ask-banner
ad-banner
ರಾಜ್ಯ 2025-08-05

ಶೇರ್ ಮಾಡಿ  

ಸರಕಾರದ ಎಸ್ಮಾ ಕಾಯ್ದೆ ಜಾರಿ ಎಚ್ಚರಿಕೆ ಮತ್ತು ಹೈಕೋರ್ಟ್ ತರಾಟೆಗೆ ಬೆಚ್ಚಿಬಿದ್ದ ಜಂಟಿ ಕ್ರಿಯಾ ಸಮಿತಿ..* *ಸಾರಿಗೆ ನೌಕರರ ಮುಷ್ಕರ ಮುಂದೂಡಿಕೆ...ರಾಜ್ಯಾದ್ಯಂತ ಸಾರಿಗೆ ಬಸ್ ಸಂಚಾರ ಪುನಾರಂಭ...*

* ಗದಗ ಆಗಷ್ಟ, 5 : ಮೂವತ್ತೆಂಟು ತಿಂಗಳ ವೇತನ ಬಾಕಿ ಸೇರಿದಂತೆ ಸಾರಿಗೆ ನೌಕರರ ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯಾದ್ಯಂತ ಮಂಗಳವಾರದಿಂದ ಅನಿರ್ಧಿಷ್ಟ ಮುಷ್ಕರ ಆರಂಭಿಸಿದ್ದ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ ಸಿಬ್ಬಂದಿಯು ಕೇವಲ ಅರ್ಧ ದಿನದಲ್ಲೆ ತಮ್ಮ ಮುಷ್ಕರವನ್ನು ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗಿದ್ದು ಪ್ರಯಾಣಿಕರು ನಿಟ್ಟುಸಿರು ಬಿಡುವಂತಾಗಿದೆ. ರಾಜ್ಯ ಸರಕಾರದ ಎಸ್ಮಾ ಕಾಯ್ದೆ ಜಾರಿ ಎಚ್ಚರಿಕೆ ಮತ್ತು ಹೈಕೋರ್ಟ್ ತರಾಟೆಗೆ ಬೆಚ್ಚಿಬಿದ್ದ ಸಾರಿಗೆ ಸಂಸ್ಥೆಯ ಜಂಟಿ ಕ್ರಿಯಾ ಸಮಿತಿಯು ತನ್ನ ಮುಷ್ಕರವನ್ನು ಮುಂದೂಡಿ ಕರ್ತವ್ಯಕ್ಕೆ ಹಾಜರಾಗಿದ್ದ ಹಿನ್ನಲೆಯಲ್ಲಿ ರಾಜ್ಯಾದ್ಯಂತ ಸಾರಿಗೆ ಬಸ್ ಗಳ ಸಂಚಾರ ಪುನಾರಂಭಗೊಂಡಿದ್ದರಿಂದ ಪ್ರಯಾಣಿಕರು ನಿರಾಳವಾಗಿದ್ದು ಕಾಣಲಾಗುತ್ತಿದೆ. ರಾಜ್ಯ ಸರಕಾರದ ಸಿಎಂ ಸಿದ್ರಾಮಯ್ಯ ನೌಕರರ ಜಂಟಿ ಕ್ರಿಯಾ ಸಮಿತಿ, ನಿಗಮಗಳ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳೊಂದಿಗೆ ಸಂಧಾನ ಸಭೆ ವಿಫಲವಾಗಿದ್ದರಿಂದ ಮುಷ್ಕರ ಶುರು ಮಾಡಿದ್ದ ಸಾರಿಗೆ ಸಂಸ್ಥೆಗಳ ಸಿಬ್ಬಂದಿಗಳ ಮುಷ್ಕರಕ್ಕೆ ಬ್ರೇಕ್ ಹಾಕಿದ್ದು ಹೈಕೋರ್ಟ್ ತೆಗೆದುಕೊಂಡ ತರಾಟೆ ಎಂಬುದು ವಿಶೇಷ. ಸಾರಿಗೆ ಸಂಸ್ಥೆಯ ಸಿಬ್ಬಂದಿಗಳ ಮುಷ್ಕರವನ್ನು ಪ್ರಶ್ನಿಸಿ ವಕೀಲೆ ಒಬ್ಬರು ಹೈಕೋರ್ಟ್ ದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿದ್ದರು. ಸೋಮವಾರ ಈ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ದ್ವಿಸದಸ್ಯ ಪೀಠವು ಮಂಗಳವಾರ ಮುಷ್ಕರ ನಡೆಸದಂತೆ ಆದೇಶಿಸಿತ್ತು. ಆದರೆ ಹೈಕೋರ್ಟ್ ಆದೇಶವನ್ನು ದಿಕ್ಕರಿಸಿ ಮುಷ್ಕರ ನಡೆಸಿದ್ದ ಸಾರಿಗೆ ನೌಕರರ ನಡೆಗೆ ಕೆಂಡಾಮಂಡಲವಾದ ಹೈಕೋರ್ಟ್ ಸಾರಿಗೆ ನೌಕರರ ಪರವಾಗಿ ವಾದ ಮಂಡಿಸಿದ ವಕೀಲರನ್ನು ತರಾಟೆಗೆ ತೆಗೆದುಕೊಂಡಿದ್ದರಿಂದ ಕೂಡಲೇ ಎಚ್ಚೆತ್ತುಕೊಂಡ ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಅನಂತ ಸುಬ್ಬರಾವ್ ಮಾಧ್ಯಮಗೊಷ್ಠಿ ನಡೆಸಿ ಮುಷ್ಕರ ಮುಂದೂಡಿದ್ದಾಗಿ ತಿಳಿಸಿದ್ದಾರೆ. ರಾಜ್ಯ ಸರ್ಕಾರದ ಎಸ್ಮಾ ಆಸ್ತ್ರ, ಹೈಕೋರ್ಟ್ ತರಾಟೆಗೆ ಕಂಗೆಟ್ಟ ಸಾರಿಗೆ ನೌಕರರು ಮುಷ್ಕರ ಮುಂದೂಡಿ ಕರ್ತವ್ಯಕ್ಕೆ ಹಾಜರಾಗಿದ್ದು PIL ಗೆಲುವು ಎನ್ನುವಂತಾಗಿದೆ.

Anant S. Karkal
ವೀಕ್ಷಣೆ 582

ಜನಪ್ರಿಯ ಸುದ್ದಿಗಳು

ಕಚೇರಿ ವಿಳಾಸ

Gadag - 582101

ಫೋನ್ ನಂ.

+91 9448302002

ಇಮೇಲ್ ಐಡಿ

asknewskannada@gmail.com

ಸೋಶಿಯಲ್ ಮೀಡಿಯಾ ಲಿಂಕ್ಸ್

© ASK News Kannada. All Rights Reserved. Designed by AGScurate IT Solutions LLP