ask-banner
ad-banner
ರಾಜ್ಯ 2026-03-21

ಶೇರ್ ಮಾಡಿ  

*ಕ್ರಾಂತಿ ಸೇನಾ ಸಂಘಟನೆಯಿಂದ ಕೆರಳ ಸ್ಟೋರಿ ಪಾರ್ಟ 2 ಸಿನಿಮಾ ಪ್ರದರ್ಶನ.. 600ಕ್ಕೂ ಹಿಂದು ಯುವತಿಯರಿಂದ ವೀಕ್ಷಣೆ.* *ಲವ್ ಜಿಹಾದ್ ಕಡಿವಾಣಕ್ಕೆ ಜಾಗೃತಿ ಅಗತ್ಯ...ಬಾಬು ಬಾಕಳೆ..*

ಗದಗ,ಮಾ.21 : ಲವ್ ಜಿಹಾದ್ ಸಂಬಂಧಪಟ್ಟ ನೈಜ ಘಟನೆಯ ಕೇರಳ ಸ್ಟೋರಿ ಪಾರ್ಟ 2 ಸಿನಿಮಾವನ್ನು ಪ್ರದರ್ಶಿಸಿದ್ದು ಸುಮಾರು 600 ಕ್ಕೂ ಹೆಚ್ಚು ಹಿಂದೂ ಯುವತಿಯರು ಸಿನಿಮಾ ವೀಕ್ಷಿಸಿದ ಸಂದರ್ಭದಲ್ಲಿ ಲವ್ ಜಿಹಾದಗೆ ಕಡಿವಾಣ ಹಾಕಬೇಕೆಂದು ಪಣತೊಡಲಾಯಿತೆಂದು ಕ್ರಾಂತಿ ಸೇನಾ ಗದಗ್ ಜಿಲ್ಲಾ ಸಂಘಟನೆ ಅಧ್ಯಕ್ಷ ಬಾಬು ಬಾಕಳೆ ತಿಳಿಸಿದ್ದಾರಲ್ಲದೆ ಲವ್ ಜಿಹಾದಗೆ ಬಲಿಯಾಗದಂತೆ ಹಿಂದೂ ಯುವತಿಯರಿಗೆ ಪ್ರತಿಜ್ಞೆ ಮಾಡಸಿದ್ದಾಗಿ ತಿಳಿಸಿದ್ದಾರೆ. ಹಿಂದೂ ಸಮಾಜದ ಜಾಗೃತಿಗಾಗಿ ನೈಜ ಘಟನೆಯ ಕೇರಳ ಸ್ಟೋರಿ ಪಾರ್ಟ 2 ಸಿನಿಮಾವನ್ನು ಉಚಿತವಾಗಿ ಕ್ರಾಂತಿ ಸೇನಾ ಗದಗ್ ಜಿಲ್ಲಾ ಸಂಘಟನೆ ಹಾಗೂ ಶ್ರೀ ರಾಜರಾಜೇಶ್ವರಿ ಮಹಿಳಾ ಮಂಡಲದ ನೇತೃತ್ವದಲ್ಲಿ ಪ್ರದರ್ಶನ ಮಾಡಲಾದ ನಂತರ ಸಂಘಟಿಕ ಬಾಬು ಬಾಕಳೆ ಮಾತನಾಡಿ ಸುಮಾರು 650 ಕ್ಕೂ ಹೆಚ್ಚು ಹಿಂದೂ ಯುವತಿಯರು ವೀಕ್ಷಣೆ ಮಾಡಿದರಲ್ಲದೆ ಲವ್ ಜಿಹಾದ್ ವಿರುದ್ಧ ಮತ್ತಷ್ಟು ಜಾಗೃತಿ ಮೂಡಿಸಲು ಸಹಕಾರ ನೀಡುವುದಾಗಿ ಪ್ರಮಾಣ ವಚನ ಮಾಡಿದ್ದು ಲವ್ ಜಿಹಾದ್ ಹೋರಾಟಕ್ಕೆ ಮತ್ತಷ್ಟು ಶಕ್ತಿ ಬಂದಂತಾಗಿದೆ ಎಂದಿದ್ದಾರೆ. ಹಿಂದೂ ಸಮಾಜದ ಯುವತಿಯರ ಮೇಲೆ ಅನ್ಯ ಕೋಮಿನ ಯುವಕರು ಲವ್ ಜಿಹಾದ್ ಹೆಸರಲ್ಲಿ ಮತಾಂತರ ಮಾಡುವಂತಹ ಹಾಗೂ ಮೋಸದ ಬಲೆಗೆ ಬೀಳಿಸುವಂತಹ ಕೆಲಸವನ್ನು ಮಾಡುತ್ತಿದ್ದಾರೆ ಎಂಬುದು ಸಿನಿಮಾ ಸ್ಪಷ್ಟವಾಗಿ ತಿಳಿಸುತ್ತಿರುವ ಕಾರಣ ಪ್ರತಿಯೊಬ್ಬ ಹಿಂದುಗಳು ನೈಜ ಘಟನೆಯ ಕೇರಳ ಸ್ಟೋರಿ ಪಾರ್ಟ 2 ನೋಡಲೇಬೇಕೆಂದು ಕರೆ ನೀಡಿದರು. ರಾಜ್ಯದ ಬಹುತೇಕ ಯುವತಿಯರು ಲವ್ ಜಿಹಾದಗೆ ಬಲಿಯಾಗುತ್ತಿರುವುದಕ್ಕೆ ಕಡಿವಾಣ ಹಾಕಲು ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲಿ ಹಾಗೂ ಶಾಲಾ ಕಾಲೇಜಿಗಳಲ್ಲಿ ಲವ್ ಜಿಹಾದ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಗಳು ನಡೆಯಬೇಕೆಂದು ಬಾಬು ಬಾಕಳೆ ಹೇಳಿದರು. ಈ ಸಂದರ್ಭದಲ್ಲಿ ಕ್ರಾಂತಿ ಸೇನಾ ಮಹಿಳಾ ಸಂಘಟನೆ ಅಧ್ಯಕ್ಷೆ ಶ್ರೀಮತಿ ರಾಣಿ ಚಂದಾವರಿ ಹಾಗೂ ಶ್ರೀಮತಿ ರೇಣುಕಾ ಕಬಾಡಿ ಮಾತನಾಡಿ ಯುವತಿಯರು ಮಹಿಳಾ ಹಿಂದೂ ಸಂಘಟನೆಯಲ್ಲಿ ತೊಡಗಿಸಿಕೊಂಡು ಹಿಂದೂ ಸಮಾಜ ಸೇವೆ ಮಾಡಿದಾಗ ಮಾತ್ರ ಲವ್ ಜಿಹಾದ್ ಕುತಂತ್ರಕ್ಕೆ ನಾವು ಕಡಿವಾಣ ಹಾಕಬಹುದು ಎಂದರು. ಶಾಲಾ ಕಾಲೇಜಿನಲ್ಲಿ ಹಿಂದೂ ಸಮಾಜ ಯುವತಿಯರ ಮೇಲೆ ಲವ್ ಜಿಹಾದ್ ಪ್ರಕರಣಗಳು ನಡೆಯುತ್ತಿದ್ದರೆ ಅದನ್ನು ನೋಡಿ ಸುಮ್ಮನೆ ಕೂರದೆ ಅವರ ಪೋಷಕರಿಗೆ ಸಮಾಜದ ಹಿರಿಯರಿಗೆ ಹಾಗೂ ಹಿಂದೂ ಸಂಘಟನೆಯ ಮುಖಂಡರಿಗೆ, ಕಾರ್ಯಕರ್ತರ ಗಮನಕ್ಕೆ ತರುವಂತ ದೈರ್ಯ ತೋರಿದಾಗ ಲವ್ ಜಿಹಾದ್ ತಡೆಗಟ್ಟಲು ಸಾಧ್ಯವೆಂದರು. ಈ ಸಂದರ್ಭದಲ್ಲಿ ಕ್ರಾಂತಿ ಸೇನಾ ಗದಗ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಹಬೀಬ ಹಾಗೂ ಕ್ರಾಂತಿ ಸೇನಾ ಉಪಾಧ್ಯಕ್ಷ ಭೀಮಾ ಕಾಟಿಗರ್ ಎಲ್ಲರಿಗೂ ಪ್ರಮಾಣ ವಚನ ಬೋಧಿಸಿದರು. ಕ್ರಾಂತಿ ಸೇನಾ ತಾಲೂಕು ಅಧ್ಯಕ್ಷ ಭರತ್ ಮಾರಿಯಪ್ಪನವರ್, ಶಿವು ಕುಂಬಾರ್, ಕಿರಣ ಪಟ್ಟಣಶೆಟ್ಟಿ, ಪವನ್ ಪುರದ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Anant S. Karkal
ವೀಕ್ಷಣೆ 2479

ಜನಪ್ರಿಯ ಸುದ್ದಿಗಳು

ಕಚೇರಿ ವಿಳಾಸ

Gadag - 582101

ಫೋನ್ ನಂ.

+91 9448302002

ಇಮೇಲ್ ಐಡಿ

asknewskannada@gmail.com

ಸೋಶಿಯಲ್ ಮೀಡಿಯಾ ಲಿಂಕ್ಸ್

© ASK News Kannada. All Rights Reserved. Designed by AGScurate IT Solutions LLP