ಗದಗ, ಸೆ.27 : ಶಾಸಕರು ಸಚಿವರು ಅಂದ್ರೆ ಏನೇನೋ ಕಲ್ಪಿಸಿಕೊಳ್ಳುವ ಮಧ್ಯೆ ಸರಳತೆ ಮೆರೆಯುವ ಜನಪ್ರತಿ ನಿಧಿಗಳನ್ನು ಕಂಡಾಗ ಹುಬ್ಬೇರಿಸಿ ಕಣ್ಣರಳಿಸಿ ನೋಡುತ್ತಾ ನಿಲ್ಲುವಂತಹ ವ್ಯವಸ್ಥೆ ಇದೆ ಎಂಬುದಕ್ಕೆ ಶಿರಹಟ್ಟಿ ಶಾಸಕ ಡಾ.ಚಂದ್ರು ಲಮಾಣಿ ಸಾಕ್ಷಿಯಾಗಿ ಕಂಡಿದ್ದಾರೆ. ಶನಿವಾರ ಮುಂಡರಗಿಯಲ್ಲಿ ಬಿಜೆಪಿ ಯುವ ಮೋರ್ಚಾ ಏರ್ಪಡಿಸಿದ್ದ ಪ್ರಧಾನಿ ನರೇಂದ್ರ ಮೋದಿಯವರ 75ನೇ ಹುಟ್ಟು ಹಬ್ಬದಂಗವಾಗಿ ಸೇವಾ ಪಾಕ್ಷಿಕ ಅಭಿಯಾನ 2025 ನಮೋ ಯುವ ರನ್ ವಾಕಥಾನ್ ಸಂದರ್ಭದಲ್ಲಿ ರಸ್ತೆಯ ಮೇಲೆ ಕುಳಿತು ತಿಂಡಿ ತಿನ್ನುತ್ತಾ ಕುಳಿತ ಶಿರಹಟ್ಟಿ ಶಾಸಕ ಡಾ.ಚಂದ್ರು ಲಮಾಣಿ ಅವರನ್ನು ಕಂಡ ಕಾರ್ಯಕರ್ತರು ಕುತೂಹಲದಿಂದ ನೋಡುತ್ತಾ ಶಾಸಕರ ಸರಳ ನಡೆಯನ್ನು ಪ್ರಶಂಸಿಸಿದರಲ್ಲದೆ ಜನಪ್ರತಿನಿಧಿಗಳಂದ್ರೆ ಹಿಂಗ ಇರ್ಬೆಕೆಂದು ಹೇಳುತ್ತಿದ್ದರು. ರಾಜಕಾರಣಿಗಳು, ಜನಪ್ರತಿನಿಧಿಗಳು ಸೇರಿ ಶಾಸಕರು, ಸಚಿವರೆಂದರೆ ಭಿನ್ನರಾಗದಲ್ಲಿರುವ ಜನತೆಗೆ ಇಂತಹ ಸರಳ ವ್ಯಕ್ತಿತ್ವದ ಶಾಸಕರು, ಸಚಿವರನ್ನು ಕಂಡಾಗ ಕುಷಿ ಪಡದೆ ಇರಲಾರರು. ಡಾ.ಚಂದ್ರು ಲಮಾಣಿ ಸಿದಾ ಸಾದಾ ವ್ಯಕ್ತಿತ್ವದ ಶಾಸಕರು ಎನ್ನುವ ಮಾತಿಗೆ ಈಗಿನ ನಡೆ ಮತ್ತಷ್ಟು ಸರಳತೆಗೆ ಸಾಕ್ಷಿಯಾಗಿತ್ತು. ಇನ್ನೂ ಕೆಲುವು ಕುಹುಕಿಗಳು ಇವೆಲ್ಲಾ ರಾಜಕೀಯ ಗಿಮಿಕ್ ಎನ್ನುವ ಮಾತುಗಳ ಕೇಳಲ್ಪಟ್ಟವಲ್ಲದೆ ನಮ್ಮ ಶಾಸಕರು ಬೀದಿಗೆ ಬಂದ್ರು ಅನ್ನುವ ಸಂಕಟದ ಮಾತುಗಳು ಚರ್ಚೆಯಲ್ಲಿತ್ತು. ಗದಗ ಜಿಲ್ಲೆಯ ಕೈ- ಕಮಲ ಬಹುತೇಕ ಶಾಸಕರು, ಸಚಿವರು ಸರಳತೆಯ ವ್ಯಕ್ತಿತ್ವದಲ್ಲಿ ಇದ್ದಾರೆಂಬುದನ್ನು ಅಲ್ಲಗಳೆಯಲಾಗದು. (Simple life high tinking) ಸರಳ ಜೀವನ ಉದಾತ್ತ ವಿಚಾರದ ವ್ಯಕ್ತಿಗಳು ಎಲ್ಲರನ್ನು ತಮ್ಮತ್ತ ಆಕರ್ಷಿಸಬಲ್ಲರು ಎಂಬುದು ಸುಳ್ಳಲ್ಲ.
© ASK News Kannada. All Rights Reserved. Designed by AGScurate IT Solutions LLP