ಒಳಗೆ ಸ್ಪರ್ಧಿಗಳು ಇರುವಾಗಲೇ ಬಿಗ್ ಬಾಸ್ ಕನ್ನಡ ಸಿಸನ್ 12 ಜಾಲಿವುಡ್ ಸ್ಟುಡಿಯೋಗೆ ಸಂಬಂಧಿಸಿದ ಅಧಿಕಾರಿಗಳು ಬೀಗ ಜಡೆದಿದ್ದಾರೆ. ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ಬಿಗ್ ಬಾಸ್ ಸಿಸನ್ 12 ರ ಜಾಲಿವುಡ್ ಸ್ಟುಡಿಯೋಗೆ (ಮನೆಗೆ) ಮಂಗಳವಾರ ರಾಮನಗರ ತಹಶಿಲ್ದಾರ ಮತ್ತು ಪೋಲಿಸರ ಸಮ್ಮುಖದಲ್ಲಿ ಬೀಗ ಹಾಕಲಾಗಿದೆ. ಪರಿಸರ ಉಲ್ಲಂಘನೆ ಆರೋಪದಲ್ಲಿ ನೋಟೀಸ್ ಜಾರಿ ಮಾಡಿದ ಬೆನ್ನಲ್ಲೇ ಅಲ್ಲಿಯ ಜಿಲ್ಲಾಡಳಿತ ಬೀಗ ಜಡಿದು ಸಂಜೆ 7-30 ತನಕ ತೆರವುಗೊಳಿಸಲು ಕಾಲಾವಕಾಶ ನೀಡಿದೆ. ಶೋ ನಡೆದ 2ಡೇ ವಾರಕ್ಕೆ ಬಿಗ್ ಬಾಸ್ ಮನೆ ಬಂದಾಗಿದೆ ಎನ್ನಲಾಗುತ್ತಿದೆಯಾದರು ಮುಂದೇನು ಎಂಬ ಕುತೂಹಲ ಕೆರಳಿಸಿದೆ. ಇಲ್ಲಿಗೆ ಬಂದ್ ಆಗುತ್ತಾ ಬಿಗ್ ಬಾಸ್ ಕನ್ನಡ 12 ನೇ ರಿಯಾಲಿಟಿ ಶೋ ಎಂಬ ಚರ್ಚೆಗಳು ಶುರು ಆಗಿವೆ. ಬಿಗ್ ಬಾಸ್ ನಡೆಯುತ್ತಿರುವ ಜಾಲಿವುಡ್ ಸ್ಟುಡಿಯೋಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನೋಟಿಸ್ ನೀಡಿದಾಗಲು ಎಚ್ಚರ ವಹಿಸದೆ ಇರುವುದರಿಂದ ಬಿಗ್ ಬಾಸ್ ಮನೆಗೆ ಬೀಗ ಅನಿವಾರ್ಯ ಎಂದು ಅರಣ್ಯ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ (Eshwar Khandre) ಹೇಳಿಕೆ ನೀಡಿದ್ದರು. ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತೇವೆ ಎಂದು ಅವರು ಹೇಳಿದ್ದಾರೆ. ರಾಮನಗರದ ಅಧಿಕಾರಿಗಳು ಹಿಂದೆಯೇ ನೋಟಿಸ್ ಕೊಟ್ಟಿದ್ದಾರೆ. 2024ರ ಮಾರ್ಚ್‌ನಲ್ಲೇ ನೋಟಿಸ್ ನೀಡಲಾಗಿತ್ತು. ಪರಿಶೀಲನೆ ವೇಳೆ ಪರವಾನಗಿ ಪಡೆದಿಲ್ಲ ಎಂಬ ಮಾಹಿತಿ ಬಂದಿದೆ. ಸ್ಟುಡಿಯೋದವರು ಪರವಾನಗಿ ಪಡೆದಿಲ್ಲ, ಅರ್ಜಿಯನ್ನೂ ಹಾಕಿಲ್ಲ. ನೋಟಿಸ್ ಕೊಟ್ಟರೂ ಅಮ್ಯೂಸ್‌ಮೆಂಟ್ ಪಾರ್ಕ್ ನಡೆಸುತ್ತಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಲಿದ್ದಾರೆ ಎಂದಿದ್ದರು. ಈ ಮಧ್ಯ ಬಿಗ್ ಬಾಸ್ ಮನೆಗೆ ಬೀಗ ಜಡಿದ ಬೆನ್ನಲ್ಲೆ ಬಿಗ್ ಬಾಸ್ ಆಡಳಿತ ಮಂಡಳಿಯು ಸಭೆ ನಡೆಸಿ ಚರ್ಚೆ ನಡೆಸುತ್ತಿರುವುದು ಕೇಳಲಾಗುತ್ತಿದೆ. ಬಿಗ್ ಬಾಸ್ ಸೀಸನ್ 12 ರ ಮನೆಗೆ ಬೀಗ ಬಿದ್ದಿದ್ದರಿಂದ ಬಿಗ್ ಬಾಸ್ ಸ್ಪರ್ಧಿಗಳಲ್ಲಿ, ಬಿಗ್ ಬಾಸ್ ನೋಡುಗರಲ್ಲಿ ತೀವ್ರ ಆತಂಕ ಸೃಷ್ಟಿಸಿದ್ದು ಸುಳ್ಳಲ್ಲ.
© ASK News Kannada. All Rights Reserved. Designed by AGScurate IT Solutions LLP