ask-banner
ad-banner
ರಾಜ್ಯ 2025-11-22

ಶೇರ್ ಮಾಡಿ  

*ಸಿಎಂ ಗದ್ದುಗೆ ಗುದ್ದಾಟದ ಮಧ್ಯೆ ಆಶ್ಚರ್ಯ ಮೂಡಿಸಿದ ಹಿರಿಯ ಸಚಿವ ಎಚ್ಕೆ ಪಾಟೀಲರ 3 ಜಿಲ್ಲೆಗಳ 3 ದಿನಗಳ ಪ್ರವಾಸ...* *ದಿನಾಂಕ 22 ರಿಂದ 24ರವರೆಗೆ ಗದಗ ಜಿಲ್ಲಾ ಉಸ್ತುವಾರಿ ಸಚಿವರ ಪ್ರವಾಸ..ಎಲ್ಲೆಲ್ಲಿ ಏನೇನು ಕಾರ್ಯಕ್ರಮ..*

ಗದಗ, ನ.21: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಸಿಎಂ ಸಿದ್ರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ ಮಧ್ಯೆ ಸಿಎಂ ಕುರ್ಚಿಗಾಗಿ ಬಣ ಬಡೆದಾಟ ತಾರಕಕ್ಕೇರಿರುವ ಸಂದರ್ಭದಲ್ಲಿ ತಮಗೂ ಇದಕ್ಕು ಯಾವುದೇ ಸಂಬಂಧ ಇಲ್ಲ ಎನ್ನುವಂತೆ ಕಾಂಗ್ರೆಸ್ಸಿನ ಪ್ರಭಾವಿ ನಾಯಕರು, ರಾಜ್ಯದ ಕಾನೂನು ಮತ್ತು ಸಂಸದೀಯ ವ್ಯವಹಾರ, ಪ್ರವಾಸೋದ್ಯಮ ಇಲಾಖೆ, ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್ಕೆ ಪಾಟೀಲರು ಶನಿವಾರದಿಂದ ಸೋಮವಾರದವರೆಗೆ ಬಾಗಲಕೋಟೆ, ಗದಗ, ಬೆಳಗಾವಿ( ಕಿತ್ತೂರ) ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡಿದ್ದು ಹುಬ್ಬೇರಿಸುವಂತೆ ಮಾಡಿದೆ. ರಾಜ್ಯ ಕಾಂಗ್ರೆಸ್ ರಾಜಕೀಯದಲ್ಲಿ ಕುರ್ಚಿ ಕಚ್ಚಾಟ ಜೋರಾಗಿರುವ ಸಮಯದಲ್ಲಿ ದಿನಾಂಕ 22-11-2025 ರಂದು ಶನಿವಾರ ಸಂಜೆ 6-30ಕ್ಕೆ ಬೆಂಗಳೂರು- ವಿಮಾನ (Indigo 6E 7162) ಮೂಲಕ ಪ್ರಯಾಣ ಬೆಳೆಸಿದ್ದು ಸಂಜೆ 7-30ಕ್ಕೆ ಹುಬ್ಬಳ್ಳಿಗೆ ಆಗಮಿಸಲಿದ್ದಾರೆ. ಹುಬ್ಬಳ್ಳಿ ಬಂದ ನಂತರ ರಸ್ತೆ ಮೂಲಕ ಬಾಗಲಕೋಟೆಗೆ ತೆರಳಿ ಶಾಸಕ ಪಿ.ಹೆಚ್.ಪೂಜಾರ ಅವರ ರವ ಪುತ್ರನ ಮದುವೆಯ ಆರತಕ್ಷತೆ ಸಮಾರಂಭದಲ್ಲಿ ಭಾಗವಹಿಸಿದ ನಂತರ ಬಾಗಲಕೋಟೆ- ರಸ್ತೆ ಮೂಲಕ ಗದಗಕ್ಕೆ ಆಗಮಿಸಿ ವಾಸ್ತವ್ಯ ಮಾಡುವರು. ದಿನಾಂಕ 22-11-2025ರಂದು ರವಿವಾರ ಬೆಳಿಗ್ಗೆ 10 ಗಂಟೆಗೆ ಗದಗ ಕೋ ಆಪ್ ಇಂಡಸ್ಟ್ರಿಯಲ್ ಎಸ್ಟೇಟದಲ್ಲಿ ಏರ್ಪಡಿಸಿರುವ ಹೊಸ ಹೈಟೆನ್ ರೈಲ್ ಪಾಸ್ಮನರ್ಸ್ ಪ್ರೈವೇಟ್ ಲಿಮಿಟೆಡ್ ಘಟಕ-2 ಮತ್ತು ಘಟಕ -3ರ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುವರು. ನಂತರ 10-30ಕ್ಕೆ ಗದಗದಿಂದ ರಸ್ತೆ ಮೂಲಕ ಗಜೇಂದ್ರಗಡಕ್ಕೆ ತೆರಳಿ ಲಕ್ಷ್ಮೀ ಅರ್ಬನ್ ಬ್ಯಾಂಕಿನ ನೂತನ ಕಾರ್ಯಾಲಯದ 1ನೇ ಮಹಡಿಯ ಉದ್ಘಾಟನೆ ಹಾಗೂ ನವೀಕೃತ ಕಛೇರಿ ಉದ್ಘಾಟನೆ ಮತ್ತು ಬ್ಯಾಂಕಿನ ಹಿರಿಯ ಸದಸ್ಯರಿಗೆ ಸನ್ಮಾನ -ಸಮಾರಂಭದಲ್ಲಿ ಪಾಲ್ಗೋಳ್ಳುವರು. 1 ಗಂಟೆಗೆ ಗಜೇಂದ್ರಗಡದಿಂದ ರಸ್ತೆ ಮೂಲಕ ಹೊರಟು 2 ಗಂಟೆಗೆ ಗದಗ ಜಿಲ್ಲಾ ಕೇಂದ್ರಕ್ಕೆ ಆಗಮಿಸಲಿದ್ದು ಉಳಿದ ಸಮಯವನ್ನು ಕಾಯ್ದಿರಿಸಿದ್ದು ರವಿವಾರವೂ ಸಹ ಗದಗದಲ್ಲಿ ವಾಸ್ತವ್ಯ ಮಾಡಲಿದ್ದಾರೆ. ದಿನಾಂಕ 24-11-2025 ಸೋಮವಾರದಂದು ಬೆಳಿಗ್ಗೆ 8 ಗಂಟೆಗೆ ಗದಗ ರಸ್ತೆ ಮೂಲಕ ಬೆಳಗಾವಿ ಜಿಲ್ಲೆಯ ಕಿತ್ತೂರಿಗೆ ಪ್ರಯಾಣ ಬೆಳೆಸಲಿದ್ದಾರಲ್ಲದೆ ಕಿತ್ತೂರದಲ್ಲಿರುವ ಅವರ ಆಪ್ತ ಕಾರ್ಯದರ್ಶಿ ಶ್ರೀಕಾಂತ ಅಸುಂಡಿ ರವರ ಮನೆಗೆ ಭೇಟಿ ನೀಡಲಿದ್ದಾರೆ. ನಂತರ 11 ಗಂಟೆಗೆ ಕಿತ್ತೂರದಿಂದ ರಸ್ತೆ ಮೂಲಕ ಗದಗ ಜಿಲ್ಲಾ ಕೇಂದ್ರಕ್ಕೆ ಆಗಮಿಸಲಿದ್ದಾರೆ. ನಂತರದ ಆ ದಿನ ಕಾರ್ಯಕ್ರಮಗಳನ್ನು ಪ್ರತ್ಯೇಕವಾಗಿ ಹೊರಡಿಲಾಗುವ ಬಗೆಗೆ ಸಚಿವರ ಕಾರ್ಯಕ್ರಮ ಪಟ್ಟಿಯಲ್ಲಿ ತಿಳಿಸಲಾಗಿದೆ. ಒಟ್ಟಾರೆ ಆಡಳಿತರೂಢ ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಗದ್ದುಗೆಗಾಗಿ ಎದ್ದಿರುವ ಗುದ್ದಾಟದ ನಡುವೆ ಹಿರಿಯ ಸಚಿವ ಎಚ್ಕೆ ಪಾಟೀಲರ 3 ದಿನಗಳ 3 ಜಿಲ್ಲೆಗಳ ಪ್ರವಾಸ ಕುತೂಹಲಕ್ಕೆ ಕಾರಣವಾಗಿದೆ.

Anant S. Karkal
ವೀಕ್ಷಣೆ 6484

ಜನಪ್ರಿಯ ಸುದ್ದಿಗಳು

ಕಚೇರಿ ವಿಳಾಸ

Gadag - 582101

ಫೋನ್ ನಂ.

+91 9448302002

ಇಮೇಲ್ ಐಡಿ

asknewskannada@gmail.com

ಸೋಶಿಯಲ್ ಮೀಡಿಯಾ ಲಿಂಕ್ಸ್

© ASK News Kannada. All Rights Reserved. Designed by AGScurate IT Solutions LLP