ಬೆಂಗಳೂರು, ಸೆ.11 : ಕನ್ನಡ ಸಿನಿಮಾ ನಟರಾದ ಸಾಹಸಸಿಂಹ ವಿಷ್ಣುವರ್ಧನ ಹಾಗೂ ಬಿ.ಸರೋಜಾದೇವಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿಯನ್ನು ರಾಜ್ಯ ಸರ್ಕಾರ ಘೋಷಣೆ ಮಾಡಿದೆ. ಗುರುವಾರ (ಇಂದು) ನಡೆದ ಸಚಿವ ಸಂಪುಟ ಸಭೆಯ ನಿರ್ಣಯಗಳಿಗೆ ಸಂಬಂಧಿಸಿದಂತೆ ಕಾನೂನು ಹಾಗೂ ಪ್ರವಾಸೋದ್ಯಮ ಸಚಿವರಾದ ಎಚ್ಕೆ ಪಾಟೀಲ್ರು ವಿಧಾನ ಸೌಧದ ಸಮಿತಿ ಕೊಠಡಿಯಲ್ಲಿ ಸುದ್ದಿ ಗೋಷ್ಠಿ ನಡೆಸಿ ಪ್ರಶಸ್ತಿ ಬಗೆಗೆ ತಿಳಿಸಿದರು. ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ 40 ಪ್ರಮುಖ ವಿಷಯಗಳ ಚರ್ಚೆ ಆಗಿದ್ದು ಈ ಸಂದರ್ಭದಲ್ಲಿ ಕನ್ನಡ ಸಿನಿಮಾ ಖ್ಯಾತ ನಟ ವಿಷ್ಣುವರ್ಧನ್ ನಟಿ ಹಾಗೂ ಬಿ.ಸರೋಜಾದೇವಿ ಅವರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ಕೊಡಲು ನಿರ್ಧರಿಸಲಾಗಿದೆ ಎಂದರು. ಪ್ರಶಸ್ತಿ ಪ್ರಧಾನ ಯಾವಾಗ, ಎಲ್ಲಿ ಹೇಗೆ ಎಂಬುದನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ಣಯಿಸಲಾಗಿದೆ ಎಂದರು. ಇತ್ತೀಚೆಗೆ ನಟಿಯರಾದ ಜಯಮಾಲಾ, ಶೃತಿ, ಮಾಳವಿಕಾ ಅವರು ಸಿಎಂ ಸಿದ್ರಾಮಯ್ಯನವರನ್ನು ಭೇಟಿ ಮಾಡಿ ವಿಷ್ಣುವಧನವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಕೊಡಲು ಮನವಿ ಮಾಡಿದ್ದರು. ಪ್ರಶಸ್ತಿ ಘೋಷಣೆಯಿಂದ ವಿಷ್ಣುವರ್ಧನ್ ಮತ್ತು ಬಿ.ಸರೋಜಾದೇವಿ ಅಭಿಮಾನಿಗಳಲ್ಲಿ ಕುಷಿಯಾಗಿದೆ.
© ASK News Kannada. All Rights Reserved. Designed by AGScurate IT Solutions LLP