ask-banner
ad-banner
ರಾಜ್ಯ 2025-09-17

ಶೇರ್ ಮಾಡಿ  

*ರಾಜ್ಯ ಸರ್ಕಾರಕ್ಕೆ ಸಮೀಕ್ಷೆ ಮಾಡುವ ಅಧಿಕಾರನೇ ಇಲ್ಲ...*ಕೇಂದ್ರ ಸರ್ಕಾರ ಗಣತಿ ಮುಗಿಯೋತನಕ ಕಾಯಿರಿ...* *ಯಾರನ್ನೋ ಮೆಚ್ಚಿಸಲು, ಇನ್ಯಾರನ್ನೋ ಬಲಿ ಕೊಡಲು ಸಮೀಕ್ಷೆ ಮಾಡದಿರಲು ಸಿಎಂ ಸಿದ್ರಾಮಯ್ಯನವರಿಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆಗ್ರಹ.*

ಹಾವೇರಿ, ಸೆ.17 : ಕೇಂದ್ರ ಸರ್ಕಾರ ಜನಗಣತಿ ಜೊತೆಗೆ ಜಾತಿ ಗಣತಿ ಮಾಡುವುದಾಗಿ ಹೇಳಿದ್ದು ಅಲ್ಲಿವರೆಗೆ ಸಿಎಂ ಸಿದ್ದರಾಮಯ್ಯ ಕಾಯಬೇಕೆಂದು ಸಲಹೆ ನೀಡಿದ ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿಯವರು ಯಾರನ್ನೋ ಮೆಚ್ಚಿಸಲು, ಇನ್ಯಾರನ್ನೋ ತುಳಿಯಲು ಸಮೀಕ್ಷೆ ನಡೆಸಬಾರದೆಂದು ಆಗ್ರಹಿಸಿದರು. ಹಾವೇರಿಯಲ್ಲಿ ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರಕ್ಕೆ ಸಮೀಕ್ಷೆ ಮಾಡುವ ಅಧಿಕಾರನೇ ಇಲ್ಲ. ಸ್ಯಾಂಪಲ್ ಸರ್ವೆ ಮಾಡುವ ಅಧಿಕಾರ ಇದೆ. ಕೇಂದ್ರ ಸಮೀಕ್ಷಾ ಕಾಯಿದೆ ಪ್ರಕಾರ ರಾಜ್ಯ ಸರ್ಕಾರಕ್ಕೆ ಮನೆ ಮನೆಗೆ ಹೋಗಿ ಸರ್ವೆ ಮಾಡುವ ಅಧಿಕಾರ ಇಲ್ಲ. ಇವರು ಸಮೀಕ್ಷೆ ಹೆಸರಿನಲ್ಲಿ ಹಲವಾರು ಗೊಂದಲ ಸೃಷ್ಟಿಸುತ್ತಿದ್ದು ವೀರಶೈವ ಲಿಂಗಾಯತ ಅಂತ ಒಂದು ಜಾತಿ ಸೃಷ್ಟಿ ಮಾಡಿದಾರೆ. ಲಿಂಗಾಯತ ವೀರಶೈವ ಅಂತ ಮತ್ತೊಂದು ಸೃಷ್ಟಿ ಮಾಡಿದ್ದಾರೆ. ಪ್ರತಿ ಸಮುದಾಯದಲ್ಲಿ ಇಪ್ಪೈತ್ತೈದರಿಂದ ಮೂವತ್ತು ಹೊಸ ಉಪ ಪಂಗಡಗಳನ್ನು ಸೃಷ್ಟಿ ಮಾಡಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು. *ಮತಾಂತರಿಗಳಿಗೆ ಪ್ರತ್ಯೇಕ ಕಾಲಂ* ಕನ್ವರ್ಟೆಡ್ ಕ್ರಿಶ್ಚಿಯನ್ ಅಂತ ಒಂದು ಪ್ರತ್ಯೇಕ ಕಾಲಂ ಮಾಡಿದ್ದಾರೆ. ಎಲ್ಲಾ ಸಮಾಜದಲ್ಲಿ ಕನ್ವರ್ಟೆಡ್ ಕ್ರಿಶ್ಚಿಯನ್ ಇರುವ ರೀತಿಯಲ್ಲಿ ಮಾಡಿದ್ದು ಸರಿಯಲ್ಲ. ಸಂವಿಧಾನದಲ್ಲಿ ಕನ್ವರ್ಟೆಡ್ ಗೆ ಯಾವುದೇ ಕಾಲಂ ಇಲ್ಲ. ಇವರು ಸಮಾಜ ಒಡೆಯೋದಲ್ಲ, ಸಮಾಜ ಚೂರು ಚೂರು ಮಾಡಿದ್ದಾರೆ. ಇದು ಸದುದ್ದೇಶದಿಂದ ಕೂಡಿಲ್ಲ, ರಾಜಕೀಯ ದುರುದ್ದೇಶದಿಂದ ಕೂಡಿದೆ ಎಂದು ಆರೋಪಿಸಿದರು. ಮತಾಂತರ ನಿಷೇಧ ಕಾನೂನು ಕರ್ನಾಟಕದಲ್ಲಿದೆ,‌ ನಮ್ಮ ಸರ್ಕಾರದಲ್ಲೇ ಕಾಯ್ದೆ ತಿದ್ದುಪಡಿ ಮಾಡಿದ್ದೇವೆ. ಒತ್ತಾಯ ಪೂರ್ವಕವಾಗಿ ಮತಾಂತರ, ಆಮಿಷ ಪೂರ್ವಕ ಮತಾಂತರಕ್ಕೆ ಯಾವಾಗಲೂ ನಿಷೇಧ ಇದ್ದೇ ಇದೆ. ಕಣ್ಣು ಮುಚ್ಚಿಕೊಂಡು ದಾರಿ ತಪ್ಪಿಸುವ ಕೆಲಸ ಸಿದ್ರಾಮಯ್ಯ ಸರ್ಕಾರ ಮಾಡುತ್ತಿದೆ ಎಂದು ಆರೋಪಿಸಿದರು. ಕುರುಬ ಸಮಾಜವನ್ನು ಎಸ್.ಟಿ.ಗೆ ಸೇರಿಸುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಜ್ಯ ಸರ್ಕಾರ ಎಲ್ಲಾ ಸಮುದಾಯಗಳ ವಿಶ್ವಾಸ ತೆಗೆದುಕೊಳ್ಳಬೇಕು. ನಾನು ಸಿಎಂ ಆಗಿದ್ದಾಗ ವಾಲ್ಮೀಕಿ ಸಮಾಜಕ್ಕೆ ಮೀಸಲಾತಿಯನ್ನು ಶೇ 3 ರಿಂದ ಶೇ 7% ಹೆಚ್ಚಳ ಮಾಡಿದೆ. ಎಸ್.ಸಿ.ಗೆ ಶೇ.15 ರಿಂದ ಶೇ. 17 ಕ್ಕೆ ಹೆಚ್ಚಳ ಮಾಡಿದ್ದೇನೆ. ಈಗ ಅದರ ಪ್ರಕಾರ ನಡೆದಿದೆ. ಮುಂದೆ ಕೇಂದ್ರ ಸರ್ಕಾರ ಸಮೀಕ್ಷೆ ಮಾಡಲಿದೆ. ಅದರ ಆಧಾರದ ಮೇಲೆ ಜನಸಂಖ್ಯೆ ಗೊತ್ತಾಗುತ್ತದೆ. ಇದರ ಮೇಲೆ ಮುಂದೆ ನಿರ್ಧಾರ ಆಗುತ್ತದೆ ಎಂದರು. *ಡಿಜೆ ಕೇಸ್ ವಾಪಸ್ ಪಡೆಯಲಿ* ಗಣೇಶೋತ್ಸವದ ಸಂದರ್ಭದಲ್ಲಿ ಹಾವೇರಿ ಜಿಲ್ಲೆಯಲ್ಲಿ ಡಿಜೆ ನಿಷೇಧ ಮಾಡಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಧಾರವಾಡದಲ್ಲಿ ಡಿ.ಜೆ ಬಳಸಲು ಅವಕಾಶ ಕಲ್ಪಿಸಿದ್ದಾರೆ. ಬೆಳಗಾವಿ ವಿಭಾಗದಲ್ಲಿ ಡಿಜೆ ಬಳಕೆಗೆ ಅವಕಾಶ ನೀಡಿದ್ದಾರೆ. ಆದರೆ ಹಾವೇರಿ ಜಿಲ್ಲೆಗೆ ಅವಕಾಶ ಮಾಡಿಲ್ಲ. ಡಿಜೆ ಡೆಸಿಬಲ್ ಕಡಿಮೆ ಮಾಡಲು ಕೋರ್ಟ್ ನಿಯಮ ಇದೆ. ಅದನ್ನು ಪಾಲಿಸುವಂತೆ ನೋಡಿಕೊಂಡರೆ ಆಯಿತು. ಇವರು ಗಣೇಶ ಹಬ್ಬದ ಹುರುಪು ಹಾಳು ಮಾಡಿದ್ದಾರೆ. ಡಿ.ಜೆ. ವಿಚಾರದಲ್ಲಿ ಸರ್ಕಾರ ಕಾರ್ಯಕರ್ತರ ಮೇಲೆ ಹಾಕಿರುವ FIR ತೆಗೆದು ಹಾಕಬೇಕೆಂದು ಆಗ್ರಹಿಸಿದರು.

Anant S. Karkal
ವೀಕ್ಷಣೆ 77

ಜನಪ್ರಿಯ ಸುದ್ದಿಗಳು

ಕಚೇರಿ ವಿಳಾಸ

Gadag - 582101

ಫೋನ್ ನಂ.

+91 9448302002

ಇಮೇಲ್ ಐಡಿ

asknewskannada@gmail.com

ಸೋಶಿಯಲ್ ಮೀಡಿಯಾ ಲಿಂಕ್ಸ್

© ASK News Kannada. All Rights Reserved. Designed by AGScurate IT Solutions LLP