ask-banner
ad-banner
ರಾಜ್ಯ 2025-07-27

ಶೇರ್ ಮಾಡಿ  

*ತನ್ನ ಎರಡು ಗಂಡು ಮಕ್ಕಳೊಂದಿಗೆ ಭೀಷ್ಮ ಕೆರೆಯಲ್ಲಿ ಬಿದ್ದು ಸಾಯಲು ಬಂದಿದ್ದ ತಾಯಿ ಮಕ್ಕಳನ್ನು ರಕ್ಷಿಸಿದ ಪ್ರವಾಸಿ ಮಿತ್ರರು..*

ಗದಗ, ಜುಲೈ, 27 : ಕೌಟುಂಬಿಕ ಸಮಸ್ಯೆಗೆ ಬೇಸತ್ತು ತನ್ನ ಎರಡು ಗಂಡು ಮಕ್ಕಳೊಂದಿಗೆ ಭೀಷ್ಮ ಕೆರೆಯಲ್ಲಿ ಬಿದ್ದು ಸಾಯಲು ಬಂದಿದ್ದ ತಾಯಿ ಮಕ್ಕಳನ್ನು ಟೂರಿಸ್ಟ್ ಪೊಲೀಸರು (ಪ್ರವಾಸಿ ಮಿತ್ರರು) ರಕ್ಷಿಸಿದ ಘಟನೆ ರವಿವಾರ ಐತಿಹಾಸಿಕ ಭೀಷ್ಮ ಕೆರೆಯಲ್ಲಿ ನಡೆದಿದೆ. ಗದಗ ನಗರದ ಪಂಚಾಕ್ಷರಿ ನಗರದ ನಿವಾಸಿ ಎನ್ನಲಾಗುತ್ತಿರುವ ಮಹಿಳೊಬ್ಬಳು ತನ್ನ ಎರಡು ಗಂಡು ಮಕ್ಕಳೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆಗೆ ಮುಂದಾಗಿದ್ದು ತಿಳಿದ ಪ್ರವಾಸಿ ಮಿತ್ರರು ದೌಡಾಯಿಸಿ ಬಂದು ಕೆರೆಗೆ ಹಾರದಂತೆ ತಡೆದು ತಾಯಿ ಮಕ್ಕಳ ಜೀವ ಉಳಿಸಿ ಮಾನವೀಯತೆ ಮೆರೆದಿದ್ದಾರೆ. ಈ ಬಗೆಗೆ ಪುಟ್ಟುರಾಜ ಪತ್ರಿಕೆ ಗಮನ ಸೆಳೆದಾಗ ಪ್ರವಾಸಿ ಮಿತ್ರ ಎಂ.ಬಿ.ಹೂಗಾರ್ ಅವರಿಗೆ ಪೋನ ಮಾಡಿ ವಿಚಾರಿಸಿದಾಗ ಆಸ್ಕ್ ನ್ಯೂಸ್ ಜೊತೆ ಮಾತನಾಡಿ ನಡೆದ ಘಟನೆ ಬಗೆಗೆ ವಿವರಿಸಿದರು. ಪ್ರವಾಸಿ ಮಿತ್ರ ಎಂ.ಬಿ.ಹೂಗಾರ್ ಹೇಳಿದ್ದು ಅಂದ್ರೆ ರವಿವಾರ ಮದ್ಯಾಹ್ನ ಸುಮಾರಿಗೆ ಸುಮಾರು 11 ವರ್ಷದ ಹುಡುಗ ಬಂದು ತಮ್ಮ ತಾಯಿಯನ್ನು ರಕ್ಷಣೆ ಮಾಡುವಂತೆ ಕೇಳಿದಾಗ ಕೂಡಲೇ ಎಲ್ಲರು ದೌಡಾಯಿಸಿ ಅವನ ತಾಯಿಯನ್ನು ತಡೆದು ರಕ್ಷಿಸಲಾಯಿತೆಂದರು. ಕುಟುಂಬದ ಸಮಸ್ಯೆಯಿಂದಾಗಿ ತನ್ನ ಎರಡು ಗಂಡು ಮಕ್ಕಳೊಂದಿಗೆ ಭೀಷ್ಮ ಕೆರೆಗೆ ಹಾರಲು ಬಂದಿದ್ದು ತಿಳಿದು 112 ಪೊಲೀಸ್ ಸಹಾಯವಾಣಿಗೆ ಕರೆ ಮಾಡಿ ಪೊಲೀಸರಿಗೆ ಒಪ್ಪಿಸಲಾಯಿತೆಂದರು. ಪೋಲಿಸರು ಭೀಷ್ಮ ಕೆರೆಗೆ ಬಂದು ತಾಯಿ ಮಕ್ಕಳನ್ನು ತಮ್ಮ ವಶಕ್ಕೆ ಪಡೆದು ವಿಚಾರಿಸಿದಾಗ ಅವಳಿಗೆ ಒಟ್ಟು ಮೂರು ಗಂಡು ಮಕ್ಕಳಿದಿದ್ದು ಗೊತ್ತಾಗಿದೆ. ಸುದ್ದಿ ತಿಳಿದು ಅವಳ ಪತಿ ತನ್ನ ಹಿರಿಯ ಪುತ್ರನೊಂದಿಗೆ ಭೀಷ್ಮ ಕೆರೆಯ ಘಟನಾ ಸ್ಥಳಕ್ಕೆ ಬಂದಾಗ ಪೋಲೀಸರು ಹೆಚ್ಚಿನ ವಿಚಾರಣೆಗೆ ಪೋಲೀಸ್ ಠಾಣೆಗೆ ಕರೆದೊಯದಿದ್ದಾರೆಂದು ಪ್ರವಾಸಿ ಮಿತ್ರ ಹೂಗಾರ್ ತಿಳಿಸಿದರು. ತನ್ನ ಎರಡು ಮಕ್ಕಳೊಂದಿಗೆ ಭೀಷ್ಮ ಕೆರೆಯಲ್ಲಿ ಬೀಳಲು ಬಂದಿದ್ದ ಮಹಿಳೆ ಮತ್ತು ಮಕ್ಕಳನ್ನು ರಕ್ಷಿಸಿದ ಟೂರಿಸ್ಟ್ ಪೊಲೀಸ್‌,(ಪ್ರವಾಸಿ ಮಿತ್ರ) ಸಿಬ್ಬಂದಿಗಳಾದ ಎಂ.ಬಿ.ಹೂಗಾರ್, ಎಂ.ಎನ್.ಮಾದರ್, ಕುಮಾರಿ ಎಸ್. ಎಲ್. ಬುಟ್ಟಿ, ಕೊರವರ್ ಸೇರಿದಂತೆ ಇತರ ಸಿಬ್ಬಂದಿಗಳಿಗೆ ಜನರ ಪರವಾಗಿ ನಮ್ದೊಂದು ಸಲಾಮ್.

Anant S. Karkal
ವೀಕ್ಷಣೆ 3224

ಜನಪ್ರಿಯ ಸುದ್ದಿಗಳು

ಕಚೇರಿ ವಿಳಾಸ

Gadag - 582101

ಫೋನ್ ನಂ.

+91 9448302002

ಇಮೇಲ್ ಐಡಿ

asknewskannada@gmail.com

ಸೋಶಿಯಲ್ ಮೀಡಿಯಾ ಲಿಂಕ್ಸ್

© ASK News Kannada. All Rights Reserved. Designed by AGScurate IT Solutions LLP