ಬೆಟಗೇರಿ : ಪ್ರತಿ ವರ್ಷದಂತೆ ಈ ವರ್ಷವೂ ಇಲ್ಲಿಯ ಎಸ್.ಎಸ್.ಕೆ. ಪಂಚ ಟ್ರಸ್ಟ್ ಕಮೀಟಿ, ತರುಣ ಸಂಘ ಹಾಗೂ ಜಗದಂಬಾ ಮಹಿಳಾ ಮಂಡಳದ ಸಂಯುಕ್ತಾಶ್ರಯದಲ್ಲಿ ವೈಶಾಖ ಶುದ್ಧ ದ್ವಾದಶಿ ದಿನ ಬೆಟಗೇರಿಯ ಅಂಬಾಭವಾನಿ ದೇವಿಯ 111 ನೇ ಪ್ರಾಣ ಪ್ರತಿಷ್ಠಾಪನಾ ದಿನದ ಆಚರಣೆಯ ಅಂಗವಾಗಿ ಎಸ್.ಎಸ್.ಕೆ. ಸಮಾಜ ಬಾಂಧವರ ಸಾಮೂಹಿಕ ವಿವಾಹ ಹಾಗೂ ಉಪನಯನ ಕಾರ್ಯಕ್ರಮವನ್ನು ಇದೇ ಏಪ್ರಿಲ್ 28-2026ರಂದು ಬೆಟಗೇರಿಯ ಶ್ರೀ ಅಂಬಾಭವಾನಿ ದೇವಸ್ಥಾನದಲ್ಲಿ ಜರುಗಲಿದೆ. ಈ ಪ್ರಯುಕ್ತ ಏಪ್ರಿಲ್ 26ರಿಂದ 28ರವರೆಗೆ ಶ್ರೀ ದೇವಿಯ ಪ್ರತಿಷ್ಠಾಪನಾ ಅಂಗವಾಗಿ ಶ್ರೀದೇವಿಯ ಅಲಂಕಾರ ಪೂಜಾ ಕಾರ್ಯಕ್ರಮ, ಭಜನಾ ಕಾರ್ಯಕ್ರಮ, ಪ್ರಸಾದ ವಿತರಣೆ ನಡೆಯಲಿದೆ. ಈ ಪ್ರಯುಕ್ತ ಸಮಾಜದ ಬಡ ಮತ್ತು ಮಧ್ಯಮ ಕುಟುಂಬದ ಹೆಣ್ಣುಮಕ್ಕಳ ಕಂಕಣ ಭಾಗ್ಯ ಮತ್ತು ಉಪನಯನ ಕಲ್ಯಾಣ ಕಾರ್ಯಕ್ರಮವನ್ನು ಏಪ್ರಿಲ್ 28-2026ರಂದು ಸಾಮೂಹಿಕ ವಿವಾಹ ಹಾಗೂ ಉಪನಯನ ನಡೆಯಲಿವೆ. ಕಾರಣ ಉಪನಯನ ಮತ್ತು ಸಾಮೂಹಿಕ ವಿವಾಹದಲ್ಲಿ ಭಾಗವಹಿಸಲು ಆಸಕ್ತರಾದವರು ದಿನಾಂಕ 26-3-2026 ರಿಂದ 25-4-2026ರವರೆಗೆ ಒಂದು ತಿಂಗಳ ಕಾಲ ಸಾಮೂಹಿಕ ಉಪನಯನ ಹಾಗೂ ವಿವಾಹದ ನೊಂದಣಿ ನಡೆಯಲಿದೆ. ಭಾಗವಹಿಸಲುಬ ಇಚ್ಛಿಸುವವರು ಈ ಕೆಳಗಿನ ಮೊಬೈಲ್ ಸಂಖ್ಯೆಗಳಾದ 9448309622, 9448629772, 9880338064, 9448211933 ನಂಬರಿಗೆ ಸಂಪರ್ಕಿಸಲು ಟ್ರಸ್ಟ್ ಸಮಿತಿ ತಿಳಿಸಿದೆ.
© ASK News Kannada. All Rights Reserved. Designed by AGScurate IT Solutions LLP