ಗದಗ, ಜುಲೈ, 24 : ಮಹಿಳಾ ಚಿಂತಕಿ, ಸಾಹಿತಿ, ಹಾಸ್ಯ, ರಂಗಭೂಮಿ ಕಲಾವಿದರು ನಿವೃತ್ತ ಉಪನ್ಯಾಸಕಿ ಪ್ರೊ.ಕವಿತಾ ಕಾಶಪ್ಪನವರ(ವ.65) ಹೃದಯಘಾತಕ್ಕಿಡಾಗಿ ಗುರುವಾರ ಬೆಳಿಗ್ಗೆ ವಿಧಿವಶರಾಗಿದ್ದು ನೋವಿನ ಸಂಗತಿ. ಸದಾ ನಗಿಸುವ, ಹಾಸ್ಯ ಸ್ವಭಾವದ, ಶಿಕ್ಷಣ ಚಿಂತಕಿ, ಸಾಹಿತಿಯಾಗಿದ್ದ ಪ್ರೊ.ಕವಿತಾ ಕಾಶಪ್ಪನವರ ಅತ್ಯಂತ ಆತ್ಮೀಯ ನಡೆ ನುಡಿಯೊಂದಿಗೆ ಸಾವಿರಾರು ವಿದ್ಯಾರ್ಥಿಗಳ ಕಲಿಕೆಗೆ ಸ್ಪೂರ್ತಿಯಾಗಿದ್ದರು. ಮಹಿಳಾ ಸಂಘಟನೆಗೆ, ರಂಗ ಕಲೆಗೆ, ರಂಗ ಕಲಾವಿದರಿಗೆ ಶಕ್ತಿಯಾಗಿದ್ದ ಪ್ರೊ.ಕವಿತಾ ಕಾಶಪ್ಪನವರ ಸದಾ ಲವಲವಿಕೆಗೆ ಹೆಸರಾಗಿದ್ದರು. ಒಬ್ಬ ಪುತ್ರ, ಒಬ್ಬ ಪುತ್ರಿ ಸೇರಿ ತುಂಬು ಕುಟುಂಬದಲ್ಲಿ ವಿಶ್ರಾಂತಿ ಜೀವನ ಕಳೆಯುತ್ತಿದ್ದ ಪ್ರೊ.ಕವಿತಾ ಕಾಶಪ್ಪನವರ ಉಪನ್ಯಾಸಕ ವೃತ್ತಿಯಿಂದ ನಿವೃತ್ತರಾಗಿದ್ದರು ಸಹ ಸಮಾಜಮುಖಿ ಸೇವೆಯ ಪ್ರವೃತ್ತಿಯಿಂದ ನಿವೃತ್ತಿ ಆಗಿರಲಿಲ್ಲ. ಇಂದು ಗುರುವಾರ ಸಂಜೆ 5 ಗಂಟೆಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಅವರ ಸಹೋದರ ಲಿಂಗರಾಜ ಬಗಲಿ ತಿಳಿಸಿದ್ದಾರೆ. ಭಗವಂತನು ಅವರ ಆತ್ಮಕ್ಕೆ ಚಿರ ಶಾಂತಿ ದಯಪಾಲಿಸಲಿ...ಅವರ ಕುಟುಂಬ ವರ್ಗಕ್ಕೆ ದು:ಖ ಸಹಿಸುವ ಶಕ್ತಿ ಕೊಡಲಿ ಎಂದು ಅವರ ಅಪಾರ ಅಭಿಮಾನಿಗಳ ಪ್ರಾರ್ಥನೆಯಾಗಿದೆ.
© ASK News Kannada. All Rights Reserved. Designed by AGScurate IT Solutions LLP