ask-banner
ad-banner
ರಾಜ್ಯ 2025-06-21

ಶೇರ್ ಮಾಡಿ  

*587.82 ಲಕ್ಷ ರೂ.ವೆಚ್ಚದ ವಿವಿಧ ಕಾಮಗಾರಿಗಳಿಗೆ ಚಾಲನೆ...* *ಕಾಮಗಾರಿಗಳು ಕಳಪೆಯಾದರೆ ಗಯತ್ತಿಗೆದಾರರು ಕಪ್ಪು ಪಟ್ಟಿಗೆ : ಶಾಸಕ ಸಿ.ಸಿ.ಪಾಟೀಲ ಕಡಕ್ ಎಚ್ಚರಿಕೆ*

ಗದಗ ಜೂ. 21 : ಶೈಕ್ಷಣಿಕ, ಸಾಮಾಜಿಕ ಸೇರಿದಂತೆ ವಿವಿಧ ರೀತಿಯಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳು ಗುಣಮಟ್ಟದ್ದಾಗಿರಬೇಕೆಂದು ಮಾಜಿ ಸಚಿವರು, ನರಗುಂದ ಶಾಸಕರಾದ ಸಿ.ಸಿ.ಪಾಟೀಲ ಕಡಕ್ ಎಚ್ಚರಿಕೆ ನೀಡಿದರು ಅವರು ಹೊಂಬಳ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶುಕ್ರವಾರ ಭೂಮಿ ಪೂಜೆ ಹಾಗೂ ಉದ್ಘಾಟನಾ ಕಾರ್ಯಕ್ರಮ ನೆರವೇರಿಸಿ ಮಾತನಾಡಿ ಕಳಪೆ ಕಾಮಗಾರಿಗಳಾದರೆ ಸಂಬಂಧಿಸಿದ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರ್ಪಡೆಗೊಳಿಸುವುದು ಅನಿವಾರ್ಯ ಎಂದು ಎಚ್ಚರಿಕೆ ನೀಡಿದರು. ಸುಮಾರು 587.82 ಲಕ್ಷ ರೂ.ವೆಚ್ಚದ ವಿವಿಧ ಕಾಮಗಾರಿಗಳಿಗೆ ಚಾಲನೆ ಮತ್ತು ಪೂರ್ಣಗೊಂಡ ಕೆಲವು ಕಾಮಗಾರಿಗಳನ್ನು ಲೋಕಾರ್ಪಣೆಗೊಳಿಸಿದರು. ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ಕಾರ್ಯಕ್ರಮ : 2024-25 ನೇ ಸಾಲಿನ ಹೊಂಬಳ ಗ್ರಾಮದ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ, ಹೊಂಬಳ ಗ್ರಾಮದ 5 ನೇ ವಾರ್ಡಿನ ರಘು ಬಸಪ್ಪ ಹುಣಸಿಮರದ ಇವರ ಮನೆಯಿಂದ ಬಸವರಾಜ ಹುಣಸಿಮರದ ಇವರ ಮನೆಯವರಿಗೆ ಸಿ.ಸಿ.ಗಟಾರ ಸಿ.ಡಿ. ನಿರ್ಮಾಣ ಕಾಮಗಾರಿ ಭೂಮಿ ಪೂಜೆ, ಹೊಂಬಳ ಗ್ರಾಮದ ಶ್ರೀ ಹೊನ್ನಕೇರಿ ಮಲ್ಲಯ್ಯ ಸಮುದಾಯ ಭವನ ನಿರ್ಮಾಣ ಭೂಮಿ ಪೂಜೆ , ಹೊಂಬಳ ಗ್ರಾಮದ ಹರಣಸಿಕಾರಿ ಜನಾಂಗದ ಸಮುದಾಯ ಭವನ ನಿರ್ಮಾಣ ಒಟ್ಟಾರೆ ಅಂದಾಜು ಮೊತ್ತ 418 ಲಕ್ಷ ರೂ. ವೆಚ್ಚದ ಮೇಲ್ಕಂಡ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರು. ಕಾಮಗಾರಿಗಳ ಉದ್ಘಾಟನೆ : ಅಂದಾಜು ಮೊತ್ತ 25.30 ಲಕ್ಷ ರೂ. ವೆಚ್ಚದ ಹೊಂಬಳ ಗ್ರಾಮದ ಸರಕಾರಿ ಮಾದರಿಯ ಪ್ರಾಥಮಿಕ ಶಾಲೆಯ 4 ಕೊಠಡಿಗಳ ಉದ್ಘಾಟನೆ, ಅಂದಾಜು ಮೊತ್ತ 13.90 ಲಕ್ಷ ರೂ. ವೆಚ್ಚದ ಹೊಂಬಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಎಂ.ಕೆ.ಬಿ.ಎಸ್. ಶಾಲೆಯ 1 ಕೊಠಡಿ , ಅಂದಾಜು ಮೊತ್ತ 13.90 ಲಕ್ಷ ರೂ. ವೆಚ್ಚದಡಿ ಹೊಂಬಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆಯ 1 ಕೊಠಡಿ ಇವುಗಳ ಉದ್ಘಾಟನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಹೊಂಬಳ ಗ್ರಾಮ ಪಂಚಾಯತ್ ಅಧ್ಯಕ್ಷೆ ದಾವನಬಿ ಮುಲ್ಲಾನವರ, ಉಪಾಧ್ಯಕ್ಷರಾದ ನೀಲಮ್ಮ ಬಾಳಮ್ಮನವರ, ಬಸವರಾಜ ಹುಣಸಿಮರದ, ಶಿಕ್ಷಣ ಇಲಾಖೆಯ ಆರ್.ಎಸ್.ಬುರಡಿ, ಎಸ್‌ಡಿಎಂಸಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಮೆಹಬೂಬ ತುಂಬರಮಟ್ಟಿ, ಹಿಂದುಳಿದ ವರ್ಗಗಳ ತಾಲೂಕಾ ಅಧಿಕಾರಿ ಡಾ.ಬಸವರಾಜ ಬಳ್ಳಾರಿ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಮಲ್ಲಯ್ಯ ಕೊರನವರ, ಬಿ.ಇ.ಓ ವಿ.ವಿ.ನಡುವಿನಮನಿ ಸೇರಿದಂತೆ ಸಂಭಂದಿಸಿದ ಅಧಿಕಾರಿಗಳು, ವಿವಿಧ ಗಣ್ಯರು ಉಪಸ್ಥಿತರಿದ್ದರು.

Anant S. Karkal
ವೀಕ್ಷಣೆ 495

ಜನಪ್ರಿಯ ಸುದ್ದಿಗಳು

ಕಚೇರಿ ವಿಳಾಸ

Gadag - 582101

ಫೋನ್ ನಂ.

+91 9448302002

ಇಮೇಲ್ ಐಡಿ

asknewskannada@gmail.com

ಸೋಶಿಯಲ್ ಮೀಡಿಯಾ ಲಿಂಕ್ಸ್

© ASK News Kannada. All Rights Reserved. Designed by AGScurate IT Solutions LLP