ask-banner
ad-banner
ರಾಜ್ಯ 2025-10-13

ಶೇರ್ ಮಾಡಿ  

RSS ಬ್ಯಾನ್ ಮಾಡಲು ನಿನ್ಯಾವ ಪುಟಗೋಸಿಯೋ...ಏ ಪ್ರಿಯಾಂಕ ಖರ್ಗೆ ವಿರುದ್ಧ ಶಾಸಕ ಸಿ.ಸಿ.ಪಾಟೀಲ ತೀವ್ರ ಆಕ್ರೋಶ...

ಗದಗ, ಆ. 13 : ಆ‌ರ್.ಎಸ್‌.ಎಸ್ ಬ್ಯಾನ್ ಮಾಡಲು ನಿನ್ಯಾವ ಪುಟಗೋಸಿಯೋ ಎಂದು ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಶಾಸಕರು, ಮಾಜಿ ಸಚಿವರಾದ ಸಿ.ಸಿ. ಪಾಟೀಲ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಗದಗದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ವಾಗ್ದಾಳಿ ನಡೆಸಿದ ಅವರು ಕಾಂಗ್ರೆಸ್ ಸರ್ಕಾರದ ಆಡಳಿತದ ವೈಫಲ್ಯ ಮತ್ತು ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಕೆಂಡಾ ಮಂಡಲಾಗಿ ಮಾತನಾಡಿದರು. ಮಾಜಿ ಪ್ರಧಾನಿಗಳಾದ ಜವಾಹರಲಾಲ್ ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿಯಿಂದಲೇ ಆ‌ರ್.ಎಸ್.ಎಸ್ ಬ್ಯಾನ್ ಮಾಡೋಕಾಗಿಲ್ಲ ಇನ್ನೂ ನಿನ್ಯಾವ ಲೆಕ್ಕ, ನಿನ್ಯಾವ ಪುಟಗೋಸಿ ಎಂದು ಸಚಿವ ಖರ್ಗೆಗೆ ವಿರುದ್ಧ ವಾಗ್ದಾಳಿ ನಡೆಸಿದರು. ತಂದೆ ರಾಷ್ಟ್ರೀಯ ಪಕ್ಷದ ಅಧ್ಯಕ್ಷ ಎಂಬ ಕಾರಣದಿಂದಾಗಿ ದುರಂಕಾರದ ವರ್ತನೆಯಲ್ಲಿ ತೆಲಾಡುತ್ತಾ ಪ್ರತಿಯೊಂದು ವಿಷಯದಲ್ಲೂ ಮೂಗು ತೂರಿಸುತ್ತಿರುವ ಪ್ರಿಯಾಂಕ ಖರ್ಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಿಷೇಧಕ್ಕಾಗಿ ಸಿಎಂಗೆ ಪತ್ರ ಬರೆದಿರುವುದು ಉದ್ದಟತನದ ಪರಮಾವಧಿ ಎಂದು ತಿವಿದರು. ಪ್ರಿಯಾಂಕ ಖರ್ಗೆ ಪತ್ರಕ್ಕೆ ತರಾತುರಿ ಸಿಎಂ ಸಿದ್ದರಾಮಯ್ಯ ಅವರು ಸಹಿ ಹಾಕಿ ಮುಂದಿನ ಕ್ರಮಕ್ಕೆ ಆದೇಶಿಸಿರುವುದು ನಿಜಕ್ಕೂ ಆಶ್ಚರ್ಯವಾಗುತ್ತಿದೆ ಎಂದರಲ್ಲ ಇನ್ನು ಕೆಲವೇ ವರ್ಷಗಳಲ್ಲಿ ಪ್ರಿಯಾಂಕ್ ಖರ್ಗೆ ನಿನಗೆ ನಿಮ್ಮಪ್ಪನಿಗೆ ಮತದಾರರು ತಕ್ಕ ಪಾಠ ಕಲಿಸುತ್ತಾರೆಂದ ಪಾಟೀಲರು ನಿನಗೆ ಮತ್ತು ನಿನ್ನ ರಾಜ್ಯ ಸರ್ಕಾರಕ್ಕೆ ತಾಕತ್ತಿದ್ದರೆ ಪಿಎಫ್‌ಐ, ಎಸ್ಟಿಪಿಐ ನಂತಹ ದೇಶದ್ರೋಹ ಸಂಘಟನೆಗಳನ್ನು ಬ್ಯಾನ್ ಮಾಡಿ ತೋರಿಸು ಎಂದು ಸವಾಲು ಹಾಕಿದರು. ತನ್ನ ಜಿಲ್ಲೆಯ ಶಿಕ್ಷಣದ ಗುಣಮಟ್ಟ ಎಷ್ಟಿದೆ, ತನ್ನ ಮತ ಕ್ಷೇತ್ರದ ರಸ್ತೆಗಳು ಯಾವ ಮಟ್ಟದಲ್ಲಿವೆ ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು ಎಂದು ಖರ್ಗೆಗೆ ಬುದ್ದಿ ಹೇಳಿದರು. ಆರ್ ಎಸ್ ಎಸ್ ವಿರೋಧದ ಮೂಲಕ ಮುಸ್ಲಿಂ ಮತದಾರರು ಹಾಗೂ ಹಿರಿಯ ನಾಯಕರ ಮೆಚ್ಚುಗೆ ಪಡೆಯಲು ನಾಟಕ ಆಡುತ್ತಿರುವುದು ಜನತೆಗೆ ಅರ್ಥವಾಗಿದೆಯಲ್ಲದೆ ಯಾರು ದೇಶ ಭಕ್ತರು ಎಂಬುದನ್ನು ಚೆನ್ನಾಗಿ ಗುರುತಿಸಿದ್ದಾರೆ ಎಂದರು. ಸಿದ್ದರಾಮಯ್ಯ ತಮ್ಮ ಸಿಎಂ ಸ್ಥಾನ ಉಳಿಸಿಕೊಳ್ಳಲು ಪ್ರಿಯಾಂಕ್ ಖರ್ಗೆ ಆಡುತ್ತಿರುವ ಆಟಕ್ಕೆ, ನಡೆದಿರುವ ಕುತಂತ್ರಕ್ಕೆ ಕುಮ್ಮಕ್ಕು ಕೊಡುತ್ತಿರುವುದನ್ನು ನಿಲ್ಲಿಸಬೇಕೆಂದರು. ಇನ್ನು ಡಿಸಿಎಂ ಡಿಕೆಶಿ ಅವರು ಮಣಿರತ್ನ ಶಾಸಕರಿಗೆ ಕರಿ ಟೋಪಿ ಎಂಎಲ್‌ಎ ಎಂದು ಕರೆದಿರುವುದು ಬೇಸರದ ಸಂಗತಿ ಎಂದರು.

Anant S. Karkal
ವೀಕ್ಷಣೆ 236

ಜನಪ್ರಿಯ ಸುದ್ದಿಗಳು

ಕಚೇರಿ ವಿಳಾಸ

Gadag - 582101

ಫೋನ್ ನಂ.

+91 9448302002

ಇಮೇಲ್ ಐಡಿ

asknewskannada@gmail.com

ಸೋಶಿಯಲ್ ಮೀಡಿಯಾ ಲಿಂಕ್ಸ್

© ASK News Kannada. All Rights Reserved. Designed by AGScurate IT Solutions LLP