ask-banner
ad-banner
ರಾಜ್ಯ 2025-06-12

ಶೇರ್ ಮಾಡಿ  

*ಜಿಲ್ಲೆಯಲ್ಲಿ ಭಾರಿ ಮಳೆ ಸಂಭವ : ಅಲರ್ಟಾಗಿರಲು ಜಿಲ್ಲಾಡಳಿತಕ್ಕೆ ಸಿ.ಸಿ.ಪಾಟೀಲ ಸೂಚನೆ : ಅಧಿಕಾರಿಗಳು ಕೇಂದ್ರ ಸ್ಥಾನ ಬಿಟ್ಟು ಹೋಗದಂತೆ ಕಡಕ್ ಆದೇಶ..*

ಗದಗ, ಜು. 12 : ಗದಗ ಜಿಲ್ಲೆಯಾದ್ಯಂತ ಭಾರಿ ಮಳೆ ಸುರಿಯುವ ಸಂಭವವಿದ್ದು ಜಿಲ್ಲಾಡಳಿತ ಕಟ್ಟೆಚ್ಚರ ವಹಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ, ಜಿಲ್ಲಾ ಪಂಚಾಯತ ಸಿ.ಇ.ಓ. ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಮಾಜಿ ಸಚಿವರು, ಶಾಸಕರಾದ ಸಿ.ಸಿ.ಪಾಟೀಲರು ಕಡಕ್ ಎಚ್ಚರಿಕೆ ನೀಡಿದ್ದಾರೆ. ಅವರು ಜಿಲ್ಲಾಧಿಕಾತಿಗಳ ಪತ್ರಿಕಾ ಪ್ರಕಟಣೆಯ ವರದಿಯನ್ನು ಆಸ್ಕ್ ನ್ಯೂಸ ಮೂಲಕ ಗಮನಿಸಿ ಕೂಡಲೆ ಜಿಲ್ಲಾಧಿಕಾರಿಗಳಿಗೆ ಮತ್ತು ಜಿಲ್ಲಾ ಪಂಚಾಯತ ಸಿ.ಇ.ಓ. ಅವರೊಂದಿಗೆ ಮೊಬೈಲ್ ಫೋನ‌ ಮೂಲಕ ಸಂಪರ್ಕಿಸಿ ಜಿಲ್ಲೆಯಲ್ಲಿ ಮಳೆಯಿಂದ ಆಗಬಹುದಾದ ಅನಾಹುತಗಳನ್ನು ತಪ್ಪಿಸಲು ಅಗತ್ಯ ಕ್ರಮಗಳನ್ನು ವಹಿಸಬೇಕೆಂದು ಸೂಚಿಸಿದರು. ಜನ ಜಾನುವಾರುಗಳಿಗೆ ಯಾವುದೆ ತೊಂದರೆ ಆಗದಂತೆ, ಜೀವ ಹಾನಿ ಸಂಭವಿಸಿದಂತೆ ತ್ವರಿತ ಕ್ರಮವಹಿಸಬೇಕೆಂದು ತಿಳಿಸಿದ್ದಾರೆ. ಬೆಣ್ಣೆಹಳ್ಳ ಸೇರಿದಂತೆ ಇತರ ಹಳ್ಳ ಕೊಳ್ಳ, ಕೆರೆ ಕಟ್ಟೆಗಳು, ನದಿಪಾತ್ರಗಳಲ್ಲಿ ಮತ್ತು ಈ ಹಿಂದೆ ಮಳೆಯಿಂದ ಸಂಭವಿಸಿದ ಆಗಿರುವ ಘಟನೆಗಳ ಸ್ಥಳ, ಗ್ರಾಮ, ಹಳ್ಳಿಗಳಲ್ಲಿ ಮುನ್ನೇಚ್ಚರಿಕೆವಹಿಸಬೇಕೆಂದು ತಿಳಿಸಿದ್ದಾರೆ. ತಾಲೂಕಾಧಿಕಾರಿಗಳು, ಪಿ.ಡಿ.ಓ.ಗಳು ಸಂಬಂಧಿಸಿದ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿರುವಂತೆ ನೋಡಿಕೊಳ್ಳಬೇಕೆಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ರೆಡ್ ಆರೆಂಜ್, ಯಲ್ಲೋ ಅಲರ್ಟ ಇರುವುದರಿಂದ ಜಿಲ್ಲಾಡಳಿತವು ಸಹ ಅಲಟ್ ಇರಬೇಕೆಂದು ಜಿಲ್ಲಾಧಿಕಾರಿಗಳಿ, ಜಿಪಂ ಸಿ.ಇ.ಓ. ಮತ್ತು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದು ತಾವು ಸಹ ಬೆಂಗಳೂರಿಂದ ಜಿಲ್ಲೆಗೆ ಆಗಮಿಸುತ್ತಿದ್ದು ಜನರಿಗೆ ಮಳೆಯಿಂದ ಯಾವುದೆ ತೊಂದರೆ, ಹಾನಿ ಆಗದಂತೆ ಒಟ್ಟಾಗಿ ಶ್ರಮಿಸೋಣವೆಂದು ತಿಳಿಸಿರುವ ಸಿ.ಸಿ.ಪಾಟೀಲರು ಜನರು ಸಹ ಜಾಗ್ರತಿವಹಿಸಬೇಕೇಂದು ಮನವಿ ಮಾಡಿದ್ದಾರೆ.

Anant S. Karkal
ವೀಕ್ಷಣೆ 1303

ಜನಪ್ರಿಯ ಸುದ್ದಿಗಳು

ಕಚೇರಿ ವಿಳಾಸ

Gadag - 582101

ಫೋನ್ ನಂ.

+91 9448302002

ಇಮೇಲ್ ಐಡಿ

asknewskannada@gmail.com

ಸೋಶಿಯಲ್ ಮೀಡಿಯಾ ಲಿಂಕ್ಸ್

© ASK News Kannada. All Rights Reserved. Designed by AGScurate IT Solutions LLP