ask-banner
ad-banner
ರಾಜ್ಯ 2025-09-27

ಶೇರ್ ಮಾಡಿ  

*ಪ್ರವಾಸೋದ್ಯಮ ಕ್ಷೇತ್ರದಲ್ಲಿ ಕರ್ನಾಟಕ ರಾಜ್ಯವು ದೇಶದಲ್ಲಿ ಮೂರನೇ ಸ್ಥಾನದಲ್ಲಿರುವುದು ಅಭಿಮಾನದ ಸಂಗತಿ....* *ಪ್ರವಾಸೋದ್ಯಮ ಐಷಾರಾಮಿ ಜನರ ಖುಷಿಯ ಉದ್ಯಮವಲ್ಲ..ಸಚಿವ ಎಚ್ಕೆ ಪಾಟೀಲ*

ಗದಗ, ಸೆ. 27 : ಪ್ರವಾಸೋದ್ಯಮ ಕ್ಷೇತ್ರದಲ್ಲಿ ಕರ್ನಾಟಕ ರಾಜ್ಯವು ದೇಶದಲ್ಲಿ ಮೂರನೇ ಸ್ಥಾನದಲ್ಲಿರುವುದು ಗರ್ವದ ಸಂಗತಿ ಎಂದು ಪ್ರವಾಸೋದ್ಯಮ, ಕಾನೂನುಮತ್ತು ಸಂಸದೀಯ ಸಚಿವರಾದ ಎಚ್ಕೆ ಪಾಟೀಲ ಹೆಮ್ಮೆಯಿಂದ ಹೇಳಿದರು. ಅವರು ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಪ್ರವಾಸೋದ್ಯಮ ಇಲಾಖೆ, ಮಹಾತ್ಮಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವ ವಿದ್ಯಾಲಯ ಸಹಯೋಗದಲ್ಲಿ ವಿವಿ ಕೌಶಲ್ಯ ವಿಕಾಸ ಭವನದಲ್ಲಿ ಶನಿವಾರ ನಡೆದ ವಿಶ್ವ ಪ್ರವಾಸೋದ್ಯಮ ದಿನ-2025 ಕಾರ್ಯಕ್ರಮ ಉದ್ಘಾಟಿಸಿ ಸಚಿವ ಎಚ್.ಕೆ. ಪಾಟೀಲ ಮಾತನಾಡಿದರು. ಜಿಲ್ಲೆಯ ನೆಲ ಐತಿಹಾಸಿಕ ಪ್ರವಾಸಿ ತಾಣವಾಗಿದ್ದು ಗದಗ 20 ಕಿ.ಮೀ ಸುತ್ತಲೂ ವಿಶ್ವ ಪಾರಂಪರಿಕ ಸ್ಥಳವಾಗಲು ಅರ್ಹತೆ ಪಡೆದ ಪ್ರದೇಶವಾಗಿದೆ ಎಂದರು. ಹತ್ತಿರದ ಲಕ್ಕುಂಡಿಯಲ್ಲಿ ತಲಾ 101 ಭಾವಿ, ದೇವಸ್ಥಾನಗಳಿದ್ದು ವಿಶಾಲವಾದ ಕೆರೆ, ದೊಡ್ಡಬಸಪ್ಪನ ದೇವಾಲಯದ ಶೈಲಿ ಡಂಬಳದಲ್ಲಿದ್ದು ಪ್ರಾಚಿನವಾದ ದೇವಾಲಯವಾಗಿದೆ ಎಂದರಲ್ಲದೆ ಪರಿಸರ, ಸೌಹಾರ್ದಯುತ ಬದುಕು ಮುಳಗುಂದದಲ್ಲಿ ಸಿಗುತ್ತವೆ. ಗದಗ ತಾಲ್ಲೂಕ ಸೇರಿದಂತೆ ಜಿಲ್ಲೆಯ ಸೂಡಿ, ಕೊಟಮುಚಗಿ, ಗಜೇಂದ್ರಗಡ, ನರಗುಂದ ಇವೆಲ್ಲವೂ ಪ್ರವಾಸಿ ತಾಣಗಳಾಗಿದ್ದು ಇವೆಲ್ಲವುಗಳು ಗದಗ ಜಿಲ್ಲೆಯಲ್ಲಿರುವುದು ನಮಗೆಲ್ಲ ಹೆಮ್ಮೆ ಎಂದರು. ರಾಜ್ಯ ಸರ್ಕಾರದಿಂದ 1,200 ಪ್ರವಾಸಿ ತಾಣಗಳನ್ನು ಗುರುತಿಸಲಾಗಿದೆ. ಅದರಲ್ಲಿ 48 ತಾಣಗಳು ಗದಗ ಜಿಲ್ಲೆಯಲ್ಲಿವೆ ಎನ್ನುವುದು ನಮ್ಮ ಹೆಮ್ಮೆಯಾಗಿದೆ. ಕಪ್ಪತ್ತಗುಡ್ಡ, ಪ್ರಾಣಿ ಸಂಗ್ರಹಾಲಯ ಸೇರಿದಂತೆ ಹಲವಾರು ಪ್ರದೇಶಗಳು ಪ್ರವಾಸಿಗರನ್ನು ಆಕರ್ಷಿಸುತ್ತಿದ್ದು ಕೆಲವೇ ತಿಂಗಳಲ್ಲಿ ಯುನೆಸ್ಕೊದಿಂದ ಲಕ್ಕುಂಡಿ ಐತಿಹಾಸಿಕ ವಿಶ್ವ ಪಾರಂಪರಿಕ ಸ್ಥಳ ಅಂತ ಗುರುತಿಸುವ ಕಾಲ ಬರಲಿದೆ ಎಂದು ಸಚಿವ ಎಚ್.ಕೆ. ಪಾಟೀಲ ವಿಶ್ವಾಸ ವ್ಯಕ್ತ ಪಡಿಸಿದರು. ಲಕ್ಕುಂಡಿಯಲ್ಲಿ ಈಗಾಗಲೇ ಉತ್ಖನನ ಪ್ರಾರಂಭ ಮಾಡಲಾಗಿದೆ. ಒಂದೇ ದಿನದಲ್ಲಿ 1,100 ಪ್ರಾಚ್ಯಾವಶೇಷಗಳನ್ನು ಸಂಗ್ರಹ ಮಾಡಲಾಗಿದೆ. ನಮ್ಮ ಸುತ್ತ-ಮುತ್ತ ಐತಿಹಾಸಿಕ ಪ್ರಾಚ್ಯಾವಶೇಷ ಸಂಪತ್ತಿದ್ದು ಇದರ ಬಗ್ಗೆ ವಿಶೇಷ ಅಭಿಮಾನ ಇದೆ. ವಿದೇಶಕ್ಕೆ ಹೋಲಿಕೆ ಮಾಡಿದರೆ ಭಾರತದಲ್ಲಿ ಅತೀ ಹೆಚ್ಚು ಆಶ್ಚರ್ಯಕರ ಪ್ರವಾಸಿ ತಾಣಗಳಿವೆ ಎಂದರು. ಕರ್ನಾಟಕದ ಕಾಸರಗೋಡದಿಂದ ಕಾರವಾರದವರೆಗೆ ಅಂದಾಜು 320 ಕಿ. ಮೀ. ಸುಂದರ ಪ್ರವಾಸಿ ತಾಣವಾಗಿದೆ. ಪ್ರವಾಸೋದ್ಯಮ ಐಶಾರಾಮಿ ಜನರ ಖುಷಿಯ ಉದ್ಯಮ ಅಲ್ಲ. ಪ್ರವಾಸೋಧ್ಯಮ ಜನರ ಮನಸ್ಸಿನಲ್ಲಿ ಬದಲಾವಣೆ ತರವುದಾಗಿದೆ. ಕೋಶ ಓದು, ದೇಶ ಸುತ್ತಬೇಕು ಎನ್ನುವ ಗಾದೆ ಇದೆ. ದೇಶ ಸುತ್ತುವುದರಿಂದ ಬದುಕಿನಲ್ಲಿ ಬದಲಾವಣೆ ಆಗಲು ಸಾಧ್ಯವಾಗುತ್ತದೆ ಎಂದು ಎಚ್.ಕೆ.ಪಾಟೀಲ ಅಭಿಪ್ರಾಯ ಪಟ್ಟರು. ರಾಜ್ಯ ಸರ್ಕಾರ ಪ್ರವಾಸೋದ್ಯಮಕ್ಕೆ ತನ್ನದೇ ಆದ ನೀತಿ ಹೊಂದಿದೆ. ಪ್ರವಾಸೋಧ್ಯಮ ಆದಾಯದ ಮೂಲ ಅಂತ ಹೇಳ್ತಾರೆ. ಆದರೆ, ಪ್ರವಾಸೋದ್ಯಮ ದುಡ್ಡಿಗಾಗಿ ಮಾಡುವುದಲ್ಲ. ಜನರ ಬದುಕಿನಲ್ಲಿ ಜ್ಞಾನಾರ್ಜನೆಗೆ ಮಾಡುವ ಕೇಂದ್ರವಾಗಿದೆ ಎಂದು ಹೇಳಿದರು. ಭಾರತ ಪ್ರವಾಸೋಧ್ಯಮ ಕ್ಷೇತ್ರದಲ್ಲಿ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ವಿದೇಶದಲ್ಲಿ ಜೋಗ ಜಲಪಾತ, ಶರಾವತಿ ಜಲಪಾತ, ಲಕ್ಕುಂಡಿಯ ಬಸ್ತಿ, ಬಾದಾಮಿ, ಐಹೋಳೆಯಲ್ಲಿರುವ ಐತಿಹಾಸಿಕ ದೇವಸ್ಥಾನಗಳು ಕಾಣಸಿಗುವುದಿಲ್ಲ. ಜಿಲ್ಲೆಯ 48 ತಾಣ ಸೇರಿ ರಾಜ್ಯದ 1200 ತಾಣಗಳು ಒಳಗೊಂಡು ರಾಷ್ಟ್ರ ಮಟ್ಟದಲ್ಲಿ ಮೂರನೇ ಸ್ಥಾನದಲ್ಲಿದೆ. ಬಿಂಕದಕಟ್ಟಿ ಪ್ರಾಣಿ ಸಂಗ್ರಹಾಲಯ ರಾಜ್ಯದಲ್ಲಿ ಎರಡನೇ ಸ್ಥಾನದಲ್ಲಿದೆ. ಮುಂದಿನ ದಿನಗಳಲ್ಲಿ ರಾತ್ರಿ ವೇಳೆ ವಿಕ್ಷೀಸಲು ಅವಕಾಶ ಕಲ್ಪಿಸಿಕೊಡಲಾಗುವುದೆಂದು ಸಚಿವರು ತಿಳಿಸಿದರು. ಇದೇ ವೇಳೆ ವಿವಿಧ ಸ್ಪರ್ದೆಗಳಲ್ಲಿ ಭಾಗವಹಿಸಿ ಜಯ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಿಸಿದರು. ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ್ ಬಬರ್ಚಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ. ಬಿ. ಅಸೂಟಿ, ಸಿದ್ದು ಪಾಟೀಲ, ಪ್ರಭು ಬುರಬುರೆ, ವಿಶ್ವವಿದ್ಯಾಲಯದ ಕುಲಪತಿ ಪ್ರೋ. ಸುರೇಶ ನಾಡಗೌಡರ, ಜಿಲ್ಲಾಧಿಕಾರಿ ಸಿ. ಎನ್.ಶ್ರೀಧರ್, ಜಿಲ್ಲಾ ಪೊಲೀಸ್ ಅಧೀಕ್ಷಕ ರೋಹನ್ ಜಗದೀಶ್, ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ. ಆರ್, ಡಾ. ಶರಣು ಗೋಗೇರಿ, ಗಂಗಪ್ಪ ಎಂ, ಕೊಟ್ರೇಶ್ ವಿಭೂತಿ, ಪ್ರಶಾಂತ್ ಜೆ. ಸಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Anant S. Karkal
ವೀಕ್ಷಣೆ 217

ಜನಪ್ರಿಯ ಸುದ್ದಿಗಳು

ಕಚೇರಿ ವಿಳಾಸ

Gadag - 582101

ಫೋನ್ ನಂ.

+91 9448302002

ಇಮೇಲ್ ಐಡಿ

asknewskannada@gmail.com

ಸೋಶಿಯಲ್ ಮೀಡಿಯಾ ಲಿಂಕ್ಸ್

© ASK News Kannada. All Rights Reserved. Designed by AGScurate IT Solutions LLP