯದ 08372-239177 ಅಥವಾ 1077 ನಂಬರಿಗೆ ಸಂಪರ್ಕಿಸಬಹುದು. * ರಾಜ್ಯ/ ಜಿಲ್ಲಾಡಳಿತ/ ತಾಲೂಕಾಡಳಿತದಿಂದ ನೀಡುವ ಹವಾಮಾನದ ಮುನ್ನೆಚ್ಚರಿಕೆಯನ್ನು ಸಾರ್ವಾಜನಿಕರು ಪಾಲಿಸಬೇಕೆಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಅಧ್ಯಕ್ಷರಾದ ಸಿ.ಎನ್.ಶ್ರೀಧರ ಮನವಿ ಮಾಡಿದ್ದಾರೆ. ಸಾರ್ವಜನಿಕರು ಮೇಲಿನಂತೆ ಸೂಚಿಸಲಾದ ದಿನಗಳಲ್ಲಿ ನಿರ್ಲಕ್ಷ್ಯ ತೋರದೆ ಎಚ್ಚರಿಕೆವಹಿಸಿದಲ್ಲಿ ಮಳೆಯಿಂದಾಗುವ ಹಾನಿಯನ್ನು ನಿಯಂತ್ರಿಸಬಹುದಾಗಿದೆ.
© ASK News Kannada. All Rights Reserved. Designed by AGScurate IT Solutions LLP