ಗದಗ, ಆಗಷ್ಟ್, 12 : ಇಲ್ಲಿಯ ಜೆ.ಟಿ. ಕಾಲೇಜ್ ರಸ್ತೆ, ಮಸಾರಿಯಲ್ಲಿರುವ ಶ್ರೀ ಕೈಲಾಸ ವರಸಿದ್ದಿ ಗಣಪತಿ ದೇವಸ್ಥಾನದಲ್ಲಿ ಇಂದು ಮಂಗಳವಾರ ಅಂಗಾರಿಕಾ ಸಂಕಷ್ಟಿ ಇರುವ ಪ್ರಯುಕ್ತ ಬೆಳಿಗ್ಗೆಯಿಂದ ರಾತ್ರಿಯವರೆಗೆ ವಿವಿಧ ವಿಶೇಷ ಪೂಜೆಗಳು ಜರಗುತ್ತಿದ್ದು, ರಾತ್ರಿ ಸಾರ್ವತ್ರಿಕ ಅನ್ನಸಂತರ್ಪಣೆ ಜರುಗಲಿದೆ. ಬೆಳಿಗ್ಗೆ 7 ಗಂಟೆಗೆ ಫಲ ಪಂಚಾಮೃತ ಅಭಿಷೇಕ, 8 ಗಂಟೆಗೆ ಅಲಂಕಾರ ಪೂಜೆ, 11 ಗಂಟೆಗೆ ಶ್ರಾವಣ ಮಾಸದ ವಿಶೇಷ ಗಣ ಹೋಮ, ಮಧ್ಯಾಹ್ನ 1 ಗಂಟೆಗೆ ಮಂಗಳಾರತಿ, ರಾತ್ರಿ 8 ಗಂಟೆಗೆ ಶ್ರೀರಂಗ ಪೂಜೆ ಹಾಗೂ ಶ್ರೀ ಸತ್ಯನಾರಾಯಣ ಪೂಜೆ, ರಾತ್ರಿ 9 ಗಂಟೆಗೆ ಪಲ್ಲಕ್ಕಿ ಸೇವೆ ಜರುಗಲಿದೆ. ರಾತ್ರಿ 9-30ಕ್ಕೆ ಸಾರ್ವತ್ರಿಕ ಅನ್ನಸಂತರ್ಪಣೆ ಇದ್ದು, ಸದ್ಭಕ್ತರು ಈ ಎಲ್ಲ ಪೂಜೆಗಳಲ್ಲಿ ಪಾಲ್ಗೊಂಡು ತನು-ಮನ-ಧನದಿಂದ ಸೇವೆ ಸಲ್ಲಿಸಿ ದೇವರ ಕೃಪೆಗೆ ಪಾತ್ರರಾಗಬೇಕೆಂದು ಶ್ರೀ ಕೈಲಾಸ ವರಸಿದ್ದಿ ಗಣಪತಿ ದೇವಸ್ಥಾನದ ಟ್ರಸ್ಟ್ ಅಧ್ಯಕ್ಷರಾದ ಬಿ.ಪ್ರಸನ್ನಕುಮಾರ್, ಕಾರ್ಯದರ್ಶಿ ಯೋಗೇಶ್ ವೋರಾ ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.
© ASK News Kannada. All Rights Reserved. Designed by AGScurate IT Solutions LLP