ask-banner
ad-banner
ರಾಜ್ಯ 2026-02-23

ಶೇರ್ ಮಾಡಿ  

*ಅಂತು ಇಂತು ಗದಗ ಬೆಟಗೇರಿ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಚುನಾವಣೆಗೆ ಮುಹೂರ್ತ ಫಿಕ್ಷ...!* *ಮಾರ್ಚ್ 3 ರಂದು ಚುನಾವಣೆ..!*

ಗದಗ,ಫೆ.23 : ಕಳೆದ 12 ತಿಂಗಳಿಂದ ಆಡಳಿತಾಧಿಕಾರಿಗಳ ಆಡಳಿತದಲ್ಲಿ ಸೊರಗಿ ಹೋಗಿದ್ದ ಗದಗ ಬೆಟಗೇರಿ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಗೆ ಚುನಾವಣಾ ಮುಹೂರ್ತ ಫಿಕ್ಸ ಆಗಿದ್ದು ಹುಬ್ಬೇರಿಸುವಂತೆ ಮಾಡಿದೆ. ಬಿಜೆಪಿ 3 ಜನ ಸದಸ್ಯರ ಸದಸ್ಯತ್ವ ರದ್ದಾದ ಘಟನೆಯಿಂದಾಗಿ ನ್ಯಾಯಾಲಯದಲ್ಲಿ ನಡೆಯತ್ತಿದ್ದ ತಗಾದೆಗೆ ಒಂದು ಹಂತದ ನಿರ್ಣಯ ಸಿಕ್ಕಿದ್ದರಿಂದ ನಗರಸಭೆಯ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳಿಗೆ ಮಾಚ್೯ -3-2026ರಂದು ಚುನಾವಣೆ ನಡೆಸುವುದಾಗಿ ಚುನಾವಣಾಧಿರಿಗಳು ಹಾಗೂ ಉಪವಿಭಾಗಾಧಿಕಾರಿಗಳು ಘೋಷಿಸಿ ಸಂಬಂಧಿಸಿದ ನಗರಸಭೆಯ ಸದಸ್ಯರಿಗೆ ನೋಟೀಸ್ ಜಾರಿ ಮಾಡಿದ್ದು ಬಹುದೊಡ್ಡ ಚರ್ಚೆಗೆ ಗ್ರಾಸವಾಗಿದೆ. ದಿನಾಂಕ 21-2-2026ರಂದು ನಗರಸಭೆಯ ಅಧ್ಯಕ್ಷ- ಉಪಾಧ್ಯಕ್ಷರ ಸ್ಥಾನಕ್ಕೆ 10ನೇ ಅವಧಿಗೆ ಚುನಾವಣೆ ಪ್ರಕಟಣೆ ಹೊರಡಿಸಿದ್ದಾರೆ. ಈ ಚುನಾವಣಾ ಪ್ರಕಟಣೆಯಂತೆ ಸರ್ಕಾರದ ಪ್ರಕಟಣೆ ಸಂಖ್ಯೆ: ಯುಡಿಡಿ/10/ಎಮ್ಎಲ್‌ಆರ್/2024(1) ದಿನಾಂಕ 05-08-2024 ರನ್ನು ಆಧಾರಿಸಿ ಹಾಗೂ ಕರ್ನಾಟಕ ಮುನ್ಸಿಪಾಲಿಟಿ ಕಾಯ್ದೆ 1964 ಕಲಂ 42(2) ರ ಪ್ರಕಾರ ಹಾಗೂ ಜಿಲ್ಲಾಧಿಕಾರಿಗಳು, ಗದಗ ಇವರ ನಿರ್ದೇಶನ ಕ್ರಮಾಂಕ: ಎಮ್ ಯುಎನ್/ಚುನಾವಣೆ/ವಹಿ/03/2024-25 ದಿನಾಂಕ: 21-02-2026 ರನ್ವಯ ಗದಗ-ಬೆಟಗೇರಿ ನಗರಸಭೆ ಕಾರ್ಯಾಲಯದಲ್ಲಿ ದಿನಾಂಕ : 03-03-2026 ರಂದು ಮಧ್ಯಾಹ್ನ 02-00 ಗಂಟೆಗೆ ಗದಗ-ಬೆಟಗೇರಿ ನಗರಸಭೆಯ ಅಧ್ಯಕ್ಷ/ಉಪಾಧ್ಯಕ್ಷರ ಸ್ಥಾನಕ್ಕೆ ಚುನಾವಣೆ ನಡೆಸಲು ಸಭೆಯನ್ನು ಕರೆಯಲಾಗಿದ್ದು, ಈ ಸಭೆಗೆ ಹಾಜರಿರಲು ತಿಳಿಸಿದ್ದಾರೆ. ಅಧ್ಯಕ್ಷ/ಉಪಾಧ್ಯಕ್ಷರ ಸ್ಥಾನಕ್ಕೆ ಸ್ಪರ್ಧಿಸಲು ನಾಮ ಪತ್ರಗಳನ್ನು ದಿನಾಂಕ 03-03-2026 ರಂದು ಬೆಳಿಗ್ಗೆ 10-00 ರಿಂದ ಮಧ್ಯಾಹ್ನ 12-00 ಗಂಟೆಯೊಳಗಾಗಿ ನಗರಸಭೆ ಕಾರ್ಯಾಲಯದ ಸಭಾ ಭವನದಲ್ಲಿ ಅಭ್ಯರ್ಥಿ ಅಥವಾ ಅವರ ಸೂಚಕರು ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಬಹುದು. ನಿಯಮ 4ರ ಪ್ರಕಾರ ಒಬ್ಬ ಸದಸ್ಯರು ಒಬ್ಬ ಅಭ್ಯರ್ಥಿಯನ್ನು ಮಾತ್ರ ಸೂಚಿಸಬೇಕು. ದಿನಾಂಕ: 03-03-2026 ರಂದು ಅಂದರೆ ಚುನಾವಣಾ ದಿನದಂದು ಮಧ್ಯಾಹ್ನ 02-00 ಗಂಟೆಗೆ ಚುನಾವಣಾ ಸಭೆಯಲ್ಲಿ ನಾಮ ಪತ್ರಗಳ ಪರಿಶೀಲನೆಯನ್ನು ನಡೆಸಲಾಗುತ್ತಿದೆ. ನಾಮ ಪತ್ರಗಳ ಪರಿಶೀಲನೆ ಮುಗಿದ ಕೂಡಲೆ ಉಮೇದುವಾರಿಕೆಯನ್ನು ಹಿಂದಕ್ಕೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ. 03-03-2026 ರಂದು ಮಧ್ಯಾಹ್ನ 02-00 ಗಂಟೆಗೆ ನಡೆಯವ ಸಭೆಯಲ್ಲಿ ಮತದಾನದ ಅವಶ್ಯವಿದ್ದಲ್ಲಿ ಹಾಜರಿದ್ದ ಸದಸ್ಯರು ಸಭೆಯಲ್ಲಿ ಕೈ ಎತ್ತುವ ಮೂಲಕ ಮತದಾನ ಮಾಡಬೇಕೆಂದು ತಿಳಿಸಲಾಗಿದೆ. ಚುನಾವಣಾ ಸಭೆಯು ಮಧ್ಯಾಹ್ನ 02-00 ಗಂಟೆಗೆ ಪ್ರಾರಂಭವಾಗುವುದರಿಂದ 15 ನಿಮಿಷ ಮುಂಚಿತವಾಗಿ ಸದಸ್ಯರು ಚುನಾವಣೆಯಲ್ಲಿ ಹಾಜರಿರಲು ಚುನಾವಣಾಧಿಕಾರಿಗಳು ಹಾಗೂ ಉಪವಿಭಾಗಾಧಿಕಾರಿಗಳು ಪ್ರಕಟಣಾ ನೋಟೀಸಲ್ಲಿ ತಿಳಿಸಿದ್ದಾರೆ. ಬಹುತೇಕ ಸದಸ್ಯತ್ವ ರದ್ದಾದ ನಗರಸಭೆಯ ಬಿಜೆಪಿ ಸದಸ್ಯರಾದ ಉಷಾ ದಾಸರ, ಅನೀಲ ಅಬ್ಬಿಗೇರಿ, ಗೂಳಪ್ಪ ಮುಶಿಗೇರಿಯವರು ಮತ್ತೆ ನ್ಯಾಯಾಲಯದ ಕಟ್ಟೆ ಏರುವ ಸಾಧ್ಯತೆ ಇರುವುದರಿಂದ ಚುನಾವಣೆ ನಡೆಯುತ್ತಾ...? ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. *ಕಾಂಗ್ರೇಸ ಆಡಳಿತ..* ನಗರಸಭೆಯ ಒಟ್ಟು 35 ಸದಸ್ಯರ ಪೈಕಿ 18 ಬಿಜೆಪಿ 17 ಕಾಂಗ್ರೆಸ್ ಸದಸ್ಯರಿದ್ದರು. ಮೊದಲ 30 ತಿಂಗಳ ಆಡಳತವನ್ನು ಬಿಜೆಪಿ ನಡೆಸಿತ್ತು. ಆದರೆ ನಗರಸಭೆಯ ಬಿಜೆಪಿಯ 18 ಸದಸ್ಯರ ಪೈಕಿ ಬಿಜೆಪಿಯ 3 ಸದಸ್ಯರ ಸದಸ್ಯತ್ವ ರದ್ದಾಗಿದೆ. ಹೀಗಾಗಿ ಕಾಂಗ್ರೆಸ್ ಸದಸ್ಯರ ಸಂಖ್ಯಾಬಲ ಬಿಜೆಪಿಗಿಂತ ಹೆಚ್ಚಾಗಿದೆ. ಒಂದು ಚುನಾವಣೆ ನಡೆದರೆ ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬರಲಿದೆ. ಈಗಾಗಲೆ 2ನೇ ಅವಧಿಗೆ 28-2-2025 ರಂದು ಚುನಾವಣೆ ನಡೆದು ಕಾಂಗ್ರೆಸ ಪಕ್ಷದ ಕೃಷ್ಣಾ ಪರಾಪೂರ ಅಧ್ಯಕ್ಷರಾಗಿ, ಕಾಂಗ್ರೆಸ್ ಪಕ್ಷದ ಶಕುಂತಲಾ ಅಕ್ಕಿ ಉಪಾಧ್ಯಕ್ಷರಾಗಿ ಆಯ್ಕೆ ಆಗಿದ್ದರಾದರು ಈ ಚುನಾವಣೆಯನ್ನು ತಡೆ ಹಿಡಿಯಲಾಗಿತ್ತು. ಮತ್ತೆ ಈಗ 3-3-2026 ರಂದು ಚುನಾವಣೆ ನಡೆದರೆ ಕಾಂಗ್ರೆಸ್ಸಿನ ಕೃಷ್ಣಾ ಪರಾಪೂರ ಅಧ್ಯಕ್ಷರಾಗಿ ಶಕುಂತಲಾ ಅಕ್ಕಿ ಉಪಾಧ್ಯಕ್ಷರಾಗಿ ಆಯ್ಕೆ ಆಗುವ ಸಾಧ್ಯತೆ ಇದೆ ಆದರು ಕಾಂಗ್ರೆಸ್ ಪಕ್ಷದ ನಾಯಕರು ಏನಾದರು ಮನಸ್ಸು ಬದಲಾಯಿಸದರೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನ ಯಾರಿಗೆ ಒಲೆದು ಬರಲಿದೆ ಎಂಬುದು ಕುತೂಹಲದ ಪ್ರಶ್ನೆ ಎದುರಾಗಿದೆ.

Anant S. Karkal
ವೀಕ್ಷಣೆ 636

ಜನಪ್ರಿಯ ಸುದ್ದಿಗಳು

ಕಚೇರಿ ವಿಳಾಸ

Gadag - 582101

ಫೋನ್ ನಂ.

+91 9448302002

ಇಮೇಲ್ ಐಡಿ

asknewskannada@gmail.com

ಸೋಶಿಯಲ್ ಮೀಡಿಯಾ ಲಿಂಕ್ಸ್

© ASK News Kannada. All Rights Reserved. Designed by AGScurate IT Solutions LLP