ask-banner
ad-banner
ರಾಜ್ಯ 2025-08-15

ಶೇರ್ ಮಾಡಿ  

*ಸಚಿವ ಎಚ್ಕೆ ಪಾಟೀಲರಿಂದ ಅಂಗಾಂಗ ದಾನ ನೋಂದಣಿ...* *ತಮ್ಮ 72ನೇ ಜನುಮ ದಿನದಂದು ಅಂಗಾಂಗ ದಾನ ಮಾಡಿ ಮಾನವೀಯತೆಯ ಬಹುದೊಡ್ಡ ಸಂದೇಶ ಕೊಟ್ಟ ಮೊದಲ ಮಂತ್ರಿ...*

ಗದಗ,ಆಗಷ್ಟ್, 15 : ತಮ್ಮ ಹುಟ್ಟು ಹಬ್ಬದಂದು ಅಂಗಾಂಗ ದಾನ ನೋಂದಣಿ ಮಾಡಿಸಿದ ರಾಜ್ಯದ ಮೊದಲ ಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಕಾನೂನು ಸಂಸದೀಯ ವ್ಯವಹಾರ, ಪ್ರವಾಸೋದ್ಯಮ ಮತ್ತು ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಚ್ಕೆ ಪಾಟೀಲರು ರಾಜಕೀಯ ಮತ್ತು ರಾಜಕಾರಣಿಗಳಿಗೆ ಮಾದರಿಯಾಗಿ ಕಾಣಿಸಿದ್ದಾರೆ. ರಾಜಕಾರಣಿಗಳೆಂದರೆ ಮೂಗು ಮುರಿಯುವ ಸಾರ್ವತ್ರಕ ವ್ಯವಸ್ಥೆಯಲ್ಲಿ ತಮ್ಮ ಅಂಗಾಂಗಳನ್ನು ದಾನ ಮಾಡಿ ಮತ್ತೊಂದು ಜೀವಕ್ಕೆ ಬದುಕು ಕೊಡಲು ಮುಂದಾದ ಮಾನವೀಯತೆ ಮಂತ್ರಿಗಳಾಗಿ ಎಚ್ಕೆ ಪಾಟೀಲರು ಘೋಚರಿಸಿದ್ದಾರೆ. ರಾಜಕಾರಣಿಗಳು ಸ್ವಾರ್ಥಪರರು ಎಂಬ ಅಪಸ್ವರದ ಮಧ್ಯೆ ಮಾನವೀಯ ಮೌಲ್ಯದ ಅಪರೂಪ ರಾಜಕಾರಣಿಗಳಿದ್ದಾರೆ ಎಂಬುದನ್ನು ತಮ್ಮ ಸೇವಾ ಜೇಷ್ಠತೆ, ಶ್ರೇಷ್ಠತೆಯ ಕಾರ್ಯದ ಮೂಲಕ ಸಾಬೀತು ಪಡಿಸಿದ್ದ ಸಚಿವ ಡಾ.ಎಚ್ಕೆ ಪಾಟೀಲರು ತಮ್ಮ ಜನುಮ ದಿನದಂದು ತಮ್ಮ ಅಂಗಾಂಗ ದಾನ ನೋಂದಣಿ ಮಾಡುವ ಮೂಲಕ ಮೇರು ವ್ಯಕ್ತಿತ್ವದ ಸಮಾಜಮುಖಿ ಸೇವಕ ಎಂಬುದನ್ನು ಸಾಬೀತುಪಡಿಸಿದ್ದು ರಾಜಕಾರಣಿಗಳು ಅಪ್ಪಿ ಒಪ್ಪಿಕೊಳ್ಳುವಂತಿದೆ. *ಸಚಿವ ಎಚ್ಕೆ ಪಾಟೀಲರ ಅಂಗಾಂಗ ದಾನ ನೋಂದಣಿಯಲ್ಲಿ ಏನಿದೆ..?* ವೈದ್ಯಕೀಯ ತಜ್ಞರ ಮಂಡಳಿಯು (ಬ್ರೆನ್ನೆಮ್/ಕಾರ್ಡಿಯಾಕ್) ಸತ್ತಿದೆ ಎಂದು ಘೋಷಿಸಿದ ನಂತರ ಚಿಕಿತ್ಸಕ ಉದ್ದೇಶಕ್ಕಾಗಿ ನನ್ನ ದೇಹದಿಂದ ಉಲ್ಲೇಖಿತ ಅಂಗ (ಗಳು) ಮತ್ತು/ಅಥವಾ ಅಂಗಾಂಶ (ಗಳನ್ನು) ತೆಗೆದುಹಾಕಲು ನಾನು ಈ ಮೂಲಕ ನಿಸ್ಸಂದಿಗ್ಧವಾಗಿ ಅಧಿಕಾರ ನೀಡುತ್ತೇನೆ. 1. hereby unequivocally authorise the removal of the mentioned Organ(s) and/or Tissue(s) from my body for therapeutic purpose after being declared (BrainStem/Cardiac) dead by the board of medical experts. 2) Organs ಅಂಗಗಳು Liver, Kidney, Heart, Lungs, Intestine, Pancreas Tissues ಅಂಗಾಂಶಗಳು, Bone, Heart Valve, Skin, Cornea, Cartilage, Blood Vessels Other organs and tissues ಇತರ ಅಂಗಗಳು ಮತ್ತು ಅಂಗಾಂಶಗಳು. ಈ ರೀತಿಯ ಒಪ್ಪಂದದ ಮೇರೆಗೆ ಸಚಿವ ಎಚ್ಕೆ ಪಾಟೀಲರು ತಮ್ಮ ಅಂಗಾಂಗ ದಾನ ಮಾಡಿ ನೋಂದಣಿ ಮಾಡಿಸಿಕೊಂಡಿದ್ದು ರಾಜ್ಯ, ರಾಷ್ಟ್ರ ರಾಜಕೀಯಕ್ಕೆ ಮಾದರಿಯಾಗಿದೆ.

Anant S. Karkal
ವೀಕ್ಷಣೆ 3616

ಜನಪ್ರಿಯ ಸುದ್ದಿಗಳು

ಕಚೇರಿ ವಿಳಾಸ

Gadag - 582101

ಫೋನ್ ನಂ.

+91 9448302002

ಇಮೇಲ್ ಐಡಿ

asknewskannada@gmail.com

ಸೋಶಿಯಲ್ ಮೀಡಿಯಾ ಲಿಂಕ್ಸ್

© ASK News Kannada. All Rights Reserved. Designed by AGScurate IT Solutions LLP