ಗದಗ, ಫೆ. 01 : ಕೇಂದ್ರದ ಮಿತ್ತ ಸಚಿವರಾದ ಶ್ರೀಮತಿ ನಿರ್ಮಲ ಸೀತಾರಾಮನ್ ಮಂಡಿಸಿರುವ ಬಜೆಟ್ ಆರ್ಥಿಕ ಅಭಿವೃದ್ಧಿಗೆ ವೇಗ ನೀಡಲಿದೆ ಎಂದು ಜೆಡಿಎಸ್ ಪಕ್ಷದ ರಾಜ್ಯ ವಕ್ತಾರ ವೆಂಕನಗೌಡ ಆರ್ ಗೋವಿಂದಗೌಡ್ರ ಹೇಳಿದರು. ಅವರು ಬಜೆಟ್ ಬಗೆಗೆ ಹರ್ಷ ವ್ಯಕ್ತಪಡಿಸಿ ದೇಶದ ಆರ್ಥಿಕತೆಯು ಮುನ್ನುಗ್ಗುತ್ತಿದ್ದು ವಿಶ್ವದ 3ನೇಯ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿ ಭಾರತ ಈಗಾಗಲೆ ಹೊರಹೊಮ್ಮಿದ್ದು ತ್ವರಿತವಾಗಿ 2ನೇ ಸ್ಥಾನಕ್ಕೆ ಬರುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟರು. ಉದ್ಯೋಗಕ್ಕೆ ಹಾಗೂ ಸ್ವಉದ್ಯೋಗಕ್ಕೆ ಒತ್ತು ನೀಡಿರುವ ಬಜೆಟ್ ಯುವಕರಿಗೆ ಆಶಾದಾಯಕವಾಗಿದೆ ಎಂದು ಹೇಳಿರಲ್ಲದೆ ರೈತರ ಉತ್ಪನ್ನಗಳಿಗೆ ಹೊಸ ಮಾರುಕಟ್ಟೆಗಳನ್ನು ಸೃಷ್ಟಿಸಿರುವ ಈ ಬಜೆಟ್ ರೈತರಿಗೂ ವರವಾಗಿದೆ ಎಂದಿದ್ದಾರೆ. ಸಾರಿಗೆ, ರೈಲ್ವೆ ಹಾಗೂ ವಾಯು ಸಾರಿಗೆ ಹೆಚ್ಚಿನ ಅನುದಾನ ಮೀಸಲಿಡುವ ಮೂಲಕ ದೇಶದ ಎಲ್ಲ ಮೂಲೆಗಳಿಗೂ ಸಂಪರ್ಕವನ್ನು ಸರಳಿಕರಣ ಗೊಳಿಸಿದಂತಾಗಿದೆ ಎಂದು ಜೆಡಿಎಸ್ ಪಕ್ಷದ ರಾಜ್ಯ ವಕ್ತಾರ ವೆಂಕನಗೌಡ ಆರ್ ಗೋವಿಂದಗೌಡ್ರ ಬಜೆಟ್ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ದಾಖಲೆಯ ಬಜೆಟ್ ಮಂಡಿಸಿರುವ ಮಿತ್ತ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಆರ್ಥಿಕತೆಗೆ, ಅಭಿವೃದ್ಧಿಗೆ ವೇಗ ನೀಡುವ ಬಜೆಟ್ ಇದಾಗಿದೆ ಎಂದು ವೆಂಕನಗೌಡ ಆರ್. ಗೋವಿಂದಗೌಡ್ರ ಬಣ್ಣಿಸಿದ್ದಾರೆ
© ASK News Kannada. All Rights Reserved. Designed by AGScurate IT Solutions LLP