ask-banner
ad-banner
ರಾಜ್ಯ 2026-04-05

ಶೇರ್ ಮಾಡಿ  

*ಗದಗ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಶರಣು ಗೋಗೇರಿಗೆ ಕೋಕ್...* *ನೂತನ ಅಧಿಕಾರಿಯಾಗಿ ಓಂಪ್ರಕಾಶ್ ಜಿ. ನೇಮಿಸಿ ಸರ್ಕಾರ ಆದೇಶ...*

ಗದಗ,ಎ.5 : ಗದಗ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಶರಣು ಗೋಗೇರಿಗೆ ಕೋಕ್ ನೀಡಿ ಇಲಾಖೆಯ ಸಹಾಯಕ ನಿರ್ದೇಶಕರನ್ನಾಗಿ ಓಂಪ್ರಕಾಶ್ ಜಿ. ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಮಂಡ್ಯ ಜಿಲ್ಲೆಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಲ್ಲಿ ಸಹಾಯಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಓಂಪ್ರಕಾಶ ಅವರನ್ನು ಗದಗ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ವರ್ಗಾವಣೆಗೊಳಿಸಿ 01-04-2026ರಂದು ಸರಕಾರ ಆದೇಶ ಮಾಡಿದೆ. 2026 ಎಪ್ರಿಲ್ 1 ರಂದೆ ಗದಗ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾಗಿ ಅಧಿಕಾರಿ ಸ್ವೀಕರಿಸಬೇಕೆಂದು ಆದೇಶದಲ್ಲಿ ಸೂಚನೆ ನೀಡಲಾಗಿದೆ. ಗದಗ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ವರ್ಗಾವಣೆಗೊಂಡಿರುವ ಓಂಪ್ರಕಾಶ ಅವರನ್ಬು ಬಾರದಂತೆ ನೋಡಿಕೊಳ್ಳುವ ಷಡ್ಯಂತರ ನಡೆದಿದೆ ಎಂಬ ಚರ್ಚೆಗಳು ಅಧಿಕಾರಿಗಳಲ್ಲಿಯೇ ನಡೆದಿವೆ. ಗದಗ ಜಿಲ್ಲೆಯಲ್ಲಿ ಬಹುತೇಕ ನಾಲ್ಕೈದು ಅಧಿಕಾರಿಗಳು ನಾಲ್ಕೈದು ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಾ ಇರುವುದು ಆಡಳಿತ ವ್ಯವಸ್ಥೆಗೆ ದೊಡ್ಡ ಶಾಪ ಎಂಬಂತಾಗಿದೆ. ವಿಶೇಷ ಅಂದ್ರೆ ಶರಣು ಗೋಗೇರಿ ಮೂಲತ: ಶಿಕ್ಷಣ ಇಲಾಖೆಯವರು. ಶಿಕ್ಷಣ ಇಲಾಖೆಯವರನ್ನು ಬೇರೆ ಇಲಾಖೆಗೆ ಬಳಸಿಕೊಳ್ಳಬಾರದೆಂಬ ಆದೇಶ ಇದೆಯಂತೆ. ಆದಾಗ್ಯೂ ಶರಣು ಗೋಗೇರಿ ಲಕ್ಕುಂಡಿ ಪ್ರಾಧಿಕಾರದ ಆಯುಕ್ತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ, ಲಕ್ಕುಂಡಿ ಗ್ರಾಮ ಪಂಚಾಯತಿ ಆಡಳಿತಾಧಿಕಾರಿ ಮತ್ತು ಶಿಕ್ಷಣ ಇಲಾಖೆಯಲ್ಲಿ ಮಹತ್ವಪೂರ್ಣವಾದ ಹುದ್ದೆಯಲ್ಲಿ ಇರುವುದನ್ನು ನೋಡಿದರೆ ಇದೆಂತಹ ಆಡಳಿತ ವ್ಯವಸ್ಥೆ ಎನ್ನುವಂತಿದೆ. ಕೆಲವು ಅಧಿಕಾರಿಗಳಿಗೆ ಗದಗ ಜಿಲ್ಲೆಯ ಆಡಳಿತ ಅಂದ್ರೆ ಒಂದು ರೀತಿಯ ಹುಲ್ಲುಗಾವಲು ವ್ಯವಸ್ಥೆ ಇದ್ದಂತೆ. ಎಲ್ಲ ರೀತಿಯ ಸುಖ ಇಲ್ಲಿ ಇರುವುದರಿಂದ ಅಧಿಕಾರ ಬಿಟ್ಟು ಕೊಡಲು ಸಾಧ್ಯವೇ ಇಲ್ಲ. ವರ್ಗಾವಣೆಯಾಗಿ ಬಂದ ಅಧಿಕಾರಿಗಳಲ್ಲಿ ಭಯ ಹುಟ್ಟಿಸೊದು ಇಲ್ಲವೇ ಎಲ್ಲ ರೀತಿ ಆಮಿಷಗಳನ್ನೊಡ್ಡಿ ಬೇರೆ ಕಡೆ ಹೋಗುವಂತೆ, ಗದಗ ಜಿಲ್ಲೆಯ ಕಡೆ ಬರದಂತೆ ನೋಡಿಕೊಳ್ಳುವ ತಂತ್ರವೂ ಇದೆ. ಈಗ ಹಾಗೆ ನಡೆದಿದೆ ಅಂತೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ವರ್ಗಾವಣೆಯಾಗಿ ಬಂದಿರುವ ಓಂಪ್ರಕಾಶ ಅವರನ್ನು ಮರಳಿ ಓಡಿಸುವ ವ್ಯವಸ್ಥೆ ನಡೆದಿರುವ ಜೊತೆಗೆ ಜಿಲ್ಲಾ ಉಸ್ತುವಾರಿ ಸಚಿವರ ಹಿಂದೆ ಮುಂದೆ ತಿರುಗುತ್ತಾ ಅವರ ದುಂಬಾಲು ಬಿದ್ದು ಕೋಕಗೊಂಡಿರುವ ಹುದ್ದೆಯಲ್ಲಿ‌ ಮುಂದುವರೆಯಲು ಕಸರತ್ತು ನಡೆಸಿದ್ದನ್ನು ನೋಡಿದರೆ ಯುವ ಸಬಲೀಕರಣ ಮತ್ತು ಕ್ರೀಡೆ ಹೇಗಿದೆ ಎಂಬುದು ಸ್ಪಷ್ಟವಾಗುತ್ತಿದೆ.

Anant S. Karkal
ವೀಕ್ಷಣೆ 2008

ಜನಪ್ರಿಯ ಸುದ್ದಿಗಳು

ಕಚೇರಿ ವಿಳಾಸ

Gadag - 582101

ಫೋನ್ ನಂ.

+91 9448302002

ಇಮೇಲ್ ಐಡಿ

asknewskannada@gmail.com

ಸೋಶಿಯಲ್ ಮೀಡಿಯಾ ಲಿಂಕ್ಸ್

© ASK News Kannada. All Rights Reserved. Designed by AGScurate IT Solutions LLP