ಹುಬ್ಬಳ್ಳಿ, ಎ.14 : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ( K U W J) ರಾಜ್ಯ ಕಾರ್ಯಕಾರಿ ಸಮಿತಿಗೆ ಹುಬ್ಬಳ್ಳಿಯ ಹಿರಿಯ ಪತ್ರಕರ್ತ ಗಣಪತಿ ಗಂಗೊಳ್ಳಿ ನಾಮ ನಿರ್ದೇಶನಗೊಂಡಿದ್ದಾರೆಂದು ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ತಿಳಿಸಿದ್ದಾರೆ. ದಿ. 12ರಂದು ಬೀದರದಲ್ಲಿ ನಡೆದ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ರಾಜ್ಯ ಅಧ್ಯಕ್ಷರಾದ ಶಿವಾನಂದ ತಗಡೂರ ಅವರು ಗಂಗೊಳ್ಳಿ ಅವರನ್ನು ನಾಮನಿರ್ದೇಶನಗೊಳಿಸಿ ಆದೇಶ ನೀಡಿದ್ದಾರೆ. ಹುಬ್ಬಳ್ಳಿ ಸಂಜೆ ದಿನಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾಗಿರುವ ಗಂಗೊಳ್ಳಿಯವರು ಈ ಹಿಂದೆ ಧಾರವಾಡ ಜಿಲ್ಲಾ ಪತ್ರಕರ್ತ ಸಂಘದ ಅಧ್ಯಕ್ಷರಾಗಿ ಎರಡು ಅವಧಿ ಹಾಗೂ ರಾಜ್ಯ ಸಮಿತಿ ಸದಸ್ಯರಾಗಿ ಒಂದು ಅವಧಿ ಕಾರ್ಯ ನಿರ್ವಹಿಸಿ ಸಂಘದ ಬಲವರ್ಧನೆಗೆ ತಮ್ಮದೆಯಾದ ಕೊಡುಗೆ ನೀಡಿದ್ದಾರೆ. ಪ್ರಸ್ತುತ ರಾಜ್ಯ ಮಾಧ್ಯಮ ಮಾನ್ಯತಾ ಸಮಿತಿಯ ಸದಸ್ಯರಾಗಿ ಕಾರ್ಯ ನಿರ್ವಹಿಸುತ್ತಿರುವುದು ಹೆಮ್ಮೆ ವಿಷಯವಾಗಿದೆ. ಗಣಪತಿ ಗಂಗೊಳ್ಳಿಯವರ ಆಯ್ಕೆಗೆ ಅವರ ಪತ್ರಕರ್ತ ಅಭಿಮಾನಿ ಬಳಗವು ಹರ್ಷ ವ್ಯಕ್ತಪಡಿಸುವ ಜೊತೆಗೆ ಗಣಪತಿ ಗಂಗೊಳ್ಳಿಯವರನ್ನು ಅಭಿನಂದಿಸಿದ್ದಾರೆ.
© ASK News Kannada. All Rights Reserved. Designed by AGScurate IT Solutions LLP