ask-banner
ad-banner
ರಾಜ್ಯ 2025-08-11

ಶೇರ್ ಮಾಡಿ  

*ಸಚಿವ ಸಂಪುಟದಿಂದ ಸಹಕಾರಿ ಸಚಿವ ಕೆ.ಎನ್.ರಾಜಣ್ಣರನ್ನ ತೆಗೆದು ಹಾಕಲು ರಾಜ್ಯದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ರಿಗೆ ಗೌರ್ನರ್ ಸೂಚನೆ...*

ಬೆಂಗಳೂರು, ಆಗಷ್ಟ್, 11 : ಕರ್ನಾಟಕ ರಾಜ್ಯದ ಸಹಕಾರಿ ಸಚಿವ ಕೆ.ಎನ್.ರಾಜಣ್ಣರನ್ನ ತ್ವರಿತವಾಗಿ ಸಚಿವ ಸಂಪುಟದಿಂದ ತೆಗೆದು ಹಾಕಲು ರಾಜ್ಯದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ರವರಿಗೆ ಗೌರ್ನರ್ ಅಧಿಸೂಚನೆ ಹೊರಡಿಸಿದ್ದು ಸಿಎಂ ಸಿದ್ರಾಮಯ್ಯ ನೇತೃತ್ವದ ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಸಹಕಾರಿ ಸಚಿವ ಕೆ.ಎನ್.ರಾಜಣ್ಣ ಅವರನ್ನು ಕೂಡಲೆ ಸಚಿವ ಸಂಪುಟದಿಂದ ತೆಗೆದು ಹಾಕುವಂತೆ ರಾಜ್ಯಪಾಲರ ಸಹಿ ಮಾಡಿದ ಮೂಲ ಅಧಿಸೂಚನೆಯನ್ನು ಕರ್ನಾಟಕ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಆರ್.ಪ್ರಭು ಶಂಕರ್ ಪತ್ರ ರವಾನಿಸಿದ್ದಾರೆ. ಸಿಎಂ ಸಿದ್ರಾಮಯ್ಯ ಆಪ್ತರೆನ್ನಲಾಗುತ್ತಿದ್ದ ಸಹಕಾರಿ ಸಚಿವ ಕೆ.ಎನ್.ರಾಜಣ್ಣರವರನ್ನು ಸಚಿವ ಸಂಪುಟದಿಂದ ತೆಗೆದು ಹಾಕಿದ್ದು ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿಯ ಸಿಎಂ ಸಿದ್ರಾಮಯ್ಯ ಬಣ ಬೆಚ್ಚಿ ಬೀಳುವಂತೆ ಮಾಡಿದ್ದರೆ ಡಿ.ಕೆ.ಶಿವಕುಮಾರ ಬಣದಲ್ಲಿ ರಾಜಕೀಯದಾಟಕ್ಕೆ ಇಂಬು ಕೊಟ್ಟಂತಾಗಿದೆ. ಸಿಎಂ ಕುರ್ಚಿ ಕಚ್ಚಾಟಕ್ಕೆ ಕೆ.ಎನ್.ರಾಜಣ್ಣ ಸಚಿವ ಸ್ಥಾನ ಬಲಿಯಾಗಿದ್ದು ಡಿಕೆಶಿ ಸಿಎಂ ಕನಸಿಗೆ ಮುನ್ನುಡಿ ಬರೆದಂತಾಗಿದೆಯಲ್ಲದೆ ಸಿದ್ರಾಮಯ್ಯ ನವ್ಹಂಬರದಲ್ಲಿ ಸಿಎಂ ಸ್ಥಾನದಿಂದ ಕಳೆದುಕೊಳ್ಳುವುದು 6 ನೇ ಗ್ಯಾರಂಟಿ ಎಂಬ ಚರ್ಚೆ ಶುರುವಾಗಲು ಕಾರಣವಾಗಿದೆ.

Anant S. Karkal
ವೀಕ್ಷಣೆ 822

ಜನಪ್ರಿಯ ಸುದ್ದಿಗಳು

ಕಚೇರಿ ವಿಳಾಸ

Gadag - 582101

ಫೋನ್ ನಂ.

+91 9448302002

ಇಮೇಲ್ ಐಡಿ

asknewskannada@gmail.com

ಸೋಶಿಯಲ್ ಮೀಡಿಯಾ ಲಿಂಕ್ಸ್

© ASK News Kannada. All Rights Reserved. Designed by AGScurate IT Solutions LLP