ask-banner
ad-banner
ರಾಜ್ಯ 2026-04-16

ಶೇರ್ ಮಾಡಿ  

*ಗದಗ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾಗಿ ಓಂಪ್ರಕಾಶ್ ಜಿ. ಅಧಿಕಾರ ಸ್ವೀಕಾರ..* *ಇಲಾಖೆಗೆ ಸಂಬಂಧಿಸಿದ ಮಾಹಿತಿ ಹಂಚಿಕೊಳ್ಳಲು ಸುತ್ತೋಲೆ..!*

ಗದಗ, ಎ.16 : ಗದಗ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾಗಿ ಓಂಪ್ರಕಾಶ್ ಜಿ. ಅಧಿಕಾರ ಸ್ವೀಕರಿಸಿದ್ದಾರೆ. ಅಧಿಕಾರ ಸ್ವೀಕರಿಸಿದ ಬಳಿಕ ಆಡಳಿತ ಸುಧಾರಣೆಯತ್ತ ಚಿತ್ತ ಹರಿಸಿದ ನೂತನ ಸ.ನಿರ್ದೇಶಕ ಓಂಪ್ರಕಾಶ್ ತಮ್ಮ ಇಲಾಖೆಯ ಸಿಬ್ಬಂದಿಗಳೊಂದಿಗೆ ಸಭೆ ನಡೆಸಿ ಇಲಾಖೆಯ ಗೌರವಕ್ಕೆ ದಕ್ಕೆ ತರದಂತೆ ಸಿಬ್ಬಂದಿಗಳು ಗಮನಹರಿಸಬೇಕೆಂದು ಎಚ್ಚರಿಕೆ ನೀಡಿದ್ದಾಗಿ ತಿಳಿದು ಬಂದಿದೆ. ದಿನಾಂಕ 15-5-2026ರಂದು ಉಲ್ಲೇಖಿತ ಜ್ಞಾಪನಾ ಪತ್ರದನ್ವಯ ಓಂಪ್ರಕಾಶ್ ಜಿ, ಕೆ.ಜಿ.ಎಸ್. ಆದ ನಾನು ದಿ:15-04-2026 ರಂದು ಸುತ್ತೊಲೆ ಹೊರಡಿಸಿರುವ ಓಂಪ್ರಕಾಶ್ ಅವರು ಪೂರ್ವಾಹ್ನ ಗದಗ ಜಿಲ್ಲೆಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರ ಕಾರ್ಯಭಾರವನ್ನು ವಹಿಸಿಕೊಂಡಿದ್ದು ನನ್ನ ವೈಯಕ್ತಿಕ ಗಮನಕ್ಕೆ ತರಬಯಸುವ ಸರ್ಕಾರಿ ಹಾಗೂ ಅರೆಸರ್ಕಾರಿ, ರಹಸ್ಯ ಪತ್ರಗಳನ್ನು ಓಂಪ್ರಕಾಶ್ ಜಿ, ಕೆ.ಜಿ.ಎಸ್ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ,ಕೆ.ಹೆಚ್ ಪಾಟೀಲ್ ಕ್ರೀಡಾಂಗಣ, 580101 ಕಛೇರಿ ದೂರವಾಣಿ ಸಂಖ್ಯೆ: 08372-238345 ಮೊಬೈಲ್ ನಂ : 7019967699 ಈ ವಿಳಾಸಕ್ಕೆ ಕಳುಹಿಸಿಕೊಡಲು ಸೂಚಿಸಿದ್ದು ವಿಶೇಷ ಗಮನ ಸೆಳೆದಿದೆ. ನೂತನ ಸಹಾಯಕ ನಿರ್ದೇಶಕರನ್ನು ಬಾರದಂತೆ ನೋಡಿಕೊಳ್ಳುವ ಯತ್ನ ನಡೆಸಿದ್ದು ವಿಫಲವಾಗಿದೆ ಎಂಬ ಚರ್ಚೆಯ ಜೊತೆಗೆ ಮೂರ್ನಾಲ್ಕು ದಿನದಲ್ಲಿ ಮತ್ತೆ ಬದಲಾವಣೆ ಆಗುವ ಎಲ್ಲ ವ್ಯವಸ್ಥೆ ಆಗಿದೆ ಎಂಬ ಚರ್ಚೆಗಳು ನಡೆಯುತ್ತಿವೆ. ಒಟ್ಟಾರೆ ಇಲಾಖೆಯಿಂದ ಗದಗ ಜಿಲ್ಲೆಯ ಯುವಕರ ಸಬಲೀಕರಣ ಆಗಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಆಡಳಿತ ವ್ಯವಸ್ಥೆಯಲ್ಲಿ ಇರುವವರ ಕ್ರೀಡೆಗೆ ಸಬಲೀಕರಣ ಸಿಕ್ಕಿದೆ ಎಂಬುದನ್ನು ಅಲ್ಲಗಳೆಯಲಾಗದು.

Anant S. Karkal
ವೀಕ್ಷಣೆ 998

ಜನಪ್ರಿಯ ಸುದ್ದಿಗಳು

ಕಚೇರಿ ವಿಳಾಸ

Gadag - 582101

ಫೋನ್ ನಂ.

+91 9448302002

ಇಮೇಲ್ ಐಡಿ

asknewskannada@gmail.com

ಸೋಶಿಯಲ್ ಮೀಡಿಯಾ ಲಿಂಕ್ಸ್

© ASK News Kannada. All Rights Reserved. Designed by AGScurate IT Solutions LLP